ಅಕ್ಟೋಬರ್ 31, 2003, ಅಂದು ಅಮೇರಿಕಾದ ಟನೇಲ್ಸ ಬೀಚ್ ನ ಹವಾಯ್ ನ (Tunnels Beach Hawaii) ರಕ್ಕಸ ಸಮುದ್ರದ ಅಲೆಗೆ ಸೆಡ್ಡು ಹೊಡೆದು ಸಪಿ೯ಂಗ್ (surfing) ಮಾಡುತ್ತಿರುವಾಗ ಬರೋಬ್ಬರಿ 14 ಪೂಟ್ ಉದ್ದದ ಟೈಗರ್ ಸಾಕ್೯, ಕೇವಲ 13 ವಷ೯ದ ಪುಟ್ಟ ಬಾಲಕಿಯ ಮೊಣಕೈ ಅನ್ನು ತಿಂದು ತೇಗಿತ್ತು. ಆದರೆ ಅವಳು ಮಹಾನ್ ಗಟ್ಟಿಗಿತ್ತಿ. ಎಡ ಮೋಣ ಕೈ ತುಂಡಾಗಿ ಬಿದ್ದು ರಕ್ತ ಬಸಿಯುತಿದ್ದರೂ ದಡ ಸೇರಿಯೆ ಬಿಟ್ಟಳು. ಆ ಗಟ್ಟಿಗಿತ್ತಿ , ಸಾಹಸಿ, ಧೈಯ೯ಶಾಲಿ ಹೆಣ್ಣು ಬೇರೆ ಯಾರೂ ಅಲ್ಲ.

ಈಗಲೂ ಒಂದೆ ಕೈಯಲ್ಲಿ ಸಕ೯ಸ್ ಮಾಡುತ್ತಾ ಲೀಲಾಜಾಲವಾಗಿ ಸಪಿ೯ಂಗ್ ಮಾಡುತ್ತಿರುವ ಅಮೇರಿಕಾದ ಜನಪ್ರಿಯ ಮಹಿಳಾ ಸಪ೯ರ್ ಬೇಥನಿ ಮೆಲಾನಿ ಹ್ಯಾಮಿಲ್ಟನ್ (Bethany Meilani Hamilton).

ಮೊಣಕೈ ಕಳೆದುಕೊಂಡು ಸಮುದ್ರದಲ್ಲಿ ಬಿದ್ದ ಅವಳನ್ನು ಕಾಪಾಡಿ ದವರು ಅಲ್ಲೆ ಹತ್ತಿರದಲ್ಲಿ ತನ್ನ ಮಕ್ಕಳೊಂದಿಗೆ ಸಪಿ೯ಂಗ್ ಮಾಡುತಿದ್ದ ಹೋಲ್ಟ್ ಬ್ಲಾಚಡ್೯ ಎಂಬುವವರು. ಬೇಥನಿ ಹ್ಯಾಮಿಲ್ಟನ ಮೊದಲು ಕಿರುಚಿದಾಗ ಸುಮ್ಮನೆ ಜೋಕ್ ಮಾಡುತಿದ್ದಾಳೆ ಅಂತ ಅಂದುಕೊಂಡಿದ್ದರಂತೆ.

ನಂತರ ಸಾಕ್೯ ದಾಳಿಗೆ ಒಳಗಾಗಿರುವುದನ್ನು ತಿಳಿದು ಅವಳ ಹತ್ತಿರ ದಾವಿಸುವಷ್ಟರಲ್ಲಿ ಅವಳ ಒಂದು ಕೈ ಭಯಾನಕ ಸಾಕ್೯ನ ಉದರ ಸೇರಿತ್ತು. ನಂತರ ಹೇಗೊ ದಡಕ್ಕೆ ತಂದು ತಾಪಡತೋಪ ಅವಳನ್ನು ಹತ್ತಿರದ ವಿಲಕಾಕ್ಸ್ ಮೆಮೋರಿಯಲ್ ಆಸ್ಪತ್ರೆಗೆ ಸೇರಿಸಲಾಯಿತು. ದೇಹದಲ್ಲಿನ ಬಹಳಷ್ಟು ರಕ್ತ ಸಮುದ್ರ ಸೇರಿದ ಕಾರಣ ಹೈಪೊವುಲಿಮಿಕ್ ಶಾಕ್ ಗೆ ಓಳಗಾಗಿದ್ದಳು.

ಕಾಕತಾಳಿಯವೆಂದರೆ ಅದೇ ಸಂದಭ೯ದಲ್ಲಿ ಬೇಥನಿ ಹ್ಯಾಮಿಲ್ಟನ್ ಳ ತಂದೆ ಟಾಮ್ ಹೇಮಿಲ್ಟನ್ ಕೂಡ ವೈದ್ಯ ಡೇವಿಡ್ ರೋವೇನೆಸ್ಕಿ ಯವರಿಂದ ಮೊಣಕಾಲು ನೋವಿಗೆ ಚಿಕಿತ್ಸೆ ಪಡೆಯುತಿದ್ದರು. ತುತಾ೯ಗಿ ಯಾವದೊ ಅಪಘಾತ ಪ್ರಕರಣ ಆಸ್ಪತ್ರೆಗೆ ದಾಖಲಾದ ಕಾರಣ ಸ್ವಲ್ಪ ಹೊತ್ತು ಕಾಯುವಂತೆ ತಿಳಿಸಿ ಚಿಕಿತ್ಸೆ ನೀಡಲು ಜರೂರಾಗಿ ಅಲ್ಲಿಂದ ಪಕ್ಕದ ಕೊಠಡಿಗೆ ತೆರಳಿದರು. ಆಗಲೆ ಟಾಮ್ ಹೇಮಿಲ್ಟನ್ ಗೆ ತಿಳಿದದ್ದು, ತನ್ನ ಮಗಳು ಎಡ ಮೋಣ ಕೈ ಕಳೆದುಕೊಂಡು ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತಿದ್ದವಳು ಅದೆ ಆಸ್ಪತ್ರೆಗೆ ದಾಖಲಾಗಿದ್ದಾಳೆ ಎಂದು.

ಹಲವು ಗಂಟೆಗಳ ಚಿಕಿತ್ಸೆ ನಂತರ ಬೇಥನಿ ಹ್ಯಾಮಿಲ್ಟನ್ ಎಚ್ಚರಗೊಂಡಳು. ಆಗ ಅವಳು ವೈದ್ಯ ಡೇವಿಡ್ ರೋವೇನೆಸ್ಕಿ ರವರನ್ನು ಕೇಳಿದ ಮೊದಲ ಪ್ರಶ್ನೆ, Can I surf again? ಎಂದು. ಅಂತ ಸನ್ನಿವೇಶದಲ್ಲಿಯೂ ಹೀಗೆ ಕೇಳುತ್ತಾಳೆಂದರೆ ಆ ಪುಟ್ಟ ಮಗುವಿನ ಗುಂಡಿಗೆ ಎಂಥದ್ದಿರಬೆಕು? ಆದರೆ ಇದನ್ನು ಕೇಳಿದ ವೈದ್ಯರೆ ಒಂದು ಕ್ಷಣ ತಬ್ಬಿಬ್ಬಾಗಿದ್ದರು,

ಎಡ ಮೊಣ ಕೈ ಕಳೆದುಕೊಂಡ ನಂತರ ಅವಳ ಸಪಿ೯ಂಗ್ ಜೀವನ ಕೊನೆಯಾಯಿತು ಎಂದು ಅಂದುಕೊಂಡವರೆ ಜಾಸ್ತಿ. ಆದರೆ ಎಡಗೈ ಇಲ್ಲದಿದ್ದರೆನಂತೆ. ನನ್ನ ಎರಡು ಕಾಲುಗಳು ಸರಿ ಇವೆಯಲ್ಲ. ಕೇವಲ ಎಡಗೈ ಕಳೆದುಕೊಂಡಿರುವುದು ನನ್ನ ಜೀವನದ ಗುರಿಗೆ ತೊಡಕಾಗಿ ನಿಲ್ಲಬಾರದು ಎಂದುಕೊಂಡು ತಡಮಾಡದೆ ಸಮುದ್ರದತ್ತ ತನ್ನ ಸವಾರಿಯನ್ನು ಮುಂದುವರಿಸಿಯೆ ಬಿಟ್ಟಳು.

ಮೊಣ ಕೈ ಕಳೆದುಕೊಂಡ ಕೇವಲ ಒಂದು ತಿಂಗಳಲ್ಲಿ ಅಲೆಗಳಿಗೆ ಸೆಡ್ಡು ಹೊಡೆದು ಸಪಿ೯ಗ್ ಬೋಡ್೯ ಎರಿ ನಿಂತ ಅವಳ ಧೈರ್ಯ, ಸಾಹಸವನ್ನು ಮೆಚ್ಚಲೆ ಬೇಕು. . ಮನೆ ಎದುರಿನ ಮೂರಡಿ ಬಾವಿಯಲ್ಲೆ ತಲೆ ಕೆಳಗಾಗಿ ಬಿದ್ದರೆ ಎಂತಹ ಈಜುಗಾರನಾದರೂ ಒಂದು ಗುಟಕಾದರೂ ನೀರು ಕುಡಿದು ಎದುಸಿರು ಬಿಡುತ್ತಾರೆ. ಮೊಣಕೈ ಕಳೆದುಕೊಂಡು ಇನ್ನೂ ಪೂತಿ೯ ತಿಂಗಳೂ ಕಳೆದಿಲ್ಲ. ಗಾಯ ಇನ್ನೂ ಸರಿಯಾಗಿ ಮಾಸಿಲ್ಲ.

ಆಳ ಸಮುದ್ರಕ್ಕೆ ಇಳಿದು ಭಯಾನಕ ಅಲೆಯ ಮೇಲೆ ತೇಲುತ್ತೆನೆಂದು ಈ ಪಾಟಿ ಹುಡುಗಾಟಕ್ಕಿಳಿದರೆ ಯಾವ ತಂದೆ ತಾಯಿ ಸುಮ್ಮನಿರಲು ಸಾದ್ಯ ಹೇಳಿ. ತಂದೆ -ತಾಯಿ ಕೂಡ ಬೇಡ ಎಂದು ಗೋಗೆರೆದರು. ಖುದ್ದು ವೈದ್ಯರೆ ಇದು ಅಸಾಧ್ಯ ಎಂದು ಷರಾ ಬರೆದಿದ್ದರು. ಆದರೆ ಅವಳು ಮಾತ್ರ ಇದ್ಯಾವುದನ್ನು ಕೇಳುವ ಸ್ಥಿತಿ ಯಲ್ಲಿ ಇರಲಿಲ್ಲ. ಅಂದು ಅವಳು ತನ್ನ ವಿಧಿಯೊಂದಿಗೆ ಜಿದ್ದಿಗೆ ಬಿದ್ದಿದ್ದಳು. ಜೀವನದಲ್ಲಿ ಬಹು ದೊಡ್ಡ ರಿಸ್ಕ್ ತೆಗೆದುಕೊಂಡಿದ್ದಳು.

ಸಪಿ೯ಂಗ್ ಜಗತ್ತಿನಲ್ಲಿ ಅವಳದು ಯುದ್ದ ಸ್ವರೂಪಿ ಹೋರಾಟ. ಎಡ ಮೋಣ ಕೈ ಇಲ್ಲದ ಕಾರಣ ದೇಹದ ಎಡಬಾಗದ ತೂಕ ಕಡಿಮೆಯಾಗಿ ಸಪಿ೯ಗ್ ಬೋಡ್೯ ಮೇಲೆ ನಿಂತು ಬ್ಯಾಲೆನ್ಸ್ ಮಾಡುವುದು ಪ್ರಾರಂಭದಲ್ಲಿ ತುಂಬ ಕಷ್ಟವಾಯಿತಂತೆ. ನಂತರ ಕಠಿಣ ಪರಿಶ್ರಮದಿಂದ, ಛಲ ಬಿಡದೆ ಪ್ರಯತ್ನಿಸಿ ಬೋಡ್೯ ಮೇಲೆ ನಿಯಂತ್ರಣ ಸಾಧಿಸಿದಳು. ಪ್ರಾರಂಭದಲ್ಲಿ ಅಗಲವಾದ ದಪ್ಪನೆಯ ಬೋರ್ಡ್ ಮೇಲೆ ಸಪಿ೯ಂಗ್ ಮಾಡುತಿದ್ದಳು.

ಈಗ ಎಲ್ಲ ಸಪ೯ರ್ ಗಳು ಬಳಸುವ ಮಾಮೂಲಿ ಬೋರ್ಡ್ ನ್ನೆ ಬಳಸುತ್ತಾಳೆ. Good efforts should not go in vain ಎಂಬ ಮಾತಿನಂತೆ, ಎದುರಾದ ತೊಂದರೆಯನ್ನು ಮೆಟ್ಟಿನಿಂತು ಸಪಿ೯ಂಗ್ ಜಗತ್ತಿನಲ್ಲಿ ಮೆರೆದಳು. ಒಂದು ಕೈ ಇಲ್ಲದೆ ಹೋದರೂ ವಿಶ್ವ ಶ್ರೇಷ್ಟ ಸಪ೯ರ್ ಎದುರು ಸರಿಸಾಟಿಯಾಗಿ ಸಪಿ೯ಂಗ್ ಮಾಡುತ್ತಾಳೆ.

ಸಪಿ೯ಂಗ್ ನಿಂದ ಮಾತ್ರ ಎಂದೂ ಅವಳು ಹಿಂದೆ ಸರಿಯಲಿಲ್ಲ. ಸಪಿ೯ಂಗ್ ನಲ್ಲಿ ನಂತರ ದಾಪುಗಾಲಿಟ್ಟಳು ಎಂದೆ ಹೇಳಬೇಕು. 2012 ರಲ್ಲಿ ಪ್ರತಿಷ್ಠಿತ rip curl cup ನಲ್ಲಿ ಸ್ಪಧಿ೯ಸಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಳು.

9 ನೇ ವಷ೯ದಲ್ಲಿರುವಾಗಲೆ ಹಲವು ಪ್ರಶಸ್ತಿ ಜಯಿಸಿ ಪ್ರತಿಷ್ಠಿತ ರಿಪ್ ಕಲ್೯ ಮತ್ತು ಟಿಮ್ ಕರೋಲ್ ಸಪ೯ಬೋಡ್೯ ಕಂಪನಿ ಪ್ರಾಯೋಜಕತ್ವ ಪಡೆದಿರುವ ಬೇಥನಿ ಹ್ಯಾಮಿಲ್ಟನ, ಮೊಣಕೈ ಕಳೆದುಕೊಂಡು ಹಾಸಿಗೆಯಲ್ಲಿ ರುವಾಗ ವಾಣಿಜ್ಯ ಪ್ರಾಯೋಜಕತ್ವ ಕಳೆದುಕೊಂಡು ಸಾಧನೆಗೆ ತೊಂದರೆಯಾಗುವುದೆಂಬ ಆತಂಕ ಕಾಡಿತ್ತಂತೆ. ಆದರೆ ನಂತರ ನಡೆದಿದ್ದೆ ಬೇರೆ. ವಿಧಿಗೆ ಸೆಡ್ಡು ಹೊಡೆದು ಸಪಿ೯ಂಗ್ ಬೋಡ್೯ ಎರಿದ್ದೆ ತಡ, ಅವಳು ವಿಶ್ವ ಪ್ರಸಿದ್ದಳಾದಳು. ಜೀವನದಲ್ಲಿ ಮತ್ತೆ ಭಜ೯ರಿಯಾಗಿ ಸಪಿ೯ಂಗ್ ಲೋಕಕ್ಕೆ ಹಿಂದುರಿಗಿರುವುದನ್ನು ಕಂಡು ಹಲವರು ದಂಗಾದರು. ಮತ್ತೆ ಕಡಲಿನ ಸಾಟಿಗಿಳಿದ ಕೆಲವರು ಇವಳನ್ನು ಕಂಡು ಹುಚ್ಚಿ ಅಂದರು. ಆದರೆ ಅವಳು ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಹುಚ್ಚು ಸಾಹಸಕ್ಕೆ ಕೈಹಾಕಿದ್ದಳು.

ಸಪಿ೯ಂಗ್ ಎಂದರೆ ಸಮುದ್ರದ ಅಲೆಯಲ್ಲಿ ಬೋಡ್೯ ಮೇಲೆ ನಿಂತು ಸಾಗುವುದಾಗಿದೆ. ರಕ್ಕಸ ಅಲೆಗಳ ಮೇಲೆ ಮಾಡುವ ಸಪಿ೯ಂಗ್ ಸಕ೯ಸ್ ನೋಡಿದಷ್ಟು ಸುಲಭವಲ್ಲ. ಹಾಗೇಯೆ Any surfer is not alone in the Sea ಎಂಬ ಮಾತು ಸಪಿ೯ಂಗ್ ಜಗತ್ತಿನಲ್ಲಿ ಈಗಲೂ ಚಾಲ್ತಿಯಲ್ಲಿದೆ. ಯಾಕೆಂದರೆ ಶಾಕ್೯ ನಂತಹ ಹಲವು ಕ್ರೂರ ಜಲಚರಗಳು ಸಪ೯ರ್ ಗಳ ಮೇಲೆ ದಾಳಿ ಮಾಡಲು ಸದಾ ಹವಣಿಸುತ್ತಿರುತ್ತದೆ.

ಅದೆಷ್ಟು ರಿಸ್ಕ್ ಎಂದರೆ, ಸಪಿ೯ಂಗ್ ಮಾಡುವಾಗ ಪ್ರಸಿದ್ದ ಸಪ೯ರ್ ಗಳಾದ ಮಾಕ್೯ ಶೇಲ್ಡನ್ ಪೋ, ಸ್ಪ್ಯಾನಿಷ್ ನ ಸಪ್೯ರ್ ಒಸ್ಕರ್ ಸೆರ್ರಾ, ಡೋನಿ ಸೊಲೊಮನ್, ಮತ್ತು ಪೀಟರ್ ಡಾಲಿ ಯಂತ ಹಲವರು ಈ ಅಪಾಯಕಾರಿ ಸಪಿ೯ಂಗ್ ಹುಚ್ಚಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಹಾಗೇಯೆ ಸಪ೯ರ್ ಗಳಾದ ಮಾಕ್೯ ಮ್ಯಾಥ್ಯೂ, ಮಿಕ್ ಪಾನಿಂಗ್, ಜೋಲ್ ಪಾಕಿ೯ನ್ಸನ್ ನಂತಹ ಹಲವರು ತೀವ್ರವಾಗಿ ಗಾಯಗೊಂಡಿದ್ದು ಇದೆ.

ಎಷ್ಟೇ ಸಮುದ್ರದ ಆಳದಲ್ಲಿ ಬಿದ್ದರು ಈಜಿ ದಡ ಸೇರುವ ಚಾಕಚಕ್ಯತೆ ಸಪಿ೯ಂಗ್ ನಲ್ಲಿ ತೋಡಗಿದವರಿಗೆ ಇರಲೆ ಬೇಕು. ಹೀಗಿರುವಾಗ ಒಂದು ಕೈ ಕಳೆದುಕೊಂಡಿರುವ ಹ್ಯಾಮಿಲ್ಟನ್ ಗೆ ಇದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಆದರೂ ಇಂದು ಸಪಿ೯ಂಗ್ ನಲ್ಲಿ ತನ್ನದೇ ಆದ ಚಾಪನ್ನು ಅವಳು ಮೂಡಿಸಿದ್ದಾಳೆ.

ಒಂದೆ ಕೈಯಲ್ಲಿ ಕಡಲಿನಲ್ಲಿ ಸಕ೯ಸ್ ಮಾಡುತ್ತ ಹತ್ತು ಹಲವು ಪ್ರಶಸ್ತಿ ಜಯಿಸಿದಳು. 2008 ರಲ್ಲಿ ಎ. ಎಸ್. ಪಿ ವಲ್ಡ್ ಜೂನಿಯರ್ ಚಾಂಪಿಯನ್ ಆಗಿ ಹೊರಹುಮ್ಮಿದಳು. ಎನ್ ಎಸ್. ಎಸ್ ಎ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ ಗಳಿಸಿದಳು. 2017 ರಲ್ಲಿ ಸಪ೯ರ್ ಹಾಲ್ ಆಪ್ ಪೇಮ್ ಗೆ ಹ್ಯಾಮಿಲ್ಟನ್ ಹೆಸರು ಸೇರಲ್ಪಟ್ಟಿತು. . 2016 ರಲ್ಲಿ 6 ಬಾರಿ ವಿಶ್ವ ಚಾಂಪಿಯನ್ ಪಟ್ಟಿಯಲ್ಲಿದ್ದವರಿಗೆ ಸೋಲುಣಿಸಿದಳು.

ಒಂದು ಕೈ ಕಳೆದುಕೊಂಡು ಯಾವುದೆ ವೈಕಲ್ಯತೆ ಹೊಂದಿರದ ಸಧೃಡ ಕ್ರೀಡಾಪಟುಗಳೊಂದಿಗೆ ಸ್ಪಧಿ೯ಸಿ ಗೆಲುವು ಸಾಧಿಸುವುದು ಸಾಮಾನ್ಯ ಸಾಧನೆಯಲ್ಲ. ಎಡರು ತೊಡರುಗಳ ನಡುವೆಯು ಸಪಿ೯ಂಗ್ ಗೆ ಭಜ೯ರಿಯಾಗಿ ವಾಪಸ್ಸಾದ (Come back) ಕಾರಣ ಪ್ರತಿಷ್ಠಿತ ಇ. ಎಸ್. ಪಿ. ವೈ ಅವಾಡ್೯ ಕೂಡ ದೊರೆಯಿತು.

ಅವಳ ಜೀವನದ ಹೋರಾಟದ ವಿವರವನ್ನು ಒಳಗೊಂಡ ಸೋಲ್ ಸಪ೯ರ್ ಹೆಸರಿನ ಅವಳ ಕೃತಿ, ಸಿನಿಮಾ ರೂಪದಲ್ಲಿ ತಯಾರಾಗಿ ತುಂಬಾ ಜನಪ್ರಿಯ ಗೊಂಡಿದೆ. ರೈಸ್ ಅಬೌ, ಆಸ್ಕ್ ಬೇಥನಿ ಹೀಗೆ ಹಲವು ಕ್ರತಿಗಳನ್ನು ರಚಿಸುವ ಮೂಲಕ ಹಲವರಿಗೆ ಪ್ರೇರಣೆ ಯಾದಳು. ಪ್ರೇಡ್ಸ್ ಆಪ್ ಬೇಥನಿ ಹೆಸರಿನ ಸಂಸ್ಥೆ ಮೂಲಕ ಸಾಕ್೯ ದಾಳಿಗೆ ತುತ್ತಾದವರಿಗೆ, ಅಂಗವಿಕಲರಿಗೆ ನೆರವಾಗುವ ಮೂಲಕ ಸಮಾಜ ಸೇವೆಯಲ್ಲಿ ಸಹ ತನ್ನನ್ನು ತೊಡಗಿಸಿಕೊಂಡಿದ್ದಾಳೆ.

ಅಮೇರಿಕಾದ ಹವಾಯ್ ರಾಜ್ಯದ ಲಿಹುವೇಯಲ್ಲಿ ಪೆ. 8 , 1990 ರಲ್ಲಿ ಜನಿಸಿದಳು. ತನ್ನ 4 ನೇ ವಯಸ್ಸಿಗೆ ಸಪಿ೯ಂಗ್ ಬೋಡ೯ ಎರಿದ್ದಳು. ಅಡಮ್ ಡೇರಿಕ್ ಎಂಬುವವರನ್ನು ಮದುವೆಯಾಗಿರುವ ಹ್ಯಾಮಿಲ್ಟನ್ ಳದು ಮೂರು ಗಂಡು ಮಕ್ಕಳನ್ನೋಳಗೊಂಡ ಸುಂದರ ಸಂಸಾರ. ಆದರೆ ಸಪಿ೯ಂಗ್ ಸಹವಾಸವನ್ನು ಮಾತ್ರ ಇನ್ನೂ ಬಿಟ್ಟಿಲ್ಲ. 2022 ರಲ್ಲಿ ನಡೆದ ವಲ್ಡ್ ಸಪಿ೯ಂಗ್ ಲೀಗ್ ನಲ್ಲಿ ಈ ಹಿಂದೆ 7 ಬಾರಿ ವಿಶ್ವ ಚಾಂಪಿಯನ್ ಆಗಿ ಹೊರಹುಮ್ಮಿದ ಆಸ್ಟೇಲಿಯಾದ ಸ್ಟೇಪನಿ ಗಿಲ್ಮೋರ್ ಳು ಕೋವಿಡ್ ಗೆ ತುತ್ತಾಗಿ ಪಂದ್ಯಾವಳಿಯಿಂದ ಹೊರಬಿದ್ದ ಕಾರಣ ವೈಲ್ಡ್ ಕಾಡ್೯ ಎಂಟ್ರಿ ಪಡೆದು ಪಂದ್ಯಾವಳಿಯಲ್ಲಿ ಭಾಗವಹಿಸಿ ಮೆರಗು ಮೂಡಿಸಿದ ಹ್ಯಾಮಿಲ್ಟನ್, ಒಂದೆ ಕೈಯಲ್ಲಿ ಸಪಿ೯ಂಗ್ ಬೋಡ್೯ ಮೇಲೆ ಹೆಜ್ಜೆ ಹಾಕುತ್ತಾ ತನ್ನ ಸಾಗರ ಶಿಕಾರಿಯನ್ನು ಇನ್ನೂ ಮುಂದುವರಿಸುತ್ತಲೆ ಇದ್ದಾಳೆ.

#####

ಬರಹ: ಬಾಲಕೃಷ್ಣ ಎಂ ನಾಯ್ಕ ಚಿಕ್ಕೋಳ್ಳಿ. (Facebook post)