ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಉದ್ಯೋಗ ವ್ಯವಸ್ಥೆಯ ಸಂವಹನದ ಮೇಲೆ ಆಗಿರುವ ಪರಿಣಾಮಕ್ಕೆ ಪರಿಹಾರ ಉಪಾಯ ನೀಡುವ ನಾಗರೀಕರಿಗೆ ಕೇಂದ್ರ ಸರ್ಕಾರ ಬಂಪರ್ ಬಹುಮಾನ ಘೋಷಣೆ ಮಾಡಿದೆ.

ಜೂಮ್ ವಿಡಿಯೊ ಕಾನ್ಫರೆನ್ಸ್ ಆ್ಯಪ್ ಗೆ ಪರ್ಯಾಯವಾಗಿ ಹೊಸ ಆ್ಯಪ್ ಅಭಿವೃದ್ಧಿ ಪಡಿಸಿದರೆ ಕೇಂದ್ರ ಸರ್ಕಾರದಿಂದ ಒಂದು ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಣೆ ಆಗಿದೆ.

ಲಾಕ್​​ಡೌನ್​​ ಅವಧಿಯಲ್ಲಿ ಮನೆಯಲ್ಲಿ ಕೆಲಸ (ವರ್ಕ್ ಫ್ರಾಮ್ ಹೋಮ್) ಮಾಡುತ್ತಿದ್ದ ಜನರು ಸಹೋದ್ಯೋಗಿಗಳೊಂದಿಗೆ ಸಭೆ ನಡೆಸಲು ಜೂಮ್ ಆ್ಯಪ್ ಹೆಚ್ಚಾಗಿ ಬಳಸಲು ಶುರು ಮಾಡಿದ್ದರು. ಎಲ್ಲರೂ ಜೂಮ್ ಆ್ಯಪ್ ಮೂಲಕವೇ ವಿಡಿಯೋ ಕಾನ್ಪರೆನ್ಸ್​  ಮಾಡುತ್ತಿದ್ದರು.

ಆದರೆ, ಜೂಮ್ ಆ್ಯಪ್ ಅಷ್ಟೊಂದು ಸುರಕ್ಷಿತವಲ್ಲ. ಬಳಕೆದಾರರ ಮಾಹಿತಿ ಸೋರಿಕೆ ಆಗುತ್ತದೆ ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ. ಈಗ ಮೇಕ್​ ಇನ್​ ಇಂಡಿಯಾದ ಭಾಗವಾಗಿ ಜೂಮ್​ಗೆ ಪರ್ಯಾಯ ಹೊಸ ದೇಶೀಯ ಆ್ಯಪ್​​ ಹೊಂದಲು ಭಾರತ ಸರ್ಕಾರ ನಿರ್ಧರಿಸಿದೆ.

ಸೂಚಿಸಿದ ಮಾನದಂಡಗಳ ಪ್ರಕಾರ ತಂತ್ರಾಂಶ ನಿರ್ಮಿಸಿದರೆ ಒಂದು ಕೋಟಿ ರೂ. ಬಹುಮಾನ ಮತ್ತು ಪ್ರತಿ ವರ್ಷ ನಿರ್ವಹಣೆಗೆ 10 ಲಕ್ಷ ರೂ. ಕೊಡುವುದಾಗಿ ಹೇಳಿದೆ. ಆಸಕ್ತ ತಂಡಗಳು ಏಪ್ರಿಲ್ 30ರೊಳಗೆ ಹೆಸರು ನೊಂದಾಯಿಸಬೇಕು.

ಆಯ್ಕೆ ಹೇಗೆ ನಡೆಯುತ್ತದೆ:
ಹಂತ -1: ತಂಡಗಳು ತಮ್ಮ ಅತ್ಯಾಧುನಿಕ ವಿಚಾರಗಳನ್ನು ಪ್ರಸ್ತಾಪಿಸಬೇಕು. ಅದರಲ್ಲಿ ಮೊದಲ 10 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ಮೂಲಮಾದರಿಯನ್ನು ನಿರ್ಮಿಸಲು ಪ್ರತಿ ತಂಡಕ್ಕೆ 5 ಲಕ್ಷ ರೂ. ಕೊಡಲಾಗುತ್ತದೆ.

ಹಂತ -2: ನಿರ್ಮಿಸಿದ ಮೂಲಮಾದರಿಯನ್ನು ವಿಶೇಷ ತೀರ್ಪುಗಾರರಿಗೆ ಪ್ರಸ್ತುತಪಡಿಸಬೇಕು. ಅಂತಿಮ ಹಂತಕ್ಕಾಗಿ ಮೊದಲ 3 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ತಂತ್ರಾಂಶ ನಿರ್ಮಿಸಲು ಪ್ರತಿ ತಂಡವು 20 ಲಕ್ಷ ರೂ. ಹಣ ಪಡೆಯುತ್ತದೆ.

ಹಂತ-3: ತಂತ್ರಾಂಶ ರೂಪಿಸಿದವರಿಗೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರ ಪ್ರಮಾಣಪತ್ರದೊಂದಿಗೆ ಒಂದು ಕೋಟಿ ರೂ. ಮತ್ತು ಕಾರ್ಯಾಚರಣೆ ಹಾಗೂ ನಿರ್ವಹಣೆಗಾಗಿ ವರ್ಷಕ್ಕೆ 10 ಲಕ್ಷ ರೂ ನೀಡಲಾಗುತ್ತದೆ.

ಭಾಗವಹಿಸುವವರು ನೇರ ಲಿಂಕ್ ಮೇಲೆ ಕ್ಲಿಕ್ ಮಾಡಿ: Click Hear