ಗ್ರಾಮೀಣಾಭಿವೃದ್ಧಿ  ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ (ನರೇಗಾ) ಯೋಜನೆಯಡಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ತಾಂತ್ರಿಕ ಸಹಾಯಕರು ಹುದ್ದೆಗಳಿಗೆ ಸಿಬ್ಬಂದಿ ಸೇವೆ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ನರೇಗಾ ಅರಣ್ಯೀಕರಣ, ಕೃಷಿ, ತೋಟಗಾರಿಕೆ, ರೇಷ್ಮೆ ವಿಭಾಗದಲ್ಲಿ ವಿವಿಧ ಜಿಲ್ಲೆಗಳಲ್ಲಿ ತಾಂತ್ರಿಕ ಸಹಾಯಕರನ್ನು ಗುತ್ತಿಗೆ ಆಧಾರದ ಮೇಲೆ ನಿಯೋಜಿಸಿಕೊಳ್ಳಲಾಗುತ್ತಿದೆ. 21 ವರ್ಷದಿಂದ 40 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಪ್ರತೀ ಜಿಲ್ಲಾವಾರು ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ.

ಹುದ್ದೆ ವಿವರ:
ಅರಣ್ಯೀಕರಣ ತಾಂತ್ರಿಕ ಸಹಾಯಕರು- 125
ಕೃಷಿ, ತೋಟಗಾರಿಕೆ, ರೇಷ್ಮೆ ತಾಂತ್ರಿಕ ಸಹಾಯಕರು- 282
ಒಟ್ಟೂ 407

ವಿದ್ಯಾರ್ಹತೆ:
ಅರಣ್ಯೀಕರಣ ತಾಂತ್ರಿಕ ಸಹಾಯಕರು- ಬಿಎಸ್ ಸಿ (ಫಾರೆಸ್ಟ್ರಿ) ಅಥವಾ ಎಂಎಸ್ ಸಿ (ಫಾರೆಸ್ಟ್ರಿ) ಮತ್ತು ಅನುಭವ.
ಕೃಷಿ, ತೋಟಗಾರಿಕೆ, ರೇಷ್ಮೆ ತಾಂತ್ರಿಕ ಸಹಾಯಕರು- ಬಿಎಸ್ ಸಿ (ಕೃಷಿ, ತೋಟಗಾರಿಕೆ, ರೇಷ್ಮೆ, ಡೈರಿ) ಅಥವಾ ಎಂಎಸ್ ಸಿ (ಕೃಷಿ, ತೋಟಗಾರಿಕೆ, ರೇಷ್ಮೆ) ಮತ್ತು ಅನುಭವ.

ವೇತನ ಮತ್ತು ರಜೆ:
ತಿಂಗಳಿಗೆ 22 ಸಾವಿರ ರೂ. ಮತ್ತು ಪ್ರತೀ ಕಿ.ಮೀ.ಗೆ 5 ರೂ. ನಂತೆ ತಿಂಗಳಿಗೆ ಗರಿಷ್ಠ 1500 ರೂ. ಪ್ರಯಾಣ ಭತ್ಯೆ.
ಗುತ್ತಿಗೆ 11 ತಿಂಗಳ ಅವಧಿಯಾಗಿದೆ. ನಂತರ ಕಾರ್ಯಕ್ಷಮತೆ ಆಧರಿಸಿ ಮುಂದುವರಿಸಲಾಗುತ್ತದೆ. ವರ್ಷಕ್ಕೆ 12 ದಿನಗಳ ಸಾಂದರ್ಭಿಕ ರಜೆ ಇರುತ್ತದೆ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ- 20-4-2020
ಅರ್ಜಿ ಸಲ್ಲಿಸಲು ಕೊನೆ ದಿನಾಂಕ- 15-5-2020

ಆಯ್ಕೆ ಹೇಗೆ?
ಅಭ್ಯರ್ಥಿಗಳ ಆಯ್ಕೆಗೆ ಲಿಖಿತ ಪರೀಕ್ಷೆ, ನೇರ ಸಂದರ್ಶನ ಇರುವುದಿಲ್ಲ. ಮೆರಿಟ್ ಆಧಾರದ ಮೇಲೆ ಆಯ್ಕೆ ನಡೆಯಲಿದೆ. ಅಭ್ಯರ್ಥಿಗಳು ಸೇವೆ ಮಾಡಲು ಬಯಸುವ ಮೂರು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಮೆರಿಟ್ ಪಟ್ಟಿಯನ್ನು ಜಿಲ್ಲಾವಾರು ಸಿದ್ಧಪಡಿಸಲಾಗುತ್ತದೆ. ಅಭ್ಯರ್ಥಿಯ ಪ್ರಥಮ ಆದ್ಯತೆಯ ಜಿಲ್ಲೆಗೆ ಮೊದಲ ಅವಕಾಶ ನೀಡಲಾಗುತ್ತದೆ. ದಾಖಲಾತಿ ಪರಿಶೀಲನೆ ದಿನಾಂಕವನ್ನು ಅಭ್ಯರ್ಥಿಗಳಿಗೆ ಇ-ಮೇಲ್ ಅಥವಾ ವೆಬ್ ಸೈಟ್ ಮೂಲಕ ತಿಳಿಸಲಾಗುತ್ತದೆ.

ನೇಮಕಾತಿ ಪ್ರಕಟಣೆ: http://end2endmgnrega.co.in

ನೇರ ಅರ್ಜಿ ಸಲ್ಲಿಕೆ ವಿಳಾಸ: Click Hear