ಭಾರತೀಯ ಕರಾವಳಿ ಪಡೆಯಲ್ಲಿ ಆಫೀಸರ್ ಆಗಲು ಉತ್ತಮ ಅವಕಾಶ ಇಲ್ಲಿದೆ. 2020ರ ಬ್ಯಾಚ್‍ಗೆ ಅಸಿಸ್ಟೆಂಟ್ ಕಮಾಣಡೆಂಟ್‍ಗಳ ನೇಮಕಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಹ ಪುರುಷರು ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಫೆಬ್ರುವರಿ 15 ಅರ್ಜಿ ಸಲ್ಲಿಸಲು ಕೊನೆ ದಿನ. ತಕ್ಷಣ ಅರ್ಜಿ ಸಲ್ಲಿಸಿ.
ಒಟ್ಟು 25 ಹುದ್ದೆಗಳು ಖಾಲಿ ಇವೆ. ಇವು ಗ್ರೂಪ್ ಎ ವೃಂದದ ಗೆಜೆಟೆಡ್ ಆಫೀಸರ್ ಹುದ್ದೆಗಳಾಗಿದ್ದು, ವಿಶೇಷ ನೇಮಕಾತಿಯಡಿಯಲ್ಲಿ ಎಸ್‍ಸಿ ಮತ್ತು ಎಸ್‍ಟಿ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹತೆಗಳೇನು?
ಅಭ್ಯರ್ಥಿಗಳು ಕನಿಷ್ಠ ಶೇಕಡಾ 55 ಅಂಕಗಳೊಂದಿಗೆ ಪದವಿ ತೇರ್ಗಡೆಯಾಗಿರಬೇಕು. ಭೌತಶಾಸ್ತ್ರ ಮತ್ತು ಗಣಿತದಲ್ಲಿ ಕನಿಷ್ಠ ಶೇಕಡಾ 55 ಅಂಕ ಪಡೆದಿರಬೇಕು. ಪುರುಷರು ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಈಗಾಗಲೇ ಅಂತಿಮ ಪದವಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವವರೂ ಅರ್ಜಿ ಸಲ್ಲಸಬಹುದು. ಅಭ್ಯರ್ಥಿಗಳು 1990ರ ಜುಲೈ 1 ಮತ್ತು 1999ರ ಜೂನ್ 30ರ ನಡುವೆ ಜನಿಸಿರಬೇಕು.
ಆಯ್ಕೆ ವಿಧಾನ ಹೇಗೆ?
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಅರ್ಹರನ್ನು ಮೆಂಟಲ್ ಎಬಿಲಿಟಿ ಟೆಸ್ಟ/ಕಾಗ್ನಿಟಿವ್ ಅಪ್ಟಿಟ್ಯೂಡ್ ಟೆಸ್ಟ ಮತ್ತು ಪಿಪಿ/ಡಿಟಿ ನಡೆಸಿ ಆಯ್ಕೆ ಮಾಡಲಾಗುತ್ತದೆ. ಈ ನೇಮಕ ಪ್ರಕ್ರಿಯೆ ಮಾರ್ಚ್ ಮೊದಲನೇ ವಾರದಲ್ಲಿ ನಡೆಯಲಿದೆ. ಮುಂಬಯಿ, ಚೆನ್ನೈ, ಕೋಲ್ಕತ್ತಾ ಮತ್ತು ನೋಯಿಡಾದಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ. ಅಭ್ಯಥಿಗಳಿಗೆ ಫೆಬ್ರವರಿ 25ರ ನಂತರ ಪ್ರವೇಶಪತ್ರಗಳು ಲಭ್ಯ ಇರಲಿವೆ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ