ರಾಗಿ ಬೆಳೆ ದಕ್ಷಿಣ ಕರ್ನಾಟಕದಲ್ಲಿ ಅತಿ ಹೆಚ್ಚು ಬಲಸುವ ಧಾನ್ಯ. ಹೆಚ್ಚು ಆರೋಗ್ಯವುಳ್ಳ ರಾಗಿಗೆ ಇತ್ತೀಚಿಗೆ ಬೇಡಿಕೆ ಹೆಚ್ಚುತ್ತಿದೆ. ಎಲ್ಲ ವರ್ಗದ, ಎಲ್ಲ ವಯಸ್ಸಿನವರಿಗೂ ಒಗ್ಗುವ ರಾಗಿ ದಿನೇ ದಿನೆ ಬೇಡಿಕೆ ಪಡೆದುಕೊಳ್ಳುತ್ತಿದೆ. ಹಾಗಾಗಿ ರಾಗಿ ಬೆಳೆಯುವವರ ಸಂಖ್ಯೆಯೂ ಹೆಚ್ಚುತ್ತಿದೆ.

ಆದರೆ, ರಾಗಿಯಲ್ಲಿನ ಯಾವ ತಳಿ ಎಷ್ಟು ಇಳುವರಿ ಕೊಡುತ್ತದೆ ಎನ್ನುವುದನ್ನು ತಿಳಿದರೆ ರೈತರು ಇಳುವರಿಯಲ್ಲೂ ಹೆಚ್ಚಿನ ಗಳಿಕೆ ಮಾಡಬಹುದು. ಅಂಥ ರಾಗಿಯಲ್ಲಿನ ವಿವಿಧ ತಳಿಗಳು, ಮಳೆಗೆ ಅನುಗುಣವಾಗಿ ಯಾವ ಬೆಳೆ ಬೆಳೆಯು ಬಹುದು ಎನ್ನುವ ಬಗ್ಗೆ ವಿಶ್ವವಿದ್ಯಾಲಯಗಳು ಗುರುತಿಸಿರುವ ತಳಿಗಳ ವಿಶ್ಲೇಷಣೆ ಇಲ್ಲಿದೆ.

ದೀರ್ಘಾವಧಿ ತಳಿಗಳು
ಎಂಆರ್-1, ಇಂಡಾಫ್-8, ಎಂ.ಆರ್-6, ಎಲ್-5
ಈ ತಳಿಗಳು ಜೂನ್ ಅಥವಾ ಜುಲೈನಲ್ಲಿ ಬಿತ್ತನೆ ಮಾಡಿದರೆ ಉತ್ತಮ. ಇವು 120ರಿಂದ 125 ದಿನಗಳಲ್ಲಿ ಕಟಾವಿಗೆ ಬರುತ್ತವೆ. ನೀರಾವಿ ಜಮೀನಾಗಿದ್ದರೆ ಒಂದು ಎಕರೆಗೆ 16 ರಿಂದ 18 ಟನ್ ಬೆಳೆ ಇಳುವರಿ ಕೊಡುತ್ತವೆ. 3.5 ಇಂದ 4 ಕ್ವಿಂಟಾಲ್ ಹುಲ್ಲು ದೊರೆಯುತ್ತದೆ. ಖುಷ್ಕಿ ಜಮೀನಿನಲ್ಲಿ 9-12 ಟನ್ ಬೆಳೆ ಮತ್ತು 2-3 ಕ್ವಿಂಟಾಲ್ ಹುಲ್ಲು ದೊರೆಯುತ್ತದೆ.

ಮಧ್ಯಮಾವಧಿ ತಳಿಗಳು
ಜೆಪಿಯು 28, ಜೆಪಿಯು 66
ತಳಿಯು 110ರಿಂದ 115 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಎಚ್.ಆರ್. 911 ಜುಲೈನಿಂದ ಆಗಸ್ಟ್ ನಲ್ಲಿ ಬಿತ್ತನೆ ಮಾಡಬಹುದು. 115ರಿಂದ 120 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಕೆಎಂಆರ್ 301 ತಳಿಯು ಜೂನ್ –ಜುಲೈ ಮತ್ತು ಅಕ್ಟೋಬರ್-ನವೆಂಬರ್ ವೇಳೆ ಬಿತ್ತನೆ ಮಾಡಬಹುದು. 115ರಿಂದ 118 ದಿನಗಳ ಬಳಿಕ ಕಟಾವು ಮಾಡಬಹುದು.
ಕೆಎಂಆರ್ 204 ತಳಿಯು ಜುಲೈ-ಆಗಸ್ಟ್ ನಲ್ಲಿ ಬಿತ್ತನೆ ಮಾಡಬಹುದು. 105-110 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಎಂಎಲ್ 365, ಇಂಡಾಫ್ 5 ತಳಿಯು ಜೂನ್- ಆಗಸ್ಟ್ ಮತ್ತು ಜನವರಿ – ಫೆಬ್ರುವರಿ ಯಲ್ಲಿ ಬಿತ್ತನೆ ಮಾಡಬಹುದು. 105-110 ದಿನಗಳಲ್ಲಿ ಮಾಗುತ್ತದೆ.

ಈ ಎಲ್ಲ ತಳಿಗಳು ನೀವಾರವಿ ಜಮೀನಿನಲ್ಲಿ ಒಂದು ಎಕರೆಗೆ 12 ರಿಂದ 14 ಟನ್ ಬೆಳೆ ಇಳುವರಿ ನೀಡುತ್ತವೆ. 3-3.5 ಕ್ವಿಂಟಾಲ್ ಹುಲ್ಲು ಕೊಡುತ್ತದೆ. ಖುಷ್ಕಿ ಜಮೀನಿನಲ್ಲಿ ಒಂದು ಎಕರೆಗೆ 8-10 ಟನ್ ಬೆಳೆ ಇಳುವರಿ ಕೊಡುತ್ತದೆ. ಮತ್ತು 1.5-2.5 ಕ್ವಿಂಟಾಲ್ ಹುಲ್ಲು ದೊರೆಯುತ್ತದೆ.

ಅಲ್ಪಾವಧಿ ತಳಿಗಳು
ಮುಂಗಾರು ತಡವಾಗಿ ಆರಂಭವಾದರೆ ಅಲ್ಪಾವಧಿ ರಾಗಿ ತಳಿಗಳನ್ನು ಬೆಳೆಯಬಹುದು. ಜೆಪಿಯು 45 ಈ ತಳಿಯು ಮುಂಗಾರಿನ ಎಲ್ಲಾ ಕಾದಲ್ಲಿಯೂ ಬೆಳೆಯಬಹುದು. 95 ರಿಂದ 100 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಜೆಪಿಯು 48 ಈ ತಳಿಯು ಏಪ್ರಿಲ್-ಮೇ, ಆಗಸ್ಟ್ ಅಥವಾ ಜನವರಿ-ಫೆಬ್ರುವರಿ ವೇಳೆಗೆ ಬಿತ್ತನೆ ಮಾಡಬಹುದು. 100ರಿಂದ 105 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಜೆಪಿಯು 26 ಈ ತಳಿಯು ಆಗಸ್ಟ್ ಅಥವಾ ಜನವರಿ-ಫೆಬ್ರುವರಿ ವೇಳೆಗೆ ಬಿತ್ತನೆ ಮಾಡಬಹುದು. 100-105 ದಿನಗಳಲ್ಲಿ ಕಟಾವಿಗೆ ಬರುತ್ತದೆ.

ಈ ಎಲ್ಲ ತಳಿಗಳು ನೀರಾವರಿ ಜಮೀನಿನಲ್ಲಿ ಒಂದು ಎಕರೆಗೆ 10-12 ಟನ್ ಬೆಳೆ ಇಳುವರಿ ಕೊಡುತ್ತದೆ. 2.5-3.5 ಕ್ವಿಂಟಾಲ್ ಹುಲ್ಲು ದೊರೆಯುತ್ತದೆ. ಖುಷ್ಕಿ ಜಮೀನಿನಲ್ಲಿ ಒಂದು ಎಕರೆಗೆ ಸುಮಾರು 8 ಟನ್ ಬೆಳೆ ಇಳುವರಿ ಬರುತ್ತದೆ. 1.5-2 ಕ್ವಿಂಟಾಲ್ ಹುಲ್ಲು ಪಡೆಯಬಹುದು.

ಇಂಡಾಫ್ 9 ತಳಿಗಳು ಏಪ್ರಿಲ್- ಮೇ, ಆಗಸ್ಟ್- ಸೆಪ್ಟೆಂಬರ್, ಜನವರಿ-ಫೆಬ್ರುವರಿ  ವೇಳೆಗೆ ಬಿತ್ತನೆ ಮಾಡಬಹುದು. 95-105 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಕೆಎಂಆರ್ 204 ತಳಿಗಳು ಜುಲೈ-ಆಗಸ್ಟ್ ತಿಂಗಳಲ್ಲಿ ಬಿತ್ತನೆ ಮಾಡಬಹುದು. 100-105 ದಿನಗಳಲ್ಲಿ ಕಟಾವಿಗೆ ಬರುತ್ತದೆ.

ಈ ಎಲ್ಲ ತಳಿಗಳು ನೀವಾರವಿ ಜಮೀನಿನಲ್ಲಿ ಒಂದು ಎಕರೆಗೆ 12 ರಿಂದ 14 ಟನ್ ಬೆಳೆ ಇಳುವರಿ ನೀಡುತ್ತವೆ. 3-3.5 ಕ್ವಿಂಟಾಲ್ ಹುಲ್ಲು ಕೊಡುತ್ತದೆ. ಖುಷ್ಕಿ ಜಮೀನಿನಲ್ಲಿ ಒಂದು ಎಕರೆಗೆ 8-10 ಟನ್ ಬೆಳೆ ಇಳುವರಿ ಕೊಡುತ್ತದೆ. ಮತ್ತು 1.5-2.5 ಕ್ವಿಂಟಾಲ್ ಹುಲ್ಲು ದೊರೆಯುತ್ತದೆ.

ಚಳಿಗಾಲದ ತಳಿಗಳು
ಇಂಡಾಪ್ 7, ಕೆಎಂಆರ್ 301
ತಳಿಗಳು ಸೆಪ್ಟೆಂಬರ್-ಅಕ್ಟೋಬರ್ ನಲ್ಲಿ ಬಿತ್ತನೆ ಮಾಡಬಹುದು. ಇವು 115-120 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಈ ತಳಿಗಳು ನೀವಾರವಿ ಜಮೀನಿನಲ್ಲಿ ಒಂದು ಎಕರೆಗೆ 12 ರಿಂದ 14 ಟನ್ ಬೆಳೆ ಇಳುವರಿ ನೀಡುತ್ತವೆ. 3-3.5 ಕ್ವಿಂಟಾಲ್ ಹುಲ್ಲು ಕೊಡುತ್ತದೆ. ಖುಷ್ಕಿ ಜಮೀನಿನಲ್ಲಿ ಒಂದು ಎಕರೆಗೆ 8-10 ಟನ್ ಬೆಳೆ ಇಳುವರಿ ಕೊಡುತ್ತದೆ. ಮತ್ತು 1.5-2.5 ಕ್ವಿಂಟಾಲ್ ಹುಲ್ಲು ದೊರೆಯುತ್ತದೆ.

ಆಯ್ದ ತಳಿಗಳ ವಿಶೇಷ
ಜಿಪಿಯು 26: ಬೆಂಕಿ ನಿರೋಧಕ ಶಕ್ತಿ ಹೊಂದಿದೆ.
ಜಿಪಿಯು 45: ಗಿಡ್ಡನೆಯ ತಳಿಯಾಗಿದ್ದು, ಹೆಚ್ಚು ತೆಂಡೆ ಹೊಡಿಯುವ ಸಾಮರ್ಥ್ಯ ಹೊಂದಿದೆ. ಕಾಂಡ ತೆಳುವಾಗಿದ್ದು, ದನಕರುಗಳಿಗೆ ಉತ್ತಮವಾದ ಒಣಮೇವಾಗುತ್ತದೆ.

ಜಿಪಿಯು 48: ಮಳೆಗಾಲದಲ್ಲಿ ತಡವಾಗಿ ಬಿತ್ತನೆಗೆ ಸೂಕ್ತ ಹಾಗೂ ನೀರಾವರಿ ಅನುಕೂಲವಿರುವ ಪ್ರದೇಶಗಳಲ್ಲಿ 3 ಬೆಳೆಗಳನ್ನು ತೆಗೆಯುವ ರೈತರು ಈ ತಳಿ ಆಯ್ಕೆ ಮಾಡಿಕೊಳ್ಳಬಹುದು. ಬೆಂಕಿ ನಿರೋಧಕ ಶಕ್ತಿಯನ್ನು ಹೊಂದಿದೆ. ಚೆನ್ನಾಗಿ ತೆಂಡೆಯೊಡೆಯುವ ಕಂದುಬಣ್ಣದ ತೆನೆಗಳನ್ನು ಹೊಂದಿರುತ್ತದೆ.
ಇಂಡಾಫ್ 9: ತಳಿಯು ಕಂದು ಬಣ್ಣದ ತೆನೆಗಳನ್ನು ಹೊಂದಿದ್ದು, ಸುಮಾರು 1 ಮೀಟರ್ ಗಿಂತ ಹೆಚ್ಚು ಎತ್ತರ ಬೆಳೆಯುತ್ತದೆ.

ಕೃಪೆ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ