Diesel subsidy scheme for farmers: ಯಂತ್ರೋಪಕರಣಗಳ ಮೂಲಕ ಉಳುಮೆ ಮಾಡಲು ರಾಜ್ಯದ ಸಣ್ಣರೈತರಿಗೆ ಪ್ರತಿ ಎಕರೆಗೆ 10 ಲೀಟರ್ ಡಿಸೇಲ್‌ಗೆ (Diesel) ಸಬ್ಸಿಡಿ ನೀಡುವ ಹೊಸ ಯೋಜನೆಯೊಂದನ್ನು ಜಾರಿಗೆ ಕರ್ನಾಟಕ ಸರಕಾರ ಮುಂದಾಗಿದೆ.

ಡೀಸೆಲ್ ಸಬ್ಸಿಡಿ ನೀಡಲು ‘ರೈತ ಶಕ್ತಿ’ ಎಂಬ ಯೋಜನೆ ರೂಪಿಸಲಾಗಿದ್ದು, ಸೆಪ್ಟೆಂಬರ್ ತಿಂಗಳಿAದಲೇ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಧಾರವಾಡ ಕೃಷಿ ಮೇಳ-2022 ಯೋಜನೆ ವಿವರ ತಿಳಿಸಿದ್ದಾರೆ.

ಹೇಗಿದೆ ಯೋಜನೆ?

ರೈತ ಶಕ್ತಿ ಯೋಜನೆಯು ಗರಿಷ್ಠ 5 ಎಕರೆಗೆ ಅನ್ವಯಿಸಲಿದೆ. ಪ್ರತಿ ಲೀಟರ್‌ Dieselಗೆ 25 ರೂ. ಸಬ್ಸಿಡಿ ನೀಡಲಾಗುತ್ತದೆ. ಪ್ರತಿಯೊಬ್ಬ ಸಣ್ಣ ರೈತನಿಗೆ ಪ್ರತಿವರ್ಷ ಗರಿಷ್ಠ 1250 ರೂ. ಗಳನ್ನು ಕೊಡಲಾಗುತ್ತದೆ. ರಾಜ್ಯದಲ್ಲಿ ಒಟ್ಟು 69 ಲಕ್ಷಕ್ಕೂ ಅಧಿಕ ಸಣ್ಣ ರೈತರಿದ್ದಾರೆ.

ಬಹುತೇಕ ಸಣ್ಣ ರೈತರು ಯಂತ್ರಾಧಾರಿತ ಕೃಷಿ ಮಾಡುತ್ತಿದ್ದಾರೆ. ಪ್ರತೀ ರೈತರಿಗೆ ಒಂದು ಎಕರೆ ಉಳುಮೆ ಮಾಡಲು ಪ್ರತಿವರ್ಷ 20 ಲೀಟರ್ ಡೀಸೆಲ್ ಅಗತ್ಯವಿದೆ. ಹಾಗಾಗಿ ರೈತರ ಹೊಲದ ಉಳುಮೆಯ ಇಂಧನದ ಖರ್ಚನ್ನು ಸರಕಾರ ಭರಿಸಬೇಕು ಎಂದು ಮೊದಲಬಾರಿಗೆ ರೈತ ಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.

ಇದೇ ತಿಂಗಳಿನಿAದ ಯೋಜನೆ ಜಾರಿ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿಕೊಂಡಿದ್ದಾರೆ ಎಂದೂ ಸಚಿವರು ತಿಳಿಸಿದರು.