ವಿವಿಧ ಸಾಲ ಸೌಲಭ್ಯ- ನಿಗಮಗಳಿಂದ ಅರ್ಜಿ ಆಹ್ವಾನ

ವಿವಿಧ ಸಾಲ ಸೌಲಭ್ಯ- ನಿಗಮಗಳಿಂದ ಅರ್ಜಿ ಆಹ್ವಾನ

ವಿವಿಧ ಯೋಜನೆಗಳ ಸಾಲ ಸೌಲಭ್ಯಕ್ಕೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮ ಒನ್ ಸೇವಾ ಸಿಂಧು(ಗ್ರಾಮ ಒನ್, ಸೇವಾಸಿಂಧು) ಮೂಲಕ ಅರ್ಜಿ ಅಪ್‍ಲೋಡ್ ಮಾಡಬೇಕು.

ಡಾ.ಬಿ.ಆರ್.ಅಂಬೇಡ್ಕರ, ಕರ್ನಾಟಕ ಆದಿಜಾಂಬವ, ಕರ್ನಾಟಕ ತಾಂಡಾ, ಕರ್ನಾಟಕ ಭೋವಿ ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಗಳ ವ್ಯಾಪ್ತಿಗೆ ಬರುವ ಅಭ್ಯರ್ಥಿಗಳಿಂದ ವಿವಿಧ ಯೋಜನೆಗಳ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಸ್ವಯಂ ಉದ್ಯೋಗ ಯೋಜನೆ(ನೇರಸಾಲ), ಐ.ಎಸ್.ಬಿ.ಯೋಜನೆ(ಇ.ವಿ ಮತ್ತು ಇತರೆ ದ್ವಿಚಕ್ರ ವಾಹನ ಖರೀದಿ, ಸರಕು ವಾಹನ ಖರೀದಿ ಹಾಗೂ ಇತರೆ ಚಟುವಟಿಕೆಗಳಿಗೆ ಬ್ಯಾಂಕುಗಳ ಸಹಯೋಗದೊಂದಿಗೆ) ಎಂ.ಸಿ.ಎಫ್ ಪ್ರೇರಣಾ ಯೋಜನೆ, ಗಂಗಾ ಕಲ್ಯಾಣ ಯೋಜನೆ ಮತ್ತು ಭೂ ಒಡೆತನ ಯೋಜನೆಗಳಡಿ 2022-23ನೇ ಸಾಲಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಒನ್ ಸೇವಾ ಸಿಂಧು(ಗ್ರಾಮ ಒನ್, ಸೇವಾಸಿಂಧು) ಮೂಲಕ ದಿನಾಂಕ 30-09-2022ರೊಳಗಾಗಿ ಅಪ್‍ಲೋಡ್ ಮಾಡಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ.08375-249012 ಸಂಪರ್ಕಿಸಲು ಕೋರಲಾಗಿದೆ.

Leave a reply

Your email address will not be published. Required fields are marked *