ದಕ್ಷಿಣ ಕನ್ನಡ: ಮಲೆನಾಡು ಹಾಗೂ ಕರಾವಳಿಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ. ಈ ಮರದ ಎಲೆಗ ಹಳದಿ ಹಾಗೂ ಚುಕ್ಕಿ ರೋಗ ಬರುತ್ತದೆ. ಆಗ ಔಷಧಿ ಸಿಂಪಡನೆ ಮಾಡಲು ತುಂಬಾನೇ ರಿಸ್ಕ್ ಯಾಕಂದ್ರೆ ಮರ ಎತ್ತರವಾಗಿರುತ್ತೆ. ಜೊತೆಗೆ ಕೆಲಸಗಾರರ ಅಭಾವ.

ಈ ಎಲ್ಲ ತೊಂದರೆಗೆ ಈಗ ಪರಿಹಾರ ದೊರೆಯುತ್ತಿದ್ದು, ಡ್ರೋನ್‌ ಮೂಲಕ ಔಷಧಿ ಸಿಂಪಡನೆ ತಂತ್ರಜ್ಞಾನ ಬಂದಿದೆ. ಈ ವಿಷಯ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಇನ್ನೂ ಈ ಡ್ರೋನ್‌ ಮೂಲಕ ಔಷಧಿ ಸಿಂಪಡನೆ ತಂತ್ರಜ್ಞಾನದ ಪ್ರಥಮ ಪ್ರಯೋಗ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆಯುತ್ತಿದೆ.

ಈ ಭಾಗದಲ್ಲಿ ಎಲೆಚುಕ್ಕಿ ರೋಗ ವ್ಯಾಪಕವಾಗಿದ್ದು, ಅಡಿಕೆ ಕೃಷಿಕರು ಆತಂಕಕ್ಕೆ ಒಳಗಾಗಿದ್ದಾರೆ. ಔಷಧ ಸಿಂಪಡನೆಗೆ ಕಾರ್ಮಿಕರ ಕೊರತೆಯೂ ಎದುರಾಗುತ್ತಿರುವ ಸಂದರ್ಭದಲ್ಲಿ ಸುಧಾರಿತ ತಂತ್ರಜ್ಞಾನ ನೆರವಿಗೆ ಬರುತ್ತಿದೆ. ಕಳಂಜ ಗ್ರಾಮದ ಗಿರಿಕೃಪಾ ಫಾರ್ಮ್ ನ ಸುದರ್ಶನ ಕೋಟೆ ಎಂಬುವವರು ಡ್ರೋನ್‌ ಪ್ರಾಯೋಗಿಕ ಬಳಕೆಗೆ ಮುಂದಾಗಿದ್ದಾರೆ.

ಹೇಗೆ ಕಾರ್ಯನಿರ್ವಹಿಸಲಿದೆ ಡ್ರೋನ್…
ಮಲ್ಟಿಪ್ಲೆಕ್ಸ್‌ ಎಂ ಸಂಸ್ಥೆಯವರ ಡ್ರೋನ್‌ ಈ ಕೆಲಸಕ್ಕೆ ಬಳಕೆಯಾಗುತ್ತಿದ್ದು, 10 ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ ಹೊಂದಿದೆ. ಔಷಧ ತುಂಬಿದ ಬಳಿಕ ಒಟ್ಟು ತೂಕ 25 ಕೆ.ಜಿ. ಇರಲಿದೆ. 10 ಲೀಟರ್‌ ಔಷಧವನ್ನು ಅರ್ಧ ಎಕರೆ ತೋಟಕ್ಕೆ ಕೇವಲ 15 ನಿಮಿಷಗಳಲ್ಲಿ ಸಿಂಪಡಿಸಬಹುದಾಗಿದೆ. ಡ್ರೋನ್‌ ಅಡಿಕೆ ಮರಗಳ ಮೇಲ್ಭಾಗಕ್ಕೆ ತೆರಳಿ ಎಲೆಗಳ ಮೇಲೆ ಔಷಧ ಸಿಂಪಡಿಸು ತ್ತದೆ. ಶೃಂಗೇರಿ ಸೇರಿದಂತೆ ಹಲವೆಡೆ ಈಗಾಗಲೇ ಔಷಧ ಸಿಂಪಡಣೆಗೆ ಡ್ರೋನ್‌ ಬಳಸಲಾಗಿದೆ.

ಡ್ರೋನ್ ಬಳಕೆ ಪ್ರಯೋಜನಗಳು
ಇದರಿಂದ ಔಷಧ ಸಿಂಪಡನೆ ಕಡಿಮೆ ಖರ್ಚು, ಜೊತೆಗೆ ಸಮಯದ ಉಳಿತಾಯವಾಗುತ್ತದೆ. ಹೀಗಾಗಿ ಡ್ರೋನ್ ಬೇಡಿಕೆ ಶುರುವಾಗಿದೆ.

ಸಂಸ್ಥೆಯವರು ಜಿಲ್ಲೆಗೆ 3 ಡ್ರೋನ್‌ ನೀಡಲಿದ್ದಾರೆ ಎನ್ನಲಾಗಿದೆ. ಸುಳ್ಯ ತಾಲೂಕಿನ ಕಳಂಜ, ಅಮರಮುಟ್ನೂರು, ಅಮರಪಟ್ನೂರು, ಮರ್ಕಂಜ, ದೊಡ್ಡತೋಟ, ಪಂಜ, ಬಳ್ಪ, ಯೇನೆಕಲ್ಲು, ಸುಬ್ರಹ್ಮಣ್ಯ ಭಾಗದ ಕೃಷಿಕರು ಈಗಾಗಲೇ ಔಷಧಿ ಸಿಂಪಡಣೆಗೆ ಡ್ರೋನ್ ಬುಕ್ ಮಾಡಿದ್ದಾರೆ.

ಈ ಡ್ರೋನ್ ಕೇವಲ ಔಷಧಿ ಸಿಂಪಡಣೆ ಮಾತ್ರ ಮಾಡುತ್ತೆ. ಇದರ ಜೊತೆಗೆ

ಅಡಿಕೆ ಸಿಂಗಾರ ಹಾಗೂ ಗೊಂಚಲಿಗೂ ಔಷಧ ಸಿಂಪಡಿಸುವ ರೀತಿ ಡ್ರೋನ್‌ ಡೆವಲಪ್ ಮಾಡಿದ್ರೆ ಒಳ್ಳೆದು ಅನ್ನೋದು ರೈತರ ಅಭಿಪ್ರಾಯ.