ರಾಜಸ್ಥಾನ: ಪುನರ್ ಜನ್ಮದ ಬಗ್ಗೆ ಕಥೆಗಳಲ್ಲಿ ಕೇಳಿದ್ದೇವೆ. ಸಿನಿಮಾಗಳಲ್ಲಿ ನೋಡಿದ್ದೇವೆ. ಆದ್ರೆ ನಿಜ ಜೀವನದಲ್ಲೂ ಹೀಗಾಗೊಕೆ ಸಾಧ್ಯನಾ? ಸಾಧ್ಯ ಅದಕ್ಕೆ ಸಾಕ್ಷಿ ನಾವು ಮುಂದೆ ಹೇಳೊಕೆ ಹೊರಟಿರೊ ಸ್ಟೋರಿಯಲ್ಲಿ ಇದೆ.

ರಾಜಸ್ಥಾನದ ರಾಜ್‌ಸಮಂದ್‌ನ ನಾಥದ್ವಾರದ ಪಕ್ಕದಲ್ಲಿರುವ ಪರವಾಲ್ ಗ್ರಾಮದ ನಿವಾಸಿ 4ವರ್ಷದ ಬಾಲೆ ಕಿಂಜಾಲ್ ಚುಂದಾವತ್ ರಾಜ್‌ಸಮಂದ್ ಪುನರ್ಜನ್ಮ ಪಡೆದಿದ್ದಾಳೆ.

ಹೌದು ಅವಳು ತನ್ನನ್ನು ತಾನು ಉಷಾ ಎಂದು ಕರೆದುಕೊಳ್ಳುತ್ತಿದ್ದಾಳೆ. ತನ್ನ ತಂದೆ-ತಾಯಿ, ಸಹೋದರ ಸೇರಿದಂತೆ ಇಡಿ ಪರಿವಾರವು ಪಿಪ್ಲಾಂತ್ರಿಯಲ್ಲಿ ವಾಸಿಸುತ್ತಿದೆ. ಅಪ್ಪ ಟ್ರಾಕ್ಟರ್ ಓಡಿಸುತ್ತಾನೆ. ಗಂಡನ ಮನೆ ಓಡನ್‌ ನಲ್ಲಿದೆ ಎಂದು ಕಿಂಜಲ್ ಹೇಳುತ್ತಾಳೆ.

ಬಾಲಕಿಯ ಮಾತಿಗೆ ಪೋಷಕರಿಂದ ಹಿಡಿದು ಸಂಬಂಧಿಕರು ಹಾಗೂ ಗ್ರಾಮಸ್ಥರು ಬೆರಗಾಗಿದ್ದಾರೆ. ಆಕೆ ತನ್ನ ಹಿಂದಿನ ಜನ್ಮದ ಬಗ್ಗೆ ಹೇಳಿದ್ದ ಪ್ರತಿಯೊಂದು ವಿಷಯಗಳು ಮತ್ತು ಸ್ಟೋರಿ ಕೂಡ ನಿಜವೇ ಆಗಿದೆ.

ಆದರೆ ಆಕೆ 4 ವರ್ಷದ ಬಾಲಕಿಯಾಗಿರುವ ಕಾರಣ ಅವಳ ಮಾತುಗಳು ಇನ್ನೂ ತೊದಲು ನುಡಿಗಳಲ್ಲೇ ಆಡುತ್ತಾಳೆ. ಪರವಾಲ್ ರಾಜ್‌ಸಮಂದ್ ಜಿಲ್ಲೆಯ ನಾಥದ್ವಾರದ ಪಕ್ಕದಲ್ಲಿರುವ ಹಳ್ಳಿಯಾಗಿದೆ. ಇಲ್ಲಿ ರತನ್ ಸಿಂಗ್ ಚುಂದಾವತ್ ಅವರಿಗೆ 5 ಹೆಣ್ಣು ಮಕ್ಕಳಿದ್ದಾರೆ. ಅವರು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಾರೆ. ಕಳೆದ 1ವರ್ಷದಿಂದ, ಅವರ ಕಿರಿಯ ಮಗಳು ಕಿಂಜಲ್, ತನ್ನ ಸಹೋದರನನ್ನು ಭೇಟಿಯಾಬೇಕು ಎಂದು ಪದೇ ಪದೇ ಕೇಳುತ್ತಿದ್ದಳು.

ಕಿಂಜಲ್ ಅವರ ಅಜ್ಜ ರಾಮ್ ಸಿಂಗ್ ಚುಂದಾವತ್ ಅವರು ಮೊದ ಮೊದಲು ಆಕೆಯ ಮಾತುಗಳ ಬಗ್ಗೆ ಗಮನ ಹರಿಸಲಿಲ್ಲ, ಆದರೆ ಎರಡು ತಿಂಗಳ ಹಿಂದೆ ಒಮ್ಮೆ ಕಿಂಜಲ್ ಅವರ ತಾಯಿ ದುರ್ಗಾ ಕಿಂಜಲ್‌ಗೆ “ನಿನ್ನ ತಂದೆ ಇಷ್ಟೊತ್ತಾದರೂ ಬಂದಿಲ್ಲ ಅವರಿಗೆ ಫೋನ್ ಮಾಡು” ಎಂದು ಹೇಳಿದಾಗ ಅದಕ್ಕೆ ಉತ್ತರಿಸಿದ ಕಿಂಜಲ್, ತನ್ನ ತಂದೆ ಪಿಪ್ಲಾಂತ್ರಿ ಗ್ರಾಮದಲ್ಲಿದ್ದಾರೆ ಎಂದಳು.

ನಂತರ ಅವರು, ತಮ್ಮ ಗ್ರಾಮದಿಂದ 30 ಕಿ.ಮೀ. ದೂರದಲ್ಲಿರುವ ಪಿಪ್ಲಾಂತ್ರಿ ಗ್ರಾಮಕ್ಕೆ ಈ ಸುದ್ದಿ ತಿಳಿಸಿದ್ರು. ಕಿಂಜಲ್‌ಳ ಈ ಕಥೆ ಪಿಪ್ಲಾಂತ್ರಿಯ ಪಂಕಜ್‌ಗೆ (ಉಷಾಳ ಸಹೋದರ) ತಿಳಿದಾಗ ಆತ ಪರವಾಲ್‌ಗೆ ಬಂದನು.

ಪಂಕಜ್ ನ ನೋಡಿದ ತಕ್ಷಣ ಕಿಂಜಲ್‌ಳ ಖುಷಿಗೆ ಪಾರವೇ ಇರಲಿಲ್ಲ. ಪಂಕಜ್ ತನ್ನ ಫೋನಿನಲ್ಲಿದ್ದ ತಾಯಿ ಮತ್ತು ಉಷಾ ಫೋಟೋ ತೋರಿಸಿದಾಗ ಕಿಂಜಲ್ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಬಳಿಕ, ಕಿಂಜಲ್ ತನ್ನ ತಾಯಿ ಮತ್ತು ಅಜ್ಜ ಸೇರಿದಂತೆ ತನ್ನ ಕುಟುಂಬದೊಂದಿಗೆ ಪಿಪ್ಲಾಂತ್ರಿಗೆ ಹೋದಳು. ಕಿಂಜಲ್ ಏನೇಲ್ಲಾ ಹೇಳಿದ್ದಳೋ ಅದೆಲ್ಲವೂ 100ಕ್ಕೆ 100ರಷ್ಟು ಸತ್ಯವಾಗಿತ್ತು.

ಕುಟುಂಬಸ್ಥರು ಏನಂದ್ರು?

ನಮ್ಮ ಗ್ರಾಮಕ್ಕೆ ಬಂದಾಗ ಆಕೆ ಅನೇಕ ವರ್ಷಗಳಿಂದ ಇಲ್ಲಿಯೇ ಇದ್ದಳೇನೋ ಎಂಬಂತೆ ಅನಿಸಿತು. ಹಿಂದಿನ ಜನ್ಮದಲ್ಲಿ ತನಗೆ ಪರಿಚಯವಿದ್ದ ಗ್ರಾಮದ ಹೆಂಗಸರ ಜೊತೆ ಕಿಂಜಲ್ ಮಾತಾಡಿದಳು. ಉಷಾ ಇಷ್ಟಪಟ್ಟ ಹೂವಿನ ಬಗ್ಗೆಯೂ ಕಿಂಜಲ್ ಆ ಹೂವು ಈಗ ಎಲ್ಲಿದೆ ಎಂದು ಕೇಳಿದಳು. ಆಗ ಅದನ್ನು 7-8 ವರ್ಷಗಳ ಹಿಂದೆ ತೆಗೆದಿರುವುದಾಗಿ ಹೇಳಿದ್ದೇವೆ. 2013 ರಲ್ಲಿ ತನ್ನ ಮಗಳು ಉಷಾ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಗ್ಯಾಸ್ ಸ್ಟೌವ್‌ ಬಸ್ಟ್ ಆಗಿ ಸಾವನ್ನಪ್ಪಿದ್ದಳು ಎಂದು ಉಷಾ ತಾಯಿ ಗೀತಾ ಹೇಳಿದ್ದಾರೆ. ಉಷಾಗೂ ಇಬ್ಬರು ಮಕ್ಕಳಿದ್ದಾರೆ.

ಈ ಘಟನೆಯ ನಂತರ, ಕಿಂಜಲ್ ಮತ್ತು ಉಷಾ ಅವರ ಕುಟುಂಬದ ನಡುವೆ ಒಂದು ಅನನ್ಯ ಸಂಬಂಧ ಏರ್ಪಟ್ಟಿತು. ಕಿಂಜಲ್ ತನ್ನ ಕುಟುಂಬದ ಪ್ರಕಾಶ್ ಮತ್ತು ಹಿನಾ ಅವರೊಂದಿಗೆ ಪ್ರತಿದಿನ ಫೋನ್‌ನಲ್ಲಿ ಮಾತನಾಡುತ್ತಾರೆ. ಉಷಾ ಅವರ ತಾಯಿ ಮಾತನಾಡುತ್ತ, “ನಮಗೂ ಉಷಾಳೊಂದಿಗೇ ಮಾತನಾಡುತ್ತಿರುವಂತೆ ಅನಿಸುತ್ತದೆ. ಉಷಾ ಕೂಡ ಬಾಲ್ಯದಲ್ಲಿ ಹೀಗೆಯೇ ಮಾತನಾಡುತ್ತಿದ್ದಳು” ಎನ್ನುತ್ತಾರೆ.

ಕಿಂಜಲ್ ಅವರ ಸಂಬಂಧಿಕರು ಕಿಂಜಲ್‌ಗೆ ಕಾಯಿಲೆ ಇರಬಹುದು ಎಂದು ಆಕೆಯನ್ನು ವೈದ್ಯರ ಬಳಿ ಕರೆದೊಯ್ದಿದ್ದರು. ಆದರೆ ಕಿಂಜಲ್‌ಗೆ ಯಾವುದೇ ಸಮಸ್ಯೆ ಇಲ್ಲ ಆಕೆ ಸಂಪೂರ್ಣವಾಗಿ ಆರೋಗ್ಯವಾಗಿದ್ದಾಳೆ. ಕೆಲವು ಮಕ್ಕಳು ತಮ್ಮ ಹಿಂದಿನ ಜನ್ಮದ ವಿಷಯಗಳನ್ನು ನೆನಪಿಸಿಕೊಳ್ಳುತ್ತಾರೆ ಎಂದು ವೈದ್ಯರು ಹೇಳುತ್ತಾರೆ.