ಉತ್ತರ ಕನ್ನಡ: “ಲೆಮನ್ ಪೆಪ್ಪರ್ ಫಿಶ್’ ಸೇವಿಸಿದರೆ ಬೇಗ ವಯಸ್ಸಾಗುವುದಿಲ್ಲವಂತೆ. ಬುದ್ಧಿ ಚುರುಕಾಗುವುದಷ್ಟೇ ಅಲ್ಲದೆ, ಮೆದುಳಿನ ಆರೋಗ್ಯ ಕೂಡ ಉತ್ತಮಗೊಳ್ಳುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಇಂಥದ್ದೊಂದು ಖಾದ್ಯ ತಯಾರಿಸುವ ವಿಧಾನದ ಬಗ್ಗೆ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಹಾಗೂ ಹೈನುಗಾರಿಕೆ ಇಲಾಖೆ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದೆ. ಅಲ್ಲದೆ, ಆ ಪೋಸ್ಟ್ ಅನ್ನು ಕೇಂದ್ರ ಮೀನುಗಾರಿಕೆ ಇಲಾಖೆ ಸಚಿವ ಗಿರಿರಾಜ್ ಸಿಂಗ್ ಕೂಟ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಲಿಂಬೆ, ಕರಿ ಮೆಣಸು ಸೇರಿಸಿ ಮಾಡಿದ ಮೀನಿ ಖಾದ್ಯ (ಲೆಮನ್ ಪೆಪ್ಪರ್ ಫಿಶ್) ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಈ ಖಾದ್ಯ ಸೇವಿಸುವುದರಿಂದ ವಯಸ್ಸಾಗುವುದನ್ನು ವಿಳಂಬಗೊಳಿಸುತ್ತದೆ ಮತ್ತು ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ಸಚಿವ ಗಿರಿರಾಜ್ ಟ್ವೀಟ್ ಮಾಡಿದ್ದಾರೆ.

“ಲೆಮನ್ ಪೆಪ್ಪರ್ ಫಿಶ್- ಶುಕ್ರವಾರ ರಾತ್ರಿಯ ಪರಿಪೂರ್ಣ ಭೋಜನ’ ಎನ್ನುವ ಸಲಹೆಯೊಂದಿಗೆ ಈ ಮಾಹಿತಿ ಹಂಚಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೊ ಕೂಡ ಇಲಾಖೆ ಪೋಸ್ಟ್ ಮಾಡಿದೆ. ಅದರಲ್ಲಿ ಲೆಮನ್ ಪೆಪ್ಪರ್ ಫಿಶ್ ಹೇಗೆ ತಯಾರಿಸಬೇಕು ಎನ್ನುವ ವಿವರಣೆಯನ್ನೂ ನೀಡಲಾಗಿದೆ.