ಉತ್ತರ ಕನ್ನಡ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಇಬ್ಬರನ್ನು ಉತ್ತರ ಕನ್ನಡ ಜಿಲ್ಲೆ ಪೊಲೀಸರು ಬಂಧಿಸಿದ್ದಾರೆ.

ಶಿರಸಿ ನಗರದ ಬನವಾಸಿ ರಸ್ತೆಯ ರಾಮನಬೈಲ್ ಬಳಿ ಐಪಿಎಲ್  ಕ್ರಿಕೆಟ್ ಮ್ಯಾಚ್ ಪಂದ್ಯದ ಬಗ್ಗೆ ಆರೋಪಿಗಳು ಬೆಟ್ಟಿಂಗ್ ನಡೆಸುತ್ತಿದ್ದರು. ಆ ಆರೋಪದ ಮೇಲೆ ಇಬ್ಬರು ಯುವಕರನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಂಚಿನ ಕೇರಿಯ ತಾಜುದ್ದೀನ್ ಮರ್ದಾನಸಾಬ್, ನೂರುಲ್ಲಾ ಚಮನಸಾಬ್, ರೋಶನ್ ಚಂದಾವರ  ಬಂಧಿತ ಆರೋಪಿಗಳು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಎಸ್ಐ ನಜೀರ್ ಅಹ್ಮದ್ ತನಿಖೆ ನಡೆಸುತ್ತಿದ್ದಾರೆ.