Select Page

Advertisement

ರಾಜ್ಯದ ಮತ್ತೊಬ್ಬ ಶಾಸಕ ಕೊರೊನಾ ಸೋಂಕಿಗೆ ಬಲಿ

ರಾಜ್ಯದ ಮತ್ತೊಬ್ಬ ಶಾಸಕ ಕೊರೊನಾ ಸೋಂಕಿಗೆ ಬಲಿ

ಉತ್ತರ ಕನ್ನಡ: ರಾಜ್ಯ ಸಭಾ ಸದಸ್ಯ ಅಶೋಕ ಗಸ್ತಿ, ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ನಿಧನದ ಬೆನ್ನಲ್ಲೇ ಕರ್ನಾಟಕದ ಮತ್ತೊಬ್ಬ ಶಾಸಕ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಬೀದರದ ಬಸವಕಲ್ಯಾಣದ ಕಾಂಗ್ರೆಸ್ ಶಾಸಕ ಬಿ. ನಾರಾಯಣ ರಾವ್ (65) ಅವರು ಕೊರೊನಾ ಸೋಂಕಿನಿಂದ ಗುರುವಾರ ಮಧ್ಯಾಹ್ನ 3.55ಕ್ಕೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಅವರು ಸೆ.1 ರಂದು ಆಸ್ಪತ್ರೆಗೆ ದಾಖಲಾಗಿದ್ದರು.

ಆದರೆ, ಮಲ್ಪಿ ಆರ್ಗಲ್ ವೈಫಲ್ಯದಿಂದ ಗಂಭೀರ ಸ್ಥಿತಿಗೆ ತಲುಪಿದ್ದ ಅವರನ್ನು ಐಸಿಯುನಲ್ಲಿ ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ ಎಂದು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ನಿರ್ದೇಶಕ ಮನಿಶ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a reply

Your email address will not be published. Required fields are marked *