Select Page

ಅನುಭವದಿಂದ ಪರಿಣಾಮದತ್ತ: ಕುಮಟಾ ಕೆನರಾ ಸೀನಿಯರ್ ಚೇಂಬರ್ನಲ್ಲಿ ಓರಿಯಂಟೇಶನ್ ತರಬೇತಿ

ಅನುಭವದಿಂದ ಪರಿಣಾಮದತ್ತ: ಕುಮಟಾ ಕೆನರಾ ಸೀನಿಯರ್ ಚೇಂಬರ್ನಲ್ಲಿ ಓರಿಯಂಟೇಶನ್ ತರಬೇತಿ

ಕುಮಟಾ: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ನ ಕುಮಟಾ ಕೆನರಾ ಲೆಜಿನ್ನಲ್ಲಿ ಸದಸ್ಯರಿಗೆ ಸಂಸ್ಥೆಯ ಧ್ಯೇಯ–ಧೋರಣೆ, ಕಾರ್ಯವೈಖರಿ, ಸದಸ್ಯರ ಜವಾಬ್ದಾರಿ ಹಾಗೂ ಸಮಾಜಮುಖಿ ಸೇವೆಯ ಕುರಿತು ಅರಿವು ಮೂಡಿಸುವ ಓರಿಯಂಟೇಶನ್ ಹಾಗೂ ತರಬೇತಿ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಶಿರಸಿ ಮಾರಿಕಾಂಬಾ ಸೀನಿಯರ್ ಚೇಂಬರ್ ಅಧ್ಯಕ್ಷೆ ಹಾಗೂ ಪ್ರೊವಿಷನಲ್ ರಾಷ್ಟ್ರೀಯ ತರಬೇತುದಾರರಾದ ಸೀನಿಯರ್ ಮಂಗಳಗೌರಿ ನೆಜ್ಜೂರು, ಸೀನಿಯರ್ ಚೇಂಬರ್ ಸಂಸ್ಥೆಯು ಸಂಘಟನಾ ಚಟುವಟಿಕೆಗಳೊಂದಿಗೆ ಮಾನವೀಯ ಮೌಲ್ಯ ಮತ್ತು ಸಮಾಜಸೇವೆಯನ್ನು ಬೆಸೆಯುವ ವಿಶಿಷ್ಟ ವೇದಿಕೆಯಾಗಿದೆ ಎಂದು ಹೇಳಿದರು.

ಶಿರಸಿ ಮಾರಿಕಾಂಬಾ ಲೆಜಿನ್ನ ಪ್ರೊವಿಷನಲ್ ರಾಷ್ಟ್ರೀಯ ತರಬೇತುದಾರರಾದ ಸೀನಿಯರ್ ಮಂಗಳಗೌರಿ ನೆಜ್ಜೂರು, ಸೀನಿಯರ್ ವಿನಾಯಕ ಎಂ. ಭಟ್ ಹಾಗೂ ಸೀನಿಯರ್ ಜ್ಯೋತಿ ಭಟ್ ಅವರು ಓರಿಯಂಟೇಶನ್ ನಡೆಸಿ, ಸೀನಿಯರ್ ಚೇಂಬರ್ನ ಇತಿಹಾಸ, ಧ್ಯೇಯ–ಆಶಯ, ಸಂಘಟನಾ ರಚನೆ, ಕಾರ್ಯವೈಖರಿ, ಸದಸ್ಯರ ಪಾತ್ರ ಹಾಗೂ ಸಮಾಜಮುಖಿ ಸೇವಾ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಅನುಭವ, ಉದಾಹರಣೆ ಹಾಗೂ ಸಂವಾದದ ಮೂಲಕ ಸಂಸ್ಥೆಯ ಕಾರ್ಯವ್ಯಾಪ್ತಿಯನ್ನು ಪರಿಚಯಿಸಿದರು.

ಇದೇ ಸಂದರ್ಭದಲ್ಲಿ ಕುಮಟಾ ಕೆನರಾ ಲೆಜಿನ್ನ ಕಾರ್ಯದರ್ಶಿ ಹಾಗೂ ಪ್ರೊವಿಷನಲ್ ರಾಷ್ಟ್ರೀಯ ತರಬೇತುದಾರ ಸೀನಿಯರ್ ಎನ್. ಆರ್. ಗಜು, ಪ್ರೊವಿಷನಲ್ ರಾಷ್ಟ್ರೀಯ ತರಬೇತುದಾರರಾದ ಸೀನಿಯರ್ ರಾಮದಾಸ ಗುನಗಿ ಹಾಗೂ ಸೀನಿಯರ್ ಗಣೇಶ ಭಟ್ ಅವರು ಸದಸ್ಯರಿಗೆ ವಿಶೇಷ ತರಬೇತಿ ನೀಡಿದರು. ಮೂವರು ತರಬೇತುದಾರರು ಕ್ರಮವಾಗಿ “ನಮ್ಮ ಸೀನಿಯರ್ ಚೇಂಬರ್ – ತಿಳಿಯೋಣ”, “ನಾನು ಸೀನಿಯರ್ ಚೇಂಬರ್ – ನನ್ನ ಜವಾಬ್ದಾರಿ” ಹಾಗೂ “ನಾಯಕತ್ವ – ಹುದ್ದೆಯಲ್ಲ, ಹೊಣೆಗಾರಿಕೆ” ವಿಷಯಗಳನ್ನು ಪ್ರಸ್ತುತಪಡಿಸಿ, ಸದಸ್ಯತ್ವದ ಸಾರ್ಥಕತೆ, ಸಕ್ರಿಯ ಭಾಗವಹಿಸುವಿಕೆ, ನಾಯಕತ್ವ, ತಂಡದ ಕಾರ್ಯಕ್ಷಮತೆ ಹಾಗೂ ಅನುಭವವನ್ನು ಸಮಾಜದ ಸೇವೆಗೆ ಬಳಸುವ ಕುರಿತು ಮಾರ್ಗದರ್ಶನ ನೀಡಿದರು.

“ಅನುಭವದಿಂದ ಪರಿಣಾಮದತ್ತ” ಸಾಗುವ ಆಶಯಕ್ಕೆ ಪೂರಕವಾಗಿ ನಡೆದ ಕಾರ್ಯಕ್ರಮವು ಸದಸ್ಯರಲ್ಲಿ ಹೊಸ ಉತ್ಸಾಹ, ಸಂಘಟನಾ ಬದ್ಧತೆ ಹಾಗೂ ಸೇವಾ ಮನೋಭಾವವನ್ನು ಮೂಡಿಸಿತು. ಈ ಸಂದರ್ಭದಲ್ಲಿ ಕುಮಟಾ ಕೆನರಾ ಲೆಜಿನ್ ಅಧ್ಯಕ್ಷ ಸೀನಿಯರ್ ವಸಂತ ರಾವ್ ಅಧ್ಯಕ್ಷತೆ ವಹಿಸಿ, ಸೀನಿಯರ್ ಚೇಂಬರ್ ವತಿಯಿಂದ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಶೀಘ್ರದಲ್ಲೇ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಘೋಷಿಸಿದರು.
ರಾಜ್ಯಮಟ್ಟದ ಗಾಯಕಿ ಕುಮಾರಿ ಶ್ರೀ ರಾವ್ ಪ್ರಾರ್ಥನೆ ಗೀತೆ ಹಾಡಿದರು. ಸೀನಿಯರ್ ಸುನಿಲ್ ಭಟ್ ಚೇಂಬರ್ನ ಧ್ಯೇಯವಾಕ್ಯ ವಾಚಿಸಿದರು. ಕಾರ್ಯದರ್ಶಿ ಸೀನಿಯರ್ ಎನ್. ಆರ್. ಗಜು ವಂದಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸೀನಿಯರ್ ಶೈಲಾ ಗುನಗಿ ಅವರನ್ನು ಚೇಂಬರ್ ಪರವಾಗಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್ ರಾಷ್ಟ್ರೀಯ ತರಬೇತುದಾರ ಶ್ರೀಕಾಂತ ಭಟ್, ಜಿ. ಎಸ್. ಹೆಗಡೆ, ಜಿ. ಎಂ. ಭಟ್, ಎಂ. ಆರ್. ಉಪಾಧ್ಯಾಯ, ಸುಮಾ ಎಸ್. ಭಟ್, ಸುಜಾತಾ ಕಾಮತ, ಜೆ. ಜಿ. ನಾಯ್ಕ, ಎಸ್. ವಿ. ಹೆಗಡೆ, ಜಯದೇವ ಬಳಗಂಡಿ, ಹೇಮಾ ರಾವ್, ವಿಜಯಲಕ್ಷ್ಮೀ ನಾಯ್ಕ, ಉಲ್ಲಾಸ ನಾಯ್ಕ, ಯಶೋದಾ ಲಕ್ಕುಮನೆ, ಶಾರದಾ ಶಾಸ್ತ್ರಿ, ರಾಜು ಶಾನಭಾಗ, ಕಿರಣ ಚೇಳ್ಕರ, ಎಸ್. ಬಿ. ನಾಯ್ಕ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು. ಪ್ರಸ್ತುತ ಅಮೇರಿಕಾದಲ್ಲಿ ನೆಲೆಸಿರುವ ನಿಕಟಪೂರ್ವ ಅಧ್ಯಕ್ಷ ಆರ್. ಜಿ. ಭಟ್ ಅವರು ನೇರ ವಿಡಿಯೋ ಸಂದೇಶ ನೀಡಿ ಶುಭಾಶಯ ಕೋರಿದರು.

Leave a reply

Your email address will not be published. Required fields are marked *