
ಬಿಪಿ ಇದ್ದವರಿಗೆ ಉತ್ತಮ ಶಲಭಾಸನ

ಶಲಭ ಎಂದರೆ ಮಿಡತೆ, ಈ ಆಸನದ ಕೊನೆಯ ಸ್ಥಿತಿ ಮಿಡತೆಯ ರೀತಿಯಲ್ಲಿ ಕಾಣುವುದರಿಂದ ಇದಕ್ಕೆ ಶಲಭಾಸನ ಎಂದು ಕರೆಯಲಾಗಿದೆ.
ಪ್ರಯೋಜನಗಳು:
1) ಬೆನ್ನು ಮೂಳೆಯ ಆರೋಗ್ಯ ಹೆಚ್ಚುವುದು.
2) ಸೊಂಟದ ನೋವು ಇರುವವರಿಗೆ ಉತ್ತಮ ಆಸನ.
3) ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.
4) ಮೂತ್ರ ಪಿಂಡಗಳ ಆರೋಗ್ಯ ಉತ್ತಮಗೊಳ್ಳುವುದು.
5) ಬಿಪಿ ಇರುವವರಿಗೆ ಈ ಆಸನ ಒಳ್ಳೆಯದು.
6) ಪಾದ, ಕಾಲು, ತೊಡೆ , ಸೊಂಟಕ್ಕೆ ಉತ್ತಮ ವ್ಯಾಯಾಮ ಸಿಗುತ್ತದೆ.
ಮಾಡುವ ವಿಧಾನ:
ಈ ಆಸನ ಮಾಡಲು ಮೊದಲು ಹೊಟ್ಟೆಯ ಮೇಲೆ ಮಲಗಿಕೊಳ್ಳಿ. ಈಗ ಎರಡು ಕೈಗಳನ್ನು ಮುಷ್ಠಿ ಮಾಡಿಕೊಂಡು ತೊಡೆಯ ಕೆಳಭಾಗದಲ್ಲಿ ಇಡಬೇಕು. ನಿಮ್ಮ ಗದ್ದ ನೆಲಕ್ಕೆ ತಾಗಿಸಿ ಆಳವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ( ಪೂರಕ) ಎರಡು ಕಾಲುಗಳನ್ನು ನಿಧಾನವಾಗಿ ಮೇಲಕ್ಕೆತ್ತಿ. ಇದೇ ಸ್ಥಿತಿಯಲ್ಲಿ 10 ಸೆಕೆಂಡುಗಳ ಕಾಲ ಇರಬೇಕು. ಇಲ್ಲಿ ಉಸಿರಾಟ ಸರಳವಾಗಿರಲಿ. 10 ಸೆಕೆಂಡು ಆದನಂತರ ಉಸಿರನ್ನು ಹೊರಕ್ಕೆ ಹಾಕುತ್ತಾ ನಿಧಾನವಾಗಿ ಕಾಲುಗಳನ್ನು ಕೆಳಗಿಳಿಸಿ ವಿಶ್ರಾಂತಿ ತೆಗೆದುಕೊಳ್ಳಿ.
ಎಚ್ಚರಿಕೆ:
ಸಂಧಿವಾತದಿಂದ ಅಥವಾ ಸೊಂಟ ಮತ್ತು ಬೆನ್ನು ಮೂಳೆಯ ನೋವಿನಿಂದ ಬಳಲುತ್ತಿದ್ದರೆ ಮತ್ತು ಅಧಿಕ ರಕ್ತದೊತ್ತಡ, ಗ್ಲುಕೋಮಾ ಅಥವಾ ದುರ್ಬಲ ಹೃದಯ ಹೊಂದಿರುವವರು ಉಸಿರನ್ನು ಹಿಡಿದಿಟ್ಟು ಕೊಳ್ಳುವುದು ಅಥವಾ ಭಂಗಿಯನ್ನು ಹಿಡಿದಿಟ್ಟು ಕೊಳ್ಳುವುದು ತಪ್ಪಿಸಬೇಕು.