ಹೊಸದಾಗಿ ತೋಟ ಮಾಡಬೇಕು ಅಥವಾ ಇರುವ ತೋಟವನ್ನು ಅಭಿವೃದ್ಧಿ ಮಾಡುವ ಯೋಜನೆ ಇರುವ ರೈತರಿಗಾಗಿಯೇ ತೋಟಗಾರಿಕೆ ಇಲಾಖೆಯಲ್ಲಿ ಸಹಾಯಧನ ನೀಡುವ ಯೋಜನೆ ಇದೆ. ಬಹುತೇಕರು ಇಂಥ ಯೋಜನೆಗಳ ಅರಿವು ಇಲ್ಲದೆ ಪೂರ್ತಿಯಾಗಿ ಸ್ವಂತ ಹಣ ವಿನಿಯೋಗಿಸುತ್ತಿರುತ್ತಾರೆ.

ಅದರ ಬದಲು ಸರಕಾರದ ಯೋಜನೆ ಮೂಲಕ 20 ಸಾವಿರ ರೂ.ದಿಂದ 30 ಸಾವಿರ ರೂ.ವರೆಗೆ ಸಬ್ಸಿಡಿ ಸಹಾಯಧನ ಪಡೆದು ತೋಟಗಳನ್ನು ಅಭಿವೃದ್ಧಿಪಡಿಸಬಹುದು. ಸರಕಾರದ ಈ ಸೌಲಭ್ಯವನ್ನು ಹೇಗೆ ಪಡೆಯಬಹುದು ಎಂಬುದನ್ನು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನಾ ಕಾರ್ಯಕ್ರಮಗಳ ಅಡಿಯಲ್ಲಿ 2020-21 ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯ ಭಾಗವಾಗಿ ತೋಟಗಾರಿಕೆ ಪ್ರದೇಶಗಳ ಅಭಿವೃದ್ಧಿಗೆ ರೈತರಿಗೆ ಸಹಾಯಧನ ನೀಡಲಾಗುತ್ತಿದೆ.

ಹೊಸ ತೋಟಗಳ ಸ್ಥಾಪನೆ
ಹೊಸದಾಗಿ ತೋಟ ಸ್ಥಾಪನೆ ಮಾಡಬೇಕು ಎಂದುಕೊಂಡಿರುವ ರೈತರಿಗಾಗಿ ಹಣ್ಣಿನ ಬೆಳೆಗಳಾದ ಕಂದು ಬಾಳೆ, ಅಂಗಾಂಶ ತಳಿಯ ಬಾಳೆ ಬೆಳೆಗಳನ್ನು ವಿವಿಧ ಅಂತರಗಳಲ್ಲಿ ಹೊಸದಾಗಿ ಬೆಳೆದು ಪ್ರದೇಶ ವಿಸ್ತರಣೆ ಮಾಡಲು ಸಹಾಯಧನ ನೀಡಲಾಗುತ್ತಿದೆ. ಈ ತೋಟಗಳ ನಿರ್ವಹಣೆಗಾಗಿ ಪ್ರತಿ ಹೆಕ್ಟೇರ್‍ಗೆ ಶೇ 40 ರಷ್ಟು ಅಂದರೆ, ಗರಿಷ್ಠ ಸಹಾಯದನ ರೂ. 19,500 ಕಂದುಬಾಳೆಗೆ ಮತ್ತು ರೂ. 30,600 ಅಂಗಾಂಶ ತಳಿಯ ಬಾಳೆಗೆ ಸಹಾಯಧನ ಕೊಡಲಾಗುತ್ತದೆ. ಇದು ಗರಿಷ್ಠ 4 ಹೆಕ್ಟೇರ್ ವರೆಗೆ ನೀಡಲಾಗುತ್ತದೆ.

ಕೃಷಿಯಲ್ಲೇ ತಿಂಗಳ ಪಗಾರ; ನಗರ ಉದ್ದೋಗಕ್ಕೆ ಸೆಡ್ಡು ಹೊಡೆದ ಯುವ ರೈತ

ಪುಷ್ಪಗಳ ಬೆಳೆಯಲ್ಲಿ ಬಿಡಿ ಪುಷ್ಪಗಳ ಪ್ರದೇಶ ವಿಸ್ತರಣೆಗಾಗಿ ಪ್ರತಿ ಹೆಕ್ಟೇರ್‍ಗೆ ರೂ. 10 ಸಾವಿರ ದಂತೆ  ಗರಿಷ್ಟ 2 ಹೆಕ್ಟೇರ್ ವರೆಗೆ ಸಹಾಯದನ ನೀಡಲಾಗುತ್ತದೆ. ತರಕಾರಿ ಹೈಬ್ರಿಡ್ ಪ್ರದೇಶ ವಿಸ್ತರಣೆಗಾಗಿ ಪ್ರತಿ ಹೆಕ್ಟೇರ್ ಗೆ ರೂ. 20 ಸಾವಿರ ದಂತೆ ಗರಿಷ್ಠ 2 ಹೆಕ್ಟೇರ್ ವರೆಗೆ ಸಹಾಯದನ ನೀಡಲಾಗುತ್ತದೆ.

ಬಹುವಾರ್ಷಿಕ ತೋಟದ ಬೆಳೆಗಳಾದ ಗೋಡಂಬಿ, ಕೋಕೋ ಪ್ರದೇಶ ವಿಸ್ತರಣೆಗಾಗಿ ರೂ. 12 ಸಾವಿರ ದವರೆಗೆ ಪ್ರತಿ ಹೆಕ್ಟೇರ್‍ಗೆ ಮತ್ತು ಮೊದಲನೇ ಹಾಗೂ ಎರಡನೇ ವರ್ಷದ ಪಾಲನೆಗಾಗಿ ತಲಾ ರೂ. 4 ಸಾವಿರದಂತೆ  ಸಹಾಯಧನ ಗರಿಷ್ಠ 4 ಹೆಕ್ಟೇರ್ ವರೆಗೆ ನೀಡಲಾಗುತ್ತದೆ.

ರೈತರಿಗೆ 5,000 ರೂ. ಆರ್ಥಿಕ ನೆರವು

ಹಳೆಯ ತೋಟಗಳ ಪುನಃಶ್ಚೇತನ:
ಹಳೆಯ ತೋಟಗಳನ್ನು ಅಭಿವೃದ್ಧಿ ಮಾಡಲು ಬಯಸಿದ್ದರೆ ಹಾಗೂ ಅನುತ್ಪಾದಕ ಕಿತ್ತಳೆ ಮತ್ತು ಕಾಳು ಮೆಣಸು ಬೆಳೆಗಳ ತೋಟಗಳನ್ನು ಪುನಃಶ್ಚೇತನಗೊಳಿಸುವ ಸಲುವಾಗಿ ಪ್ರತಿ ಹೆಕ್ಟೇರ್ ಪ್ರದೇಶಕ್ಕೆ ರೂ. 10 ಸಾವಿರ  ಮೌಲ್ಯದ ಗಿಡಗಳು, ಜೈವಿಕ ಪೋಷಕಾಂಶಗಳು, ಜೈವಿಕ ಪೀಡೆ ನಾಶಕ, ಲಘುಪೋಷಕಾಂಶಕ ಇತ್ಯಾದಿ ಪರಿಕರಗಳನ್ನು ಗರಿಷ್ಟ 2 ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ರೂಪದಲ್ಲಿ ನೀಡಲಾಗುತ್ತದೆ.

ಸೌಲಭ್ಯ ಪಡೆಯುವುದು ಹೇಗೆ?
ಈ ಸೌಲಭ್ಯಗಳನ್ನು ಪಡೆಯಲು ರೈತರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಮತ್ತು ಅಗತ್ಯ ದಾಖಲೆಗಳ ಮಾಹಿತಿಗಾಗಿಯೂ ಅದೇ ಕಚೇರಿಯನ್ನು ಸಂಪರ್ಕಿಸಬೇಕು. ಈ ಯೋಜನೆ ರಾಜ್ಯಾದ್ಯಂತ ಅನುಷ್ಠಾನ ಮಾಡಲಾಗುತ್ತಿದೆ.

ಟಾರ್ಪಾಲಿನ (ತಾಡಪತ್ರಿ)ಗಾಗಿ ರೈತರಿಂದ ಅರ್ಜಿ ಆಹ್ವಾನ

ಕೊಡಗು ಜಿಲ್ಲೆಯ ರೈತರು ಮಾಹಿತಿಗೆ ದೂರವಾಣಿ ಸಂಖ್ಯೆ 08272-220555, 08276-281364, 08274-249637 ಸಂಪರ್ಕಿಸಬಹದು. ಅರ್ಜಿ ಸಲ್ಲಿಸಲು ಆಗಸ್ಟ್ 14 ಕೊನೆ ದಿನ ಎಂದು ತೋಟಗಾರಿಕೆ ಉಪ ನಿರ್ದೇಶಕ ಎಚ್.ಶಶಿಧರ ಅವರು ತಿಳಿಸಿದ್ದಾರೆ.