ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕನಿಷ್ಟ ಎರಡು ಮಿಶ್ರ ತಳಿ ಹಸುಗಳನ್ನು ಹೊಂದಿರುವ ಹೈನುಗಾರರಿಂದ ಒಬ್ಬರಿಗೆ ಒಂದು ವಿದ್ಯುತ್ ಚಾಲಿತ ಒಂದು ಬಕೆಟ್ ಸಾಮಥ್ರ್ಯದ ಹಾಲು ಕರೆಯುವ ಯಂತ್ರ ಮತ್ತು ಎರಡು ರಬ್ಬರ್ ಮ್ಯಾಟ್‍ಗಳನ್ನು ಶೇ.90 ರ ಸಹಾಯಧನ ಮತ್ತು ಶೇ.10 ರ ಫಲಾನುಭವಿಯ ವಂತಿಕೆಯೊಂದಿಗೆ ನೀಡುವ ಘಟಕ ಸೌಲಭ್ಯಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.

ನಿಗಧಿತ ಅರ್ಜಿ ನಮೂನೆಯನ್ನು ಅರ್ಜಿಯನ್ನು ಆಯಾ ತಾಲೂಕಿನ ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆಯಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿಮಾಡಿದ ಅರ್ಜಿಯನ್ನು ದಿನಾಂಕ 20-08-2021 ರೊಳಗೆ ತಾಲೂಕಿನ ಸಹಾಯಕ ನಿರ್ದೇಶಕರ ಕಛೇರಿಗೆ ಸಲ್ಲಿಸುವಂತೆ ಪಶುಪಾಲನೆ ಮತ್ತು ಪಶುವೈದೈ ಸೇವಾ ಇಲಾಖೆಯ, ಉಪನಿರ್ದೇಶಕರಾದ ಡಾ. ರಾಜೀವ ಎನ್ ಕೂಲೇರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತರು ಹೆಚ್ಚಿನ ಮಾಹಿತಿಗೆ ಹಾವೇರಿ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಬಸವರಾಜ ಡಿಸಿ (9480422963, ) ರಾಣೇಬೆನ್ನೂರು ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಪರಮೇಶ ಎನ್ (9480667062), ಬ್ಯಾಡಗಿ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಎನ್.ಎಸ್ ಚೌಡಾಳ, (9901784498),

ಶಿಗ್ಗಾಂವ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಆರ್.ವೈ ಹೊಸಮನಿ (9108579345), ಸವಣೂರು ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ರವೀಂದ್ರ ಹುಜರತ್ತಿ (9740821508), ಹಾನಗಲ್ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಗಿರೀಶ ರಡ್ಡೇರ, (9901118508),

ಹಿರೇಕೆರೂರು ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಕಿರಣ ಎಲ್, ಸಹಾಯಕ ನಿರ್ದೇಶಕರು (ಪ್ರಭಾರ), (7022075545), ರಟ್ಟಿಹಳ್ಳಿ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಸುಮಂತ ಕುಮಾರ ಕಡೇಮನಿ (7411450502) ಇವರನ್ನು ಸಂಪರ್ಕಿಸಬಹುದು.