ರೈತರಿಗೆ 5,000 ರೂ. ಆರ್ಥಿಕ ನೆರವು

ರೈತರಿಗೆ 5,000 ರೂ. ಆರ್ಥಿಕ ನೆರವು

ಕೋವಿಡ್-19 ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೊಳಗಾದ ರೈತರಿಗೆ  5000 ರೂ. ಗಳ (ರೂಪಾಯಿ ಐದು ಸಾವಿರ ಮಾತ್ರ) ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ ಮುಖಾಂತರ ನೀಡಲು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಸೌಲಭ್ಯ ಪ್ರಮುಖವಾಗಿ ಮುಸುಕಿನಜೋಳ ಬೆಳೆದು ನಷ್ಟಕ್ಕೆ ಒಳಗಾದ ರೈತರಿಗೆ ಅನ್ವಯಿಸಲಿದೆ.

ಆದರೆ, ಕೆಲ ರೈತರು ಜಮೀನು ದಾಖಲೆ ಸಮಸ್ಯೆಯಿಂದ ಈ ಸಹಾಯಧನ ಪಡೆಯಲು ಸಾಧ್ಯವಾಗುತ್ತಿಲ್ಲ. ಕೆಲವರು  ಕೃಷಿ ಮಾಡುತ್ತಿದ್ದರೂ, ಜಮೀನು ನಾಲ್ಕೈದು ಜನರ ಹೆಸರಿನಲ್ಲಿ ಇರುವ ಕಾರಣಕ್ಕೆ ಅವರಿಗೆ ಸಹಾಯಧನ ಪಡೆಯಲು ಕಷ್ಟವಾಗುತ್ತಿದೆ. ಇನ್ನು ಕೆಲ ಪ್ರಕರಣಗಳಲ್ಲಿ ಜಮೀನು ಮೃತ ತಂದೆ ಅಥವಾ ಅಜ್ಜ, ಅಜ್ಜಿಯ ಹೆಸರಲ್ಲಿ ಇವೆ. ಅವರಿಗೂ ಸಹಾಯಧನ ಪಡೆಯಲು ತೊಂದರೆಯಾಗುತ್ತದೆ. ಅಂಥವರು ಕೆಲ ದಾಖಲೆಗಳನ್ನು ಹೊಂದಿಸಿದರೆ ಸಹಾಯಧನ ಪಡೆಯಬಹುದು.

1.5 ಎಕರೆಯಲ್ಲಿ ದಿನಕ್ಕೆ 25 ಸಾವಿರ ರೂ. ಗಳಿಸುವ ರೈತ

ಸಹಾಯಧನ ಪಡೆಯುವುದು ಹೇಗೆ?
ಘೋಷಣೆಯಂತೆ ರೈತರಿಗೆ ಅಲ್ಪಾವಧಿ ಆರ್ಥಿಕ ನೆರವು ನೀಡಲು ಕರ್ನಾಟಕ ಸರ್ಕಾರದ ಇ-ಆಡಳಿತದ ವತಿಯಿಂದ ಕೈಗೊಳ್ಳಲಾದ 2019-20ನೇ ಸಾಲಿನ ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ದಾಖಲಾಗಿರುವ ಮುಸುಕಿನಜೋಳ ಬೆಳೆದ ರೈತರ ಪಟ್ಟಿಯನ್ನು ಗ್ರಾಮವಾರು ಮತ್ತು ಗ್ರಾಮಪಂಚಾಯಿತಿ ಸೂಚನಾ ಫಲಕಗಳಲ್ಲಿ ಪ್ರಕಟಿಸಲು ಕ್ರಮ ಕೈಗೊಳ್ಳಲಾಗಿದೆ. ರೈತರು ತಮ್ಮ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರಕಟಿಸಲಾದ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು.

ಅಡಿಕೆ, ಶುಂಠಿ ಬೆಳೆಗೆ ಕೊಳೆ ರೋಗದಿಂದ ಮುಕ್ತಿ

ಪಟ್ಟಿಯಲ್ಲಿರುವ ಜಂಟಿ ಖಾತೆ ಹೊಂದಿರುವ ರೈತರು 20 ರೂ. ಛಾಪಾ ಕಾಗದದಲ್ಲಿ ಎಲ್ಲಾ ಜಂಟಿ ಮಾಲೀಕರಿಂದ ಒಬ್ಬರಿಗೆ ಹಣವನ್ನು ವರ್ಗಾಯಿಸಲು ಒಪ್ಪಿಗೆ ನೀಡಬೇಕು. ಅದನ್ನು ನೋಟರಿಯವರಿಂದ ಪ್ರಮಾಣೀಕರಿಸಿ ನಂತರ ಸಂಬಂಧಿಸಿದವರ ಆಧಾರ ಕಾರ್ಡ, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಜಮೀನಿನ ಉತಾರದ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಿ ಗ್ರಾಮ ಲೆಕ್ಕಾಧಿಕಾರಿಗಳಿಗೆ ಅಥವಾ ತಮ್ಮ ಹೋಬಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸಬೇಕು.

ಮೇಘಧೂತ್-ಹವಾಮಾನಾಧರಿತ ಕೃಷಿ ಮಾರ್ಗದರ್ಶಿ

ಪೌತಿ ಪ್ರಕರಣಗಳಲ್ಲಿ ತಮ್ಮ ಪೂರ್ವಜರ ಹೆಸರಿನಲ್ಲಿ ಜಮೀನು ಇರುವ ರೈತರು ಗ್ರಾಮ ಲೆಕ್ಕಾಧಿಕಾರಿಗಳಿಂದ ವಂಶವೃಕ್ಷ ಮತ್ತು ವಾರಸುದಾರರ ಪ್ರಮಾಣ ಪತ್ರ ಹಾಗೂ ಇತರೆ ಕುಟುಂಬದ ಸದಸ್ಯರಿಂದ ನಿರಾಕ್ಷೇಪಣೆ ಪತ್ರ ಪಡೆದು ನೋಟರಿಯವರಿಂದ ದೃಢೀಕರಿಸಬೇಕು. ಬಳಿಕ ಸಂಬಂಧಿಸಿದವರ ಆಧಾರ ಕಾರ್ಡ, ಬ್ಯಾಂಕ್ ಪಾಸ್‍ಪುಸ್ತಕ ಹಾಗೂ ಜಮೀನಿನ ಉತಾರದ  ಜೆರಾಕ್ಸ್ ಪ್ರತಿಯನ್ನು ಲಗತ್ತಿಸಿ ಗ್ರಾಮ ಲೆಕ್ಕಾಧಿಕಾರಿಗಳಿಗೆ ಅಥವಾ ತಮ್ಮ ಹೋಬಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸಬೇಕು.

ಸಹಾಯಧನಕ್ಕಾಗಿ ರೈತರಿಂದ ಅರ್ಜಿ ಅಹ್ವಾನ

ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ
ಈ ಸೌಲಭ್ಯವನ್ನು ಇಲಾಖೆಯ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾದ ರೈತರಿಗೆ ನೆರವು ವರ್ಗಾಯಿಸಲು ಸಾಧ್ಯವಾಗುತ್ತದೆ. ಆದ್ದರಿಂದ ತಂತ್ರಾಂಶದಲ್ಲಿ ನೊಂದಣಿಯಾಗದಿರುವ ರೈತರ ಪಟ್ಟಿ ಪ್ರಕಟಿಸಲಾಗಿದೆ. ಪಟ್ಟಿ ಪರಿಶೀಲಿಸಿಕೊಂಡು ರೈತರು ತಮ್ಮ ಆಧಾರ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ, ಸರ್ವೆ ನಂಬರ್ ವಿವರದೊಂದಿಗೆ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಶೀಘ್ರವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಯನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆ ತಿಳಿಸಿದೆ.

ಮಾಹಿತಿ: ಕೃಷಿ ಇಲಾಖೆ ಕಚೇರಿ, ಹಾವೇರಿ.

ಇವುಗಳನ್ನೂ ಓದಿ

2 Comments

Trackbacks/Pingbacks

  1. ತೋಟ ಆರಂಭಿಸಲು ಸಹಾಯಧನ: ಕೂಡಲೇ ಅರ್ಜಿ ಸಲ್ಲಿಸಿ | - […] ರೈತರಿಗೆ 5,000 ರೂ. ಆರ್ಥಿಕ ನೆರವು […]

Leave a reply

Your email address will not be published. Required fields are marked *