ಶಿಕ್ಷಣ ಪಡೆಯುತ್ತಲೇ ಉದ್ಯೋಗ ಅರಸಿ ನಗರದತ್ತ ವಲಸೆ ಹೋಗುವವರೇ ಹೆಚ್ಚು. ನೆಲದ ಕಸುಬು ಮಾಡುವವರು ಬಹಳ ಕಡಿಮೆ. ಅಂಥ ಕೆಲವರಲ್ಲಿಯೇ ಒಬ್ಬರಾಗಿರುವ ಯುವಕ ಶಿವಾನಂದ ಲಕ್ಷ್ಮಣ ಮಾಳಿ ಅವರು ನಗರ ಉದ್ಯೋಗ ಸಂಸ್ಕೃತಿಗೇ ಸೆಡ್ಡು ಹೊಡೆದು ಕೃಷಿಯಲ್ಲಿಯೇ ಸಾಫ್ಟವೇರ್ ಎಂಜಿನಿಯರ್ ಗಿಂತ ಹೆಚ್ಚು ದುಡಿಯುತ್ತಿದ್ದಾರೆ.

ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಯುವಕ ಶಿವಾನಂದ ಲಕ್ಷಣ ಮಾಳಿ ಸಮಗ್ರ ಕೃಷಿ ಮೂಲಕ ಕಡಿಮೆ ಜಮೀನಿನಲ್ಲಿಯೂ ನಷ್ಟವಿಲ್ಲದೆ ಹೆಚ್ಚಿನ ಆದಾಯ ಗಳಿಸುವ ತಂತ್ರವನ್ನು ರೂಢಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಅನೇಕರು ಇವರ ಸಂದರ್ಶನ ಮಾಡಿ ಕೃಷಿ ತಂತ್ರವನ್ನು ತಾವೂ ಅನುಸರಿಸುತ್ತಿದ್ದಾರೆ.

1.5 ಎಕರೆಯಲ್ಲಿ ದಿನಕ್ಕೆ 25 ಸಾವಿರ ರೂ. ಗಳಿಸುವ ರೈತ

ದೊಡ್ಡಪ್ಪನ ಕೃಷಿ ನೋಡುತ್ತಲೇ ಬೆಳೆದು ತಾನೂ ಮಣ್ಣಿನ ಜೊತೆ ಬೆರೆತ ಶಿವಾನಂದ ಓದಿದ್ದು ಬಿ.ಎ. ಪದವಿ. ಶಿಕ್ಷಣ ಕಲಿತಿದ್ದೇನೆ ಎಂದು ಎಲ್ಲರಂತೆ ನೌಕರಿ ಹುಡುಕದೆ ಕೃಷಿಯತ್ತ ಹೆಜ್ಜೆ ಹಾಕಿದ ಅವರು ನಾಲ್ಕು ಎಕರೆ ಭೂಮಿಯಲ್ಲಿ ಸಮಗ್ರ ಬೇಸಾಯ ಮಾಡುತ್ತ ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದಾರೆ.

ಎರಡು ಗುಂಟೆಯಲ್ಲಿ ಲಕ್ಷ ರೂ. ಆದಾಯ ಕೊಡುವ ಹೂ

ಸಮಗ್ರ ಬೇಸಾಯ
ಶಿವಾನಂದ ಅವರ ದೊಡಪ್ಪ ಕಲ್ಲಪ್ಪ ಮಾಳಿ ಸಾವಯವ ಬೇಸಾಯ ಮಾಡಿಕೊಂಡು ಬಂದಿದ್ದರು. ಅದೇ ಕೆಲಸಕ್ಕೆ ಇವರು ನಾವಿಣ್ಯತೆಯ ಸ್ಪರ್ಶ ನೀಡಿ ವ್ಯವಸಾಯ ಮಾಡಿದ್ದಾರೆ. ಕೊಟ್ಟಿಗೆ ಗೊಬ್ಬರ, ಎರೆಹುಳು ತೊಟ್ಟಿ, ಜೀವಾಮೃತ, ಬೀಜೋಪಚಾರ ಮಾಡಿಕೊಂಡಿದ್ದಾರೆ. ಉಪಕಸಬುಗಳನ್ನು ಅಳವಡಿಸಿಕೊಂಡು ಸುಸ್ಥಿರ ಬದುಕು ಕಟ್ಟಿಕೊಂಡಿದ್ದಾರೆ.
ಇವರ ನಾಲ್ಕೂವರೆ ಎಕರೆ ಜಮೀನಿನಲ್ಲಿ ಚೆಂಡು ಹೂ, ಕಬ್ಬು, ತರಕಾರಿ, ರೇಷ್ಮೆ ಬೆಳೆಯುತ್ತಿದ್ದಾರೆ. ಇವೆಲ್ಲದರ ನಡುವೆ ಉಪಕಸಬುಗಳಾದ ಹೈನುಗಾರಿಕೆ, ಮೊಲಸಾಕಾಣಿಕೆಯು ಇವರ ಆದಾಯಕ್ಕೆ ಕೈ ಜೋಡಿಸಿವೆ. ಚೆಂಡು ಹೂ, ಸದಕ, ಅರಿಷಿಣ, ಗೋವಿನಜೋಳ ಪ್ರಮುಖ ಬೆಳೆಗಳಾಗಿ ಬೆಳೆಯುತ್ತಾರೆ.

ಸಹಾಯಧನಕ್ಕಾಗಿ ರೈತರಿಂದ ಅರ್ಜಿ ಅಹ್ವಾನ

ಇನ್ನುಳಿದ ಜಮೀನಿನಲ್ಲಿ ಹಿಪ್ಪು ನೆರಳೆ ಜೊತೆ ಮಿಶ್ರಬೆಳೆಯಾಗಿ ಕಬ್ಬು, ಸುವರ್ಣಗಡ್ಡೆ, ರಾಗಿ, ನವಣೆ, ಚಿಯಾ, ಸಾಮನ್ಯವಾಗಿ ಎಕರೆಗೆ ಬೇರಡೆ ಕಬ್ಬು 50 ಟನ್ ಕಬ್ಬು ಇಳುವರಿ ಬಂದರೆ ಇವರು ಸಾವಯವದಲ್ಲಿ 65 ರಿಂದ 70 ಟನ್ ವರೆಗೆ ಇಳುವರಿ ಪಡೆಯುತ್ತಾರೆ.

ರೈತರಿಗೆ 5,000 ರೂ. ಆರ್ಥಿಕ ನೆರವು

ಸಾಲಿನಿಂದ ಸಾಲಿಗೆ 12 ಅಡಿ ಅಂತರ ಇದ್ದು, ಕಬ್ಬಿನ ಸಸಿಯ ಒಂದು ಪಿಟ್ ದಿಂದ ಮತ್ತೊಂದು ಪಿಟ್ ಗೆ 6 ಅಡಿ ಅಂತರ ಇದೆ. 12 ಪೂಟ್ ಅಂತರದಲ್ಲಿ ರೇಷ್ಮೆ, ಅವರೆ, ನವಣೆ, ತರಕಾರಿ, ಚಿಯಾ, ಸುವಣಗಡ್ಡೆ  ಹೀಗೆ ಹಲವು ಬೆಳೆಗಳನ್ನು ಬೆಳೆದಿದ್ದಾರೆ.

ಕೇವಲ ರೇಷ್ಮೆ ಬೆಳೆಯಿಂದಲೇ ತಿಂಗಳಿಗೆ 30 ಸಾವಿರ ರೂ. ಆದಾಯ ಬರುತ್ತಿದೆ. ಇನ್ನು ಮಿಶ್ರ ಬೆಳೆಯಿಂದ ಮನೆಯ ಖರ್ಚುಗಳು ಕಳೆದುಹೋಗುತ್ತಿವೆ. ಹೀಗಿರುವಾಗ ನನಗೆ ನೌಕರಿ ಯಾಕೆ?
ಶಿವಾನಂದ ಲಕ್ಷಣ ಮಾಳಿ, ಯುವ ರೈತ.

ಭಾರತದಲ್ಲಿ ಕೃಷಿ ಮಾಡಲು ಮಲೇಶಿಯಾ ಬಿಟ್ಟು ಬಂದ ದಂಪತಿ

ಆದಾಯ:
ಸಾವಯವದಲ್ಲಿ ಬೆಳೆದ ಕಬ್ಬಿನಿಂದ ಮನೆಗೆ ಬೇಕಾಗುವಷ್ಟು ಬೆಲ್ಲವನ್ನು ಮಾಡುತ್ತಾರೆ. 15 ದನಗಳನ್ನು ಸಾಕಿದ್ದಾರೆ. 8 ಆಡುಗಳಿವೆ. ಹಸುಗಳು ನಿತ್ಯ 5 ಲೀಟರ್ ವರೆಗೆ ಹಾಲು ನೀಡುತ್ತವೆ. ಕಬ್ಬು, ರೇಷ್ಮೆ, ಇತರ ಬೆಳೆಗಳಿಂದ ವಾರ್ಷಿಕವಾಗಿ 7 ರಿಂದ 8 ಲಕ್ಷ ರೂ. ವರೆಗೆ ಆದಾಯ ಪಡೆಯುತ್ತಾರೆ. ರೇಷ್ಮೆಯಿಂದ 2 ತಿಂಗಳಿಗೆ 30 ರಿಂದ 50 ಸಾವಿರ ರೂ.ವರೆಗೆ ಆದಾಯ ಪಡೆಯುತ್ತಾರೆ. ಇತ್ತೀಚಿಗೆ ಮೊಲಸಾಕಾಣಿಕೆ ಮಾಡಿಕೊಂಡಿದ್ದು ಸದ್ಯ 15 ಮೊಲಗಳಿವೆ. ಚೆಂಡು ಹೂವನ್ನು ಒಪ್ಪಂದ ಮಾಡಿಕೊಂಡು ಮಾರಾಟ ಮಾಡುತ್ತಾರೆ. ಹೀಗೆ ಒಟ್ಟಾರೆ ಪ್ರತಿ ತಿಂಗಳಿಗೆ ಸರಾಸರಿ ಒಂದು ಲಕ್ಷ ರೂ. ಆದಾಯ ಗಳಿಸುತ್ತಾರೆ. ಜತೆಗೆ ಮನೆಗೆ ಬೇಕಾದ ತರಕಾರಿ, ಧಾನ್ಯಗಳನ್ನು ತೋಟದಲ್ಲಿಯೇ ಬೆಳೆಯುತ್ತಾರೆ. ಹಾಗಾಗಿ ತಿಂಗಳ ಖರ್ಚು ಸಹ ಕಡಿಮೆ.

ಚಿತ್ರ ಲೇಖನ: ವಿನೋದ ರಾ ಪಾಟೀಲ, ಬೆಳಗಾವಿ.