ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ವತಿಯಿಂದ ವಿಷೇಶ ಘಟಕ ಯೋಜನೆಯಲ್ಲಿ ಘಟಕ ಸ್ಥಾಪನೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿಷೇಶ ಘಟಕ ಯೋಜನೆಯಲ್ಲಿ 10 ಹಾಗೂ ಗಿರಿಜನ ಉಪಯೋಜನೆಯಡಿ 5 ಜನ ಫಲಾನುಭವಿಗಳಿಗೆ ಕುರಿ, ಮೆಕೆ (6+1) ಘಟಕ ಸ್ಥಾಪನೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸಂಚಾರಿ ಕುರಿ, ಮೆಕೆ ಸಾಗಾಣಿಕೆದಾರರಿಗೆ ಸಂಚಾರಿ ಟೆಂಟ್ ಮತ್ತಿ ಇನ್ನೀತರ ಪರಿಕರ ಕಿಟ್‍ಗಳನ್ನು ಉಚಿತವಾಗಿ ಒದಗಿಸುವ ಯೋಜನೆ ಅಡಿಯಲ್ಲಿ ಜಿಲ್ಲೆಯ 10 ಸಾಮಾನ್ಯ, 2 ಪರಿಶಿಷ್ಟ ಜಾತಿ, 1 ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ನೀಡಲಾಗುತ್ತಿದೆ.

ಈ ಯೋಜನೆಯ ಫಲಾನುಭವಿಗಳು 18 ರಿಂದ 60 ವಯಸ್ಸಿನೊಳಗಿರಬೇಕು. ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ಬೆಂಗಳೂರು ಇವರಿಂದ ನೊಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಸದಸ್ಯರಾಗಿರಬೇಕು.

ಮಹಿಳೆಯರಿಗೆ ಹಾಗೂ ಸಂಚಾರಿ ಟೆಂಟ್ ಯೋಜನೆಯಡಿ ಅರೆಸಂಚಾರಿ, ಸಂಚಾರಿ ಕುರಿಗಾರರಿಗೆ ಆದ್ಯತೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವವರು ಆಯಾ ತಾಲೂಕಿನ ಪಶು ಸಂಗೋಪನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಕಚೇರಿಯಿಂದ ಅರ್ಜಿ ಪಡೆದುಕೊಂಡು ಪ್ರಕಟಣೆಗೊಂಡ 20 ದಿನಗಳೊಳಗಾಗಿ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಬಾಗಲಕೊಟೆ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ಕಚೇರಿ (ಮೊನಂ.9448025576) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.