ಸರ್ವ ರೋಗಕ್ಕೂ ಮದ್ದು ಪದ್ಮಾಸನ

“ಇದಂ ಪದ್ಮಾಸಂ ಸನಂ ಪ್ರೋಕ್ತಂ
ಸರ್ವವ್ಯಾಧಿವಿನಾಶನಂ
ದುರ್ಲ ಭಂ ಯೇನಾ ಕೇನಾಪಿ
ಧಿಮತಾಭವಿ ಲಭ್ಯತ”
ಎಂದು ಹಠಯೋಗ ಪ್ರದಿಪಿಕೆಯಲ್ಲಿ ಪದ್ಮಾಸನದ ಕುರಿತು ಹೇಳಲಾಗಿದೆ. ಅಂದರೆ ಪದ್ಮಾಸನವನ್ನು ಮಾಡುವುದರಿಂದ ಸಮಸ್ತ ರೋಗಗಳು ನಾಶವಾಗುವುದು. ದುರ್ಲಭವಾದ ಈ ವಿಷಯವು ಕೇವಲ ಬುದ್ದಿವಂತರಿಗೆ ಮಾತ್ರ ಲಭ್ಯವಾಗುವುದು.
ಪದ್ಮಾಸನ ಎಂದರೆ ತಾವರೆ ಅಥವಾ ಕಮಲ ಎಂದರ್ಥ. ಇದು ಕಮಲದ ಆಕಾರದಲ್ಲಿ ಮಾಡುವಂಥ ಭಂಗಿ.
ಪದ್ಮಾಸನ ಮಾಡುವ ವಿಧಾನ:
ಮೊದಲು ನೆಲದಮೇಲೆ ಎರಡು ಕಾಲುಗಳನ್ನು ಮುಂದಕ್ಕೆ ಚಾಚಿ ಕುಳಿತುಕೊಳ್ಳಿ. ನಂತರ ಬಲಮಂಡಿಯನ್ನು ಮಡಚಿ ಬಲ ಪಾದಗಳನ್ನು ಹಿಡಿದುಕೊಂಡು ಎಡ ತೊಡೆಯ ಮೇಲೆ ಇರಿಸಿ. ನಿಮ್ಮ ಬಲಗಾಲಿನ ಹಿಮ್ಮಡಿ ಹೊಕ್ಕಳಿನ ಎಡಭಾಗದಲ್ಲಿ ಬರುವಂತೆ ಇರಲಿ.
ಈಗ ನಿಮ್ಮ ಎಡ ಮಂಡಿಯನ್ನು ಮಡಚಿ ಎಡ ಪಾದ ಬಲ ತೊಡೆಯ ಮೇಲೆ ಇರಿಸಿ. ಎಡ ಹಿಮ್ಮಡಿ ಹೊಕ್ಕಳಿನ ಬಲಭಾಗದಲ್ಲಿರಲಿ. ಇಲ್ಲಿ ನಿಮ್ಮ ಬಲಗಾಲು ಮತ್ತು ಎಡಗಾಲು ಒಂದಕ್ಕೊಂದು ಛೇಧಿಸಿದಂತಿರುತ್ತದೆ. ಎರಡು ಕಾಲುಗಳ ಅಂಗಾಲು ಮೇಲ್ಮುಖವಾಗಿರಲಿ.
ಎರಡು ಕೈಯಲ್ಲಿ ಚಿನ್ಮುದ್ರೆ, ಬೆನ್ನು ಮತ್ತು ಕತ್ತು ನೆರವಾಗಿರಿಸಿ. ಎರಡು ಹಸ್ತ ನಿಮ್ಮ ಮಂಡಿಯ ಮೇಲಿರಿಸಿ. ನಿಧಾನ ಮತ್ತು ಹಗುರವಾಗಿ ಕಣ್ಣುಗಳನ್ನು ಮುಚ್ಚಿಕೊಳ್ಳಿ. ನಿಮ್ಮ ಉಸಿರಾಟ ನಿಧಾನವಾಗಿರಲಿ. ಇದೇ ಸ್ಥಿತಿಯಲ್ಲಿ 30 ರಿಂದ 60 ಸೆಕೆಂಡುಗಳ ಕಾಲ ಕುಳಿತುಕೊಳ್ಳಿ.
ಬೆನ್ನು ನೋವು ನಿವಾರಣೆಗೆ ಪರಿವ್ರತ್ತ ಜಾನು ಶೀರ್ಷಾಸನ
ಬಿಪಿ ನಿಯಂತ್ರಿಸಲು ಉಪಯುಕ್ತ ಜಾನು ಶೀರ್ಷಾಸನ
ಉಪಯೋಗಗಳು:
1) ಮೆದುಳನ್ನು ಶಾಂತಗೊಳಿಸುತ್ತದೆ.
2) ಜಠರ, ಬೆನ್ನುಮೂಳೆ, ಉದರದ ಭಾಗಗಳಿಗೆ ಚೈತನ್ಯ ನೀಡುತ್ತದೆ.
3) ಬೆನ್ನು ಮೂಳೆ ನೇರವಾಗಿರುವುದರಿಂದ ಜ್ಞಾನತಂತುಗಳು ಸರಿಯಾಗಿ ಕಾರ್ಯ ನಿರ್ವಹಿಸುವುದು.
4) ವಿಚಾರ ಮತ್ತು ಸ್ಮರಣ ಶಕ್ತಿ ಹೆಚ್ಚುವುದು.
5) ಮನಸ್ಸನ್ನು ಕೇಂದ್ರೀಕರಿಸಲು ಸಹಾಯಕಾರಿ.
6) ಪ್ರಾಣಾಯಾಮ ಮತ್ತು ಧ್ಯಾನಕ್ಕೆ ಅತ್ಯುತ್ತಮ ಆಸನವಾಗಿದೆ.
7) ಗರ್ಬಿಣಿ ಸ್ತ್ರೀಯರಿಗೆ ಪ್ರಸವದ ಸಮಯದಲ್ಲಿ ಸಹಕಾರಿ.
8) ಋತು ಸ್ರಾವದ ತೊಂದರೆಗಳಿಂದ ಉಪಶಮನ.
ಬೆನ್ನು ಬಲಗೊಳ್ಳಲು ಪೂರ್ವೋತ್ತಾನಾಸನ
ಸೂಚನೆಗಳು:
ಮೊಣಕೈ ಮತ್ತು ಮೊಣಕಾಲುಗಳಲ್ಲಿ ಗಾಯ ಅಥವಾ ತೊಂದರೆ ಇದ್ದಲ್ಲಿ ನುರಿತ ಯೋಗ ಶಿಕ್ಷಕರಿಂದ ಸಲಹೆ ಪಡೆದು ಅಭ್ಯಾಸ ಮಾಡತಕ್ಕದ್ದು.
ಲೇಖನ: ಶ್ರೀ ಗಣೇಶ, ಯೋಗ ತರಬೇತುದಾರ.
