
ಸೂರ್ಯಕಾಂತಿ ಬೆಳೆಯಲ್ಲಿ ರೋಗ ಕಂಡರೆ ತಕ್ಷಣವೇ ಹೀಗೆ ಮಾಡಿ

ವಾತಾವರಣದಲ್ಲಿನ ವ್ಯತ್ಯಾಸದಿಂದಾಗಿ ಸೂರ್ಯಕಾಂತಿ ಬೆಳೆಯಲ್ಲಿ ರೋಗಗಳು ಕಾಣಿಸಿಕೊಳ್ಳಲಾರಂಭಿಸಿದೆ. ಕೆಲವು ಗಿಡಗಳ ಕಾಂಡಗಳ ಮೇಲೆ ಕಂದು ಬಣ್ಣದ ಉದ್ದನೇಯ ಅಂಗಮಾರಿ ಚುಕ್ಕೆಯ ಲಕ್ಷಣಗಳು, ತೀವ್ರ ಭಾದೀತ ಗಿಡಗಳು ಮಧ್ಯದಲ್ಲಿ ಬಿದ್ದು ಹೋಗಿರುವ ಲಕ್ಷಣಗಳಿವೆ ಮತ್ತು ಮುರಿದ ಕಾಂಡಗಳು ಟೊಳ್ಳಾಗುತ್ತಿವೆ.
ವಿಜ್ಞಾನಿಗಳು ಇತ್ತೀಚೆಗೆ ಸೂರ್ಯಕಾಂತಿ ಬೆಳೆ ತೋಟಕ್ಕೆ ಭೇಟಿ ಕೊಟ್ಟಾಗ ಗಿಡಗಳಲ್ಲಿ ಇಂಥ ಸಮಸ್ಯೆಗಳು ಇರುವುದು ಕಂಡು ಬಂದಿದೆ. ಶೇ. 10 ರಿಂದ 15 ರಷ್ಟು ಈ ರೋಗದ ಲಕ್ಷಣಗಳು ಕಂಡು ಬಂದಿವೆ. ಇದಕ್ಕೆ ತಕ್ಷಣವೇ ಪರಿಹಾರ ಕಂಡುಕೊಳ್ಳದೇ ಇದ್ದರೆ ಇರುವ ಎಲ್ಲ ಗಿಡಗಳಿಗೂ ಈ ರೋಗ ವ್ಯಾಪಿಸಿ ಸಂಪೂರ್ಣ ಬೆಳೆಯನ್ನು ನಾಶ ಮಾಡುವ ಅಪಾಯ ಇದೆ.
ಇದನ್ನೂ ಓದಿ: ಈರುಳ್ಳಿಗೆ ಹಳದಿ ರೋಗ ಬಾಧೆ: ರೈತರಿಗೆ ವಿಜ್ಞಾನಿಗಳ ಸಲಹೆ
ಏನಿದು ರೋಗ ಬಾಧೆ?
ವಾತಾವರಣದಲ್ಲಿ ಹೆಚ್ಚಿನ ಆರ್ಧತೆ ಹಾಗೂ ತುಂತುರು ಮಳೆಯಿಂದ ಈ ತರಹದ ಲಕ್ಷಣಗಳು ಕಂಡು ಬಂದಿವೆ. ಇದು ಪೊಮಾಪ್ಸಿಸ್ ಅಂಗಮಾರಿ ಶಿಲಿಂದ್ರ ರೋಗದ ಬಾಧೆ ಎಂದು ಕೃಷಿ ವಿಜ್ಞಾನಿಗಳು ಗುರುತಿಸಿದ್ದಾರೆ. ಕೆಲ ಸೂಕ್ಷ್ಮಿ ಜೀವಿಗಳ ಬೆಳವಣಿಗೆಯಿಂದ ಗಿಡಗಳು ಟೊಳ್ಳಾಗಿ ಹಾಳಾಗುತ್ತಿವೆ.
ಇದನ್ನೂ ಓದಿ: ಯೂರಿಯಾ ಬಳಸುವ ಮುನ್ನ ಎಚ್ಚರ: ತಜ್ಞರು ಕೊಟ್ಟ ಸಲಹೆ ಏನು?
ಪರಿಹಾರ ಏನು?
ರೋಗದ ಹತೋಟಿಗಾಗಿ ಮೆಂಕೋಜಬ್ 2 ಗ್ರಾಂ, ಪ್ರೊಪಿಕೊನೊಜಿಲ್ 1 ಮಿ.ಲೀ. ಅಥವಾ ಕಾಪರ್ ಆಕ್ಸಿ ಕ್ಲೋರೈಡ್ 3 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ರೋಗದ ಲಕ್ಷಣಗಳು ತೀರ್ವವಾಗಿದ್ದರೆ 15 ದಿವಸದ ನಂತರ ಮತ್ತೊಮ್ಮೆ ಈ ಸಿಂಪರಣೆಯನ್ನು ಮಾಡಬೇಕು ಎಂದು ಕೃಷಿ ವಿಜ್ಞಾನಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಸ್ವಯಂ ಉದ್ಯೋಗಕ್ಕೆ ಹೈನುಗಾರಿಕೆ, ಗೊಬ್ಬರ ತಯಾರಿಕೆ ತರಬೇತಿ – ಸಾಲ
ವಿಜ್ಞಾನಿಗಳ ತಂಡದಲ್ಲಿ ಕೃಷಿ ವಿಜ್ಞಾನಿ ಅರುಣ ಆರ್ ಸತರೆಡ್ಡಿ, ಅರ್ಜುನ್ ಹಲಗತ್ತಿ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಇದ್ದರು.
Received item fast, thank you