Select Page

ಮಧುಮೇಹ ನಿಯಂತ್ರಣಕ್ಕೆ ಉಪಯುಕ್ತ ಪಶ್ಚಿಮೋತ್ತಾಸನ

ಮಧುಮೇಹ ನಿಯಂತ್ರಣಕ್ಕೆ ಉಪಯುಕ್ತ ಪಶ್ಚಿಮೋತ್ತಾಸನ

ಪಶ್ಚಿಮೋತ್ತಾಸನ ನೆಲದಮೇಲೆ ಕುಳಿತು ಮುಂದಕ್ಕೆ ಬಾಗಿ ಮಾಡುವ ಆಸನ. ಈ ಆಸನದಿಂದ ಬೆನ್ನು ಮತ್ತು ಸೊಂಟದ ಭಾಗಗಳಿಗೆ ಹೆಚ್ಚಿನ ವ್ಯಾಯಾಮ ಸಿಕ್ಕಿ ಆ ಭಾಗಕ್ಕೆ ರಕ್ತ ಸಂಚಾರ ಉತ್ತಮಗೊಳ್ಳಲು ಸಹಾಯಕಾರಿಯಾಗುತ್ತದೆ.

ನಪುಂಸಕತ್ವ, ಮಲಬದ್ಧತೆ, ಜೀರ್ಣಕ್ರಿಯೆಯಲ್ಲಿನ ತೊಂದರೆಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.

ಮಾಡುವ ವಿಧಾನ:

1)ನಿ ಮ್ಮ ಎರಡು ಕಾಲುಗಳನ್ನು ಮುಂದಕ್ಕೆ ಚಾಚಿ ದಂಡಾಸನದಲ್ಲಿ ಬೆನ್ನು ನೇರವಾಗಿರಿಸಿ ಕುಳಿತುಕೊಳ್ಳಿ.

2) ನಿಮ್ಮ ಎರಡು ಹಸ್ತ ಪ್ರಷ್ಠದ ಬದಿಗಿರಿಸಿ. ಈಗ ಆಳವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ಎರಡು ಕೈಗಳನ್ನು ನೇರವಾಗಿ ತಲೆಯ ಮೇಲಕ್ಕೆತ್ತಿ.

3) ಉಸಿರನ್ನು ಹೊರ ಹಾಕುತ್ತಾ (ರೇಚಕ) ನಿಧಾನವಾಗಿ ಮುಂದಕ್ಕೆ ಬಾಗಿ ಕೈ ಬೆರಳುಗಳಿಂದ ಕಾಲಿನ ಹೆಬ್ಬೆರಳನ್ನು ಹಿಡಿದುಕೊಂಡು ಹಣೆಯನ್ನು ಮೊಣಕಾಲಿಗೆ ತಾಗಿಸಲು ಪ್ರಯತ್ನಿಸಿ. ಮೊಣಕಾಲು ನೇರವಾಗಿರಲಿ.

4) ಇದೇ ಸ್ಥಿತಿಯಲ್ಲಿ ಐದು ಬಾರಿ ಆಳವಾಗಿ ಉಸಿರಾಟ ಮಾಡಿ. ನಂತರ ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ನಿಧಾನವಾಗಿ ಮೇಲಕ್ಕೆ ಬನ್ನಿ.

5) ಉಸಿರನ್ನು ಹೊರ ಹಾಕುತ್ತಾ (ರೇಚಕ) ನಿಧಾನವಾಗಿ ಕೈಯನ್ನು ಕೆಳಗೆ ಇಳಿಸಿ. ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಿ.

ಇದನ್ನೂ ಓದಿ: ಕಾಲು, ಬೆನ್ನು ನೋವು ನಿವಾರಣೆಗೆ ಪರೀವೃತ್ತ ತ್ರಿಕೋನಾಸನ

ಇದನ್ನೂ ಓದಿ: ವಾತ, ಬೆನ್ನು ನೋವು ಪರಿಹಾರಕ್ಕೆ ದಂಡಾಸನ

ಉಪಯೋಗಗಳು:

1) ಜಠರದ ಎಲ್ಲಾ ಸ್ನಾಯುಗಳು ಬಲಗೊಳ್ಳುತ್ತವೆ.

2) ಬೆನ್ನೆಲುಬು ಸ್ನಾಯು ಹಾಗೂ ಅಸ್ತಿ ರುಜುವಿನ ಶಕ್ತಿ ವೃದ್ಧಿಸುತ್ತದೆ.

3) ಬೆನ್ನಿನ ಭಾಗಕ್ಕೆ ರಕ್ತ ಸಂಚಾರ ಹೆಚ್ಚಾಗಿ ಬೆನ್ನು ಹುರಿಯ ಸಾಮರ್ಥ್ಯ ಚುರುಕಾಗುತ್ತದೆ.

4) ಸೊಂಟ ಮತ್ತು ಹೊಟ್ಟೆಯ ಭಾಗದ ಮಾಂಸ ಕರಗಿ ದೇಹ ತೆಳುವಾಗುತ್ತದೆ.

5) ಮೂತ್ರ ಪಿಂಡ ಮತ್ತು ಜೀರ್ಣಾಂಗಗಳಿಗೆ ಉತ್ತಮ ಆಸನ.

6) ಮಧುಮೇಹ ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ.

ಇದನ್ನೂ ಓದಿ: ಬುದ್ಧಿ ಶಕ್ತಿ ಚುರುಕಾಗಲು ಏಕ ಪಾದ ಉತ್ಕಟಾಸನ

ಸೂಚನೆಗಳು:

ಬೆನ್ನುಮೂಳೆ ಗಾಯ, ಸ್ಲೀಪ್ ಡಿಸ್ಕ್, ಸೊಂಟದ ನೋವು ಇದ್ದಲ್ಲಿ ಈ ಆಸನದ ಆಚರಣೆ ಬೇಡ.

ಲೇಖನ: ಶ್ರೀ ಗಣೇಶ, ಯೋಗ ತರಬೇತುದಾರ.

Leave a reply

Your email address will not be published. Required fields are marked *