Select Page

ನ್ಯಾನೋ ಯೂರಿಯಾ ಬಳಸುವುದು ಹೇಗೆ ಗೊತ್ತೇ?

ನ್ಯಾನೋ ಯೂರಿಯಾ ಬಳಸುವುದು ಹೇಗೆ ಗೊತ್ತೇ?

ಕೃಷಿ ಮಾಡುವ ಪ್ರತಿಯೊಬ್ಬರಿಗೂ ಯೂರಿಯಾ ಗೊಬ್ಬರದ ಬಗ್ಗೆ ಗೊತ್ತೇ ಇದೆ. ಚೀಲಗಟ್ಟಲೆ ಬರುವ ಯೂರಿಯಾಗಿಂತ ಹೆಚ್ಚು ಗುಣಮಟ್ಟವುಳ್ಳ ನ್ಯಾನೊ ಯೂರಿಯಾ (Nano urea liquid) ಎಂಬ ಹೊಸ ಗೊಬ್ಬರ ಸಂಶೋದನೆಗೊAಡಿದೆ. ನ್ಯಾನೊ ಯೂರಿಯಾ ಈಗಿನ ಹೆಚ್ಚು ಸುದ್ದಿಯಲ್ಲಿದೆ.

ಇದು ಸಾಮಾನ್ಯ ಯೂರಿಯಾಗಿಂತ ಅತ್ಯಂತ ಕಡಿಮೆ ಬೆಲೆ ಹೊಂದಿದ್ದು, ಹೆಚ್ಚು ಉಪಯೋಗಕಾರಿಯಾಗಿದೆ.
ನ್ಯಾನೊ ಯೂರಿಯಾ ಎಂದರೆ ಏನು?, ಅದನ್ನು ಬಳಸುವುದು ಹೇಗೆ? ಸಾಮಾನ್ಯ ಯೂರಿಯಾಗಿಂತ ನ್ಯಾನೊ ಯೂರಿಯಾ ಯಾಕೆ ಉತ್ತಮ?, ಅದರ ಬೆಲೆ ಹೀಗೆ ನ್ಯಾನೊ ಯೂರಿಯಾ ಬಗ್ಗೆ ವಿಜ್ಞಾನಿಗಳು ನೀಡಿರುವ ಸಂಪೂರ್ಣ ವಿವರ ಇಲ್ಲಿದೆ. ಈ ವರದಿಯನ್ನೊಮ್ಮೆ ಪೂರ್ತಿಯಾಗಿ ಓದಿ.

Read: ಈ ಬೀಜದಿಂದ ಭೂಮಿಯೇ ಬಂಜರಾಗಬಹುದು

ನ್ಯಾನೊ ಯೂರಿಯಾ

ನ್ಯಾನೊ ಯೂರಿಯಾ (Nano urea liquid) ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಉಂಟುಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. 5೦೦- ಎಂ.ಎಲ್. ನ್ಯಾನೋ ಯೂರಿಯಾ 45 ಕೆಜಿ ಮಾಮೂಲಿ ಯೂರಿಯಾಕ್ಕೆ ಸಮನಾಗಿದೆ. ಇದರ ಬೆಲೆ ಒಂದು ಬಾಟಲಿಗೆ 24೦ ರೂಪಾಯಿ.

ಸಹಕಾರಿ ವಲಯದ ಇಫ್ಕೋ ಕಂಪನಿಯು ಗುಜರಾತಿನ ಕಲೋಲ್ ಸೇರಿದಂತೆ ದೇಶದಲ್ಲಿ ಈಗಾಗಲೇ 3 ಕಡೆ ನ್ಯಾನೋ ಯೂರಿಯಾ ಘಟಕ ಸ್ಥಾಪಿಸಿದೆ. ಇನ್ನೂ ನಾಲ್ಕು ಕಡೆ ಹೊಸ ಘಟಕಗಳನ್ನು ತೆರೆಯಲಿದೆ. ಇಫ್ಕೋ ಈ ಹಂಗಾಮಿನಲ್ಲಿ 28 ಕೋಟಿ ಬಾಟಲಿ (5೦೦ ಎಂಎಲ್) ನ್ಯಾನೋ ಯೂರಿಯಾ ಉತ್ಪಾದಿಸಲಿದೆ ಎನ್ನುತ್ತಾರೆ ಹಿರಿಯ ಕೃಷಿ ವಿಜ್ಞಾನಿ ಡಾ. ಅಶೋಕ ಪಿ.

ಮಣ್ಣು ವಿಜ್ಞಾನಿ ಡಾ. ರಾಜಕುಮಾರ್ ಜಿ.ಆರ್ ಅವರು ಹೇಳುವ ಪ್ರಕಾರ, ನ್ಯಾನೋ ಯುರಿಯಾ ಸಾರಜನಕವನ್ನು ಬೆಳೆಗೆ ಪುರೈಸಿಲು ಬಳಸಬಹುದಾದ ಸಿಂಪರಣಾ ಗೊಬ್ಬರವಾಗಿದೆ. ಮಣ್ಣಿಗೆ ನೀಡಿದ ಸಾಮಾನ್ಯ ಯುರಿಯಾ ಗೊಬ್ಬರದಿಂದ ಬಿಡುಗಡೆಯಾಗುವ ಸಾರಜನಕದ ಸಂಪೂರ್ಣ ಲಭ್ಯತೆ ಆಗುವುದಿಲ್ಲ. ಬೆಳೆಗೆ ಶೇಕಡಾ 3೦ ರಿಂದ 5೦ ರಷ್ಟು ಮಾತ್ರ ದೊರೆಯುತ್ತದೆ.

ಇದು ವಾತಾವರಣಕ್ಕೆ ಹಾಗೂ ಅಂತರಜಲಕ್ಕೆ ಅಪಾಯವನ್ನು ಉಂಟುಮಾಡುವ ಸಾಧ್ಯತೆಯಿದೆ. ಆದ್ದರಿಂದ ಖರ್ಚು ಕಡಿಮೆ ಮಾಡಲು, ನಷ್ಟ ಕಡಿತಗೊಳಿಸಲು ಈ ನ್ಯಾನೋ ಯುರಿಯಾದ ಸಿಂಪರಣಾ ಗೊಬ್ಬರದಿಂದ ಮಾತ್ರ ಸಾಧ್ಯವಿದೆ.

Read: ಕೃಷಿಯಲ್ಲಿ ಸಾಪ್ಟವೇರ್ ಎಂಜಿನಿಯರ್‌ಗಳನ್ನೇ ಮೀರಿಸಿದ ಸಾಧಕಿ

ಹೇಗಿದೆ ನ್ಯಾನೊ ಯೂರಿಯಾ?

ಒಟ್ಟು 5೦೦ ಎಂಎಲ್ ಬಾಟಲ್=ಒಂದು ಚೀಲ ನ್ಯಾನೋ ಯೂರಿಯಾಗೆ (Nano urea liquid) ಸಮ. ಇದು ಒಟ್ಟು ಶೇ.4ರಷ್ಟು ಸಾರಜನಕ ಹೊಂದಿದ್ದು ನೀರಿನಲ್ಲಿ ಸಮಾನವಾಗಿ ಹರಡುತ್ತದೆ. ನ್ಯಾನೊ ರೂಪದ ಸಾರಜನಕ ಕಣಗಳ ಸರಾಸರಿ ಭೌತಿಕ ಗಾತ್ರವು 3೦-5೦ ನ್ಯಾನೋ ಮೀಟರ್ ವ್ಯಾಪ್ತಿಯಲ್ಲಿರುತ್ತದೆ. ಒಂದು ಬಾಟಲಿಯಲ್ಲಿ 4೦೦೦೦ ಪಿಪಿಎಂ ನೈಟ್ರೋಜನ್ ಲಭ್ಯ.

ನ್ಯಾನೋ ಯೂರಿಯಾದಲ್ಲಿ ಸಾರಜನಕವು ಸುಲಭವಾಗಿ ದೊರೆಯುತ್ತಿದ್ದು 5೦೦ ಮಿಲೀ ಬಾಟಲಿಗೆ 24೦ ರೂ. ಬೆಲೆ ಇದೆ. ಒಂದು ಬಾಟಲ್ ನ್ಯಾನೊ ಯೂರಿಯಾ (5೦೦ ಮಿ.ಲೀ) ಒಂದು ಚೀಲ ಯೂರಿಯಾಕ್ಕೆ (45 ಕೆ.ಜಿ) ಸಮ. ಈಗ ಮಾರುಕಟ್ಟೆಯಲ್ಲಿ ಒಂದು ಚೀಲ ಯೂರಿಯಾಕ್ಕೆ ಕೇಂದ್ರ ಸರಕಾರ 5೦೦ ರೂ. ಸಬ್ಸಿಡಿ ಕೊಡುತ್ತಿದೆ.

ಕೇಂದ್ರ ಸರಕಾರದ ಈ ಹೊರೆಯೂ ನ್ಯಾನೊ ಯೂರಿಯಾದಿಂದ ತಗ್ಗಬಹುದು. ಇದು ಸಾಮಾನ್ಯ ಯೂರಿಯಾಗಿಂತ ಶೇಕಡಾ 1೦ ರಷ್ಟು ಕಡಿಮೆ ಬೆಲೆಯಲ್ಲಿ ಲಭ್ಯ ಎಂದು ಇಫ್ಕೊ ಕಂಪನಿಯ ಅಧಿಕಾರಿ ಡಿ.ಆರ್. ನಾರಾಯಣ್ ಸ್ವಾಮಿ ತಿಳಿಸಿದರು.

ರೈತರ ಹೊಲಕ್ಕೆ ಬರಲಿದೆ ಸಸ್ಯ ಚಿಕಿತ್ಸಾಲಯ: ಉಚಿತ ಸೇವೆ

ರೇಷ್ಮೆ ಸಾಕಾಣಿಕೆ ಮನೆ ಹೇಗಿರಬೇಕು?

ತೆಂಗಿನ ಬೆಳೆಯಲ್ಲಿ ರುಗೋಸ್ ಬಿಳಿನೋಣದ ನಿರ್ವಹಣೆ

1 Comment

Trackbacks/Pingbacks

  1. ಕುರಿ ಸಾಕಾಣಿಕೆ, ಗೊಬ್ಬರ ತಯಾರಿಕೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ | - […] ನ್ಯಾನೋ ಯೂರಿಯಾ ಬಳಸುವುದು ಹೇಗೆ ಗೊತ್ತೇ? […]

Leave a reply

Your email address will not be published. Required fields are marked *