ಮುಂಗಾರಿಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿರುವ ರೈತರಿಗೆ ಗುಣಮಟ್ಟದ ವಿವಿಧ ತಳಿಯ ಬೀಜಗಳನ್ನು ಒದಗಿಸಲೆಂದು ರಾಯಚೂರಿನ ಭೀಮರಾಯನಗುಡಿ ಕೃಷಿ ವಿಶ್ವವಿದ್ಯಾಲಯವು ಹಲವು ತಳಿಗಳನ್ನು ಪರಿಚಯಿಸಿದೆ.

ಅವುಗಳಲ್ಲಿ ಭತ್ತ, ನವಣೆ, ತೊಗರಿ ತಳಿ ಪ್ರಮುಖವಾದದ್ದು. ಶಿಫಾರಸ್ಸು ಮಾಡಿದ ತಳಿಗಳನ್ನು ಬೆಳೆಯುವುದರಿಂದ ಶೇ. 5 ರಿಂದ ಶೇ. 10 ರಷ್ಟು ಹೆಚ್ಚು ಇಳುವರಿ ಪಡೆಯಬಹುದು ಎನ್ನುವುದು ತಜ್ಞರ ಅಭಿಪ್ರಾಯ. ಅದರಂತೆ ಕೃಷಿ ವಿಶ್ವವಿದ್ಯಾಲಯ ಹಲವು ತಳಿಯ ಬೀಜಗಳನ್ನು ಸೋಂಶೋಧಿಸಿದೆ. ಅವುಗಳ ಬಗ್ಗೆ ತಳಿವರ್ಧಕರು ಸೂಚಿಸಿದ ಪ್ರಮುಖ ತಳಿಗಳ ಮಾಹಿತಿ ಇಲ್ಲಿದೆ.

ಭತ್ತ
ತಳಿ: ಗಂಗಾವತಿ ಸೋನಾ ಜಿಜಿವಿ 05-01
ಮಧ್ಯಮ ಅವಧಿ ತಳಿ
ಕಟಾವು ಅವಧಿ: 130-135 ದಿನಗಳು.
ಮುಂಗಾರಿನಲ್ಲಿ ಒಂದು ಎಕರೆಗೆ 25 ರಿಂದ 28 ಕ್ವಿಂಟಾಲ್ ಇಳುವರಿ ಕೊಡುತ್ತದೆ.
ಕಂದು ಜಿಗಿ ಹುಳು ಬಾಧೆ ನಿರೋಧಕ ಶಕ್ತಿ ಹೊಂದಿದೆ.
ಬೆಂಕಿ, ದುಂಡಾಣು, ಅಂಗಮಾರಿ, ಎಲೆ ಕವಚ ಮಚ್ಚೆ ರೋಗ ಸಹನೆ ಸಾಮರ್ಥ್ಯ ಹೊಂದಿದೆ.
ಸವಳು ಜಮೀನುನಲ್ಲಿಯೂ ಈ ತಳಿ ಬೆಳೆಯುತ್ತದೆ.

ತಳಿ: ಸಿಎಸ್ಆರ್ 22
ಕಟಾವು ಅವಧಿ: 130-135 ದಿನಗಳು
ಮುಂಗಾರಿನಲ್ಲಿ ಒಂದು ಎಕರೆಗೆ 24 ರಿಂದ 28 ಕ್ವಿಂಟಾಲ್ ಇಳುವರಿ ಕೊಡುತ್ತದೆ.
ಸವಳು ನಿರೋಧಕ ಶಕ್ತಿ ಹೊಂದಿದೆ.
ಸವಳು ಭೂಮಿಯಲ್ಲಿ ಅಂದರೆ, 8 ರಿಂದ 10 ಡಿಎಸ್ ಸವಳು ಪ್ರಮಾಣದ ಜಮೀನಿನಲ್ಲಿ ಬೆಳೆಯಬಹುದು.
ಅವಲಕ್ಕಿ ಮಾಡಲು ಉತ್ತಮ ತಳಿ.

ತಳಿ: ಸಿರಿ 1253
ಕಟಾವು ಅವಧಿ: 135-140 ದಿನಗಳು.
ಅಕ್ಕಿ ಗುಣಮಟ್ಟ ಹೆಚ್ಚಿದೆ.
ಸೋನಾ ಮುಸುರಿ ಅಕ್ಕಿಯ ಲಕ್ಷಣ ಹೊಂದಿದೆ.
ಮುಂಗಾರಿನಲ್ಲಿ ಒಂದು ಎಕರೆಗೆ 25 ರಿಂದ 28 ಕ್ವಿಂಟಾಲ್ ಇಳುವರಿ ಕೊಡುತ್ತದೆ.

ಕಿಸಾನ್ ಕಾರ್ಡ್ ಇದ್ದರೆ 3 ಲಕ್ಷ ರೂ.ವರೆಗೆ ಸಾಲ; ಕಾರ್ಡ್ ಪಡೆಯುವುದು ಹೇಗೆ?

ತೊಗರಿ ತಳಿಗಳು
ತಳಿ:
ಬಿಎಸ್ಎಂಆರ್ 736
ಈ ತಳಿ 2007ರಲ್ಲಿ ಬಿಡುಗಡೆಯಾಗಿದ್ದು, ನೀರಾವರಿ ಮತ್ತು ನಾಟಿ ಪದ್ಧತಿಗೆ ಯೋಗ್ಯ ತಳಿಯಾಗಿದೆ.
ಇದು ದೀರ್ಘಾವಧಿ ತಳಿ. ಉತ್ತಮ ಇಳುವರಿ ಕೊಡುತ್ತದೆ.
ಕಟಾವು ಅವಧಿ: 170-190 ದಿನಗಳು.
ಪ್ರತಿ ಎಕರೆಗೆ 8-10 ಕ್ವಿಂಟಾಲ್ ಇಳುವರಿ ಕೊಡುತ್ತದೆ.
ನೂರು ಕಾಳುಗಳ ತೂಕ 10ರಿಂದ 11 ಗ್ರಾಂ ಇರುತ್ತದೆ.

ತಳಿ: ಆಶಾ (ಈಸಿಪಿಎಲ್87119)
ಈ ತಳಿ 2001ರಲ್ಲಿ ಬಿಡುಗಡೆ ಮಾಡಲಾಗಿದೆ.
ಕಟಾವು ಅವಧಿ: 170-190 ದಿನಗಳು.
ಒಂದು ಎಕರೆಗೆ 7-9 ಕ್ವಿಂಟಾಲ್ ಇಳುವರಿ ಕೊಡುತ್ತದೆ.
ಸಿಡಿರೋಗ ನಿರೋಧಕ ಶಕ್ತಿ ಹೊಂದಿದೆ. ಗೊಡ್ಡರೋಗಕ್ಕೆ ಸಹಿಷ್ಟುತೆ ಹೊಂದಿದೆ.
ಈ ತಳಿ ನೀರಾವರಿ ಪದ್ಧತಿಯಲ್ಲಿ ಬೆಳೆಯಲು ಉತ್ತಮ.

ತಳಿ: ಟಿಎಸ್-3 ಆರ್
ಈ ತಳಿ 2010ರಲ್ಲಿ ಬಿಡುಗಡೆ ಮಾಡಲಾಗಿದೆ.
ಮಧ್ಯಮಾವಧಿ ತಳಿ.
ಕಡಿಮೆ ಆಳದ ಕಪ್ಪು ಭೂಮಿಗೆ ಸೂಕ್ತ.
ಒಂದು ಎಕರೆಗೆ 5 ರಿಂದ 6 ಕ್ವಿಂಟಾಲ್ ಇಳುವರಿ ಕೊಡುತ್ತದೆ.
ನೆಟೆ ರೋಗ ನಿರೋಧಕ ಶಕ್ತಿ ಹೊಂದಿದೆ.

ಓದಿ: ಬಿತ್ತನೆ ಬೀಜ ಉತ್ಪಾದಕರಾಗಿ; ಕಳಪೆ ಬೀಜ ಪತ್ತೆ ಮಾಡಿ.

ತಳಿ: ಜಿಆರ್ ಜಿ 811 (ಧರ್ಮರಾಜ್)
ಇದು 2015ರಲ್ಲಿ ಬಿಡುಗಡೆ ಮಾಡಿದ ಹೊಸ ತಳಿ
ಕಟಾವು ಅವಧಿ: 150-160 ದಿನಗಳು
ಕಪ್ಪು ಮಣ್ಣಿಗೆ ಯೋಗ್ಯ ತಳಿ.
ಒಂದು ಎಕರೆಗೆ 5 ರಿಂದ 6 ಕ್ವಿಂಟಾಲ್ ಇಳುವರಿ ಕೊಡುತ್ತದೆ.
ನೆಟೆ ರೋಗ, ಗೊಡ್ಡು ರೋಗ ನಿರೋಧಕ ಶಕ್ತಿ ಹೊಂದಿದೆ.

ತಳಿ: ಮಾರುತಿ ತಳಿ
ಇದು 1985ರಲ್ಲಿ ಬಿಡುಗಡೆ ಮಾಡಲಾದ ತಳಿ.
ಕಪ್ಪು ಆಳದ ಮಣ್ಣು ಹೆಚ್ಚು ಸೂಕ್ತ.
ಕಟಾವು ಅವಧಿ: 170-180 ದಿನಗಳು.
ಒಂದು ಎಕರೆಗೆ 6 ರಿಂದ 7 ಕ್ವಿಂಟಾಲ್ ಇಳುವರಿ ಕೊಡುತ್ತದೆ.
ಕಾಳು ಕೆಂಪು ಬಣ್ಣದಲ್ಲಿರುತ್ತದೆ.
ನೆಟೆ ರೋಗ ನಿರೋಧಕ ಶಕ್ತಿ ಹೊಂದಿದೆ.

ಓದಿ: ಕಾಳು ಮೆಣಸು ಅಧಿಕ ಇಳುವರಿ ನೀಡುವ ಸೂಪರ್ ತಳಿಗಳು.

ತಳಿ: ಡಬ್ಲುಆರ್ ಪಿ 1
ಈ ತಳಿಯನ್ನು 2002ರಲ್ಲಿ ಬಿಡುಗಡೆ ಮಾಡಲಾಗಿದೆ.
ಕಟಾವು ಅವಧಿ: 170-190 ದಿನಗಳು.
ಒಂದು ಎಕರೆಗೆ 5 ರಿಂದ 6 ಕ್ವಿಂಟಾಲ್ ಇಳುವರಿ ನೀಡುತ್ತದೆ.
ಬಿಳಿ ಬಣ್ಣದ ಬೀಜ ಹೊಂದಿದೆ.
ನೆಟೆ ರೋಗ ನಿರೋಧಕ ಶಕ್ತಿ ಹೊಂದಿದೆ.

ಕಿಸಾನ್ ಕಾರ್ಡ್ ಇದ್ದರೆ 3 ಲಕ್ಷ ರೂ.ವರೆಗೆ ಸಾಲ; ಕಾರ್ಡ್ ಪಡೆಯುವುದು ಹೇಗೆ?

ನವಣೆ
ತಳಿ: ಎಸ್ಐಎ 2644
ಕಟಾವು ಅವಧಿ: 90-100 ದಿನಗಳು.
ಒಂದು ಎಕರೆಗೆ 10-12 ಕ್ವಿಂಟಾಲ್ ಇಳುವರಿ ನೀಡುತ್ತದೆ.
ಇದು ಮುಂಗಾರಿನಲ್ಲಿ ಬೆಳೆಯಲು ಬಲು ಉತ್ತಮ ತಳಿಯಾಗಿದೆ.

ಮತ್ತಷ್ಟು ಕೃಷಿ ವರದಿಗಳನ್ನು ಓದಲು ಕ್ಲಿಕ್ ಮಾಡಿ.

* ಈ ಎಲ್ಲ ತಳಿಗಳನ್ನು ಹೈದರಾಬಾದ್ ಕರ್ನಾಟಕದ ಬೌಗೋಳಿಕ ಲಕ್ಷಣಗಳಿಗೆ ಅನುಗುಣವಾಗಿ ರಾಯಚೂರಿನ ಭೀಮರಾಯನಗುಡಿ ಕೃಷಿ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿದೆ. ಇನ್ನಿತರ ಮಾಹಿತಿ ಕೃಷಿ ಇಲಾಖೆ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ.

ಕೃಪೆ: ಡಿಡಿ ಚಂದನ