ಇನ್ನು ಮುಂದೆ ರೈತರು ಬೆಳೆಗಳಿಗೆ ರೋಗಬಂದರೆ ಅದಕ್ಕೆ ಉಪಚಾರ ಕಂಡುಕೊಳ್ಳುವುದು ಹೇಗೆ ಎಂದು ಚಿಂತೆ ಮಾಡಬೇಕಿಲ್ಲ. ಒಂದು ಉಚಿತ ಕರೆ ಮಾಡಿದರೆ ಸಸ್ಯ ಚಿಕಿತ್ಸಾಲಯವೇ ರೈತರ ಹೊಲಗಳಿಗೆ ಬರಲಿದೆ.

ಹೌದು ರಾಜ್ಯದ ರೈತರ ಅನೂಕೂಲಕ್ಕಾಗಿ ಅವರ ಹೊಲದಲ್ಲಿಯೇ ಸಲಹೆ ಸೂಚನೆ ಮಾರ್ಗದರ್ಶನ ಹಾಗೂ ತಾಂತ್ರಿಕತೆ ವರ್ಗಾವಣೆಯ ನೀಡುವ ಉದ್ದೇಶದಿಂದ ಕೃಷಿ ಇಲಾಖೆಯಿಂದ ವಿನೂತನವಾಗಿ ಸಂಚಾರಿ ಸಸ್ಯ ಚಿಕಿತ್ಸಾಲಯ (ಕೃಷಿ ಸಂಜೀವಿನಿ) ವಾಹನ ಯೋಜನೆ ಜಾರಿಗೊಳಿಸಲಾಗಿದೆ.

ಸಂಚಾರಿ ಸಸ್ಯ ಚಿಕಿತ್ಸಾಲಯ ವಾಹನದ ಜೊತೆಗೆ ಡಿಪ್ಲೋಮಾ ಪದವಿ ಹೊಂದಿದ ಕೃಷಿ ತಜ್ಞರು ಮತ್ತು ವಿಶೇಷ ಸಮಸ್ಯೆಗಳಿದ್ದಲ್ಲಿ ಸಂಬAಧಿಸಿದ ವಿಷಯ ತಜ್ಞರು ಮತ್ತು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ.

ಈ ವಾಹನವು ಈಗಾಗಲೇ ರೈತರ ಜಮೀನುಗಳಿಗೆ ಭೇಟಿ ನೀಡಲು ಪ್ರಾರಂಭಿಸಿದ್ದು, ಪ್ರತಿ ದಿನ ಒಂದು ತಾಲ್ಲೂಕಿಗೆ ಈ ವಾಹನ ಸಂಚರಿಸಲಿದೆ.

ಸAಚಾರಿ ವಾಹನವು ಬೆಳೆಗಳಲ್ಲಿ ಕಂಡು ಬರುವ ರೋಗ ಮತ್ತು ಕೀಟ ಕಳೆ ಭಾಧೆ ಮಣ್ಣಿನ ಪೋಷಕಾಂಶ ಕೊರತೆಯ ಸಮರ್ಪಕ ನಿರ್ವಹಣೆ ಮತ್ತು ಹತೋಟಿ ಕ್ರಮಗಳನ್ನು ಕೈಗೊಳ್ಳಲು ಇ-ಸ್ಯಾಪ್ ತಂತ್ರಾAಶದ ಮೂಲಕ ರೈತರಿಗೆ ನೆರವಾಗಲಿದೆ. ಮಣ್ಣಿನ ರಸಸಾರ ಮತ್ತು ಸಾವಯವ ಇಂಗಾಲವನ್ನು ವಿಶ್ಲೇಷಿಸಬಹುದು.

ಬರಿಗಣ್ಣಿಗೆೆ ಸ್ಪಷ್ಟವಾಗಿ ಕಾಣದ ಸೂಕ್ಷ್ಮ ಕೀಟಗಳನ್ನು ಗುರುತಿಸಲು ಸ್ಟೀರಿಯೋ ಜೂಮ್ ಸೂಕ್ಷ್ಮದರ್ಶಕ, ಭೂತಗನ್ನಡಿ, ಮಣ್ಣು ತೇವಾಂಶ ಸಂವೇದಕಗಳು, ನಕಲಿ ರಸಗೊಬ್ಬರ ಪತ್ತೆಗಾಗಿ ರಸಗೊಬ್ಬರ ಪರೀಕ್ಷಾ ಕಿಟ್, ಹಾರಾಡುವ ಕೀಟಗಳನ್ನು ಹಿಡಿಯಲು ಕೀಟ ಸಂಗ್ರಹಣಾ ಬಲೆ, ಪೆಟ್ಟಿಗೆ ಹಾಗೂ ರೈತರ ಜಮೀನಿನಲ್ಲಿ ವೈಜ್ಞಾನಿಕ ಸರ್ವೇಕ್ಷಣ ಕೈಗೊಳ್ಳಲು ಮೊದಲಾದ ಉಪಕರಣಗಳು ವಾಹನದಲ್ಲಿ ಲಭ್ಯವಿವೆ.

ಕೃಷಿಗೆ ಸಂಬAಧಿಸಿದ ಕಿರು ವಿಡಿಯೋಗಳನ್ನು ತೋರಿಸಲು ಪ್ರೊಜೆಕ್ಟರ್ ಸೌಲಭ್ಯವು ವಾಹನದಲ್ಲಿರಲಿದೆ. ಈ ವಾಹನದ ಮುಖಾಂತರ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿಯನ್ನು ರೈತರಿಗೆ ತಲುಪಿಸಬಹುದಾಗಿದೆ. ಪ್ರಯೋಗಾಲಯದಿಂದ ರೈತರ ಹೊಲದವರೆಗೆ (ಲ್ಯಾಬ್ ಟು ಲ್ಯಾಂಡ್) ಎನ್ನವುದು ಈ ಯೋಜನೆಯ ಉದ್ದೇಶವಾಗಿದೆ.

ಈ ವಾಹನವು ಜಿ.ಪಿ.ಎಸ್ ವ್ಯವಸ್ಥೆ ಹೊಂದಿರಲಿದೆ. ಈ ಮೂಲಕ ರೈತರು ತಮ್ಮ ಹೊಲದಲ್ಲಿ ಬಂದಿರುವ ರೋಗ ಹಾಗೂ ಕೀಟ ಭಾಧೆಯ ಸಮಸ್ಯೆ ಹಾಗೂ ಮಣ್ಣಿಗೆ ಸಂಬAಧಿಸಿದ ಸಮಸ್ಯೆಗಳಿದ್ದಲ್ಲಿ 155313 ಟೋಲ್ ಫ್ರೀ ಸಹಾಯವಾಣಿಗೆ ಕರೆ ಮಾಡಿದಲ್ಲಿ ಅದನ್ನು ಆಧರಿಸಿ ಕೃಷಿ ಸಂಜೀವಿನಿ ವಾಹನವು ಆ ಭಾಗದಲ್ಲಿ ಸಂಚರಿಸಿ ಅವಶ್ಯವುಳ್ಳ ರೈತರ ಜಮೀನುಗಳಿಗೆ ತೆರಳಿ ಪರಿಶೀಲಿಸಿ ತಾಂತ್ರಿಕ ಮಾಹಿತಿ ಒದಗಿಸಲಿದೆ.