ಮಾನವ ಕೂಡ ಒಬ್ಬ ಪ್ರಾಣಿ. ಮಾನವನಿಗೆ ಜೀವ ಇರುವಂತೆಯೆ ಸಸ್ಯಗಳಿಗೂ ಜೀವ ಇದೆ ಎನ್ನುವುದಕ್ಕೆ ವೈಜ್ಞಾನಿಕ ಸಾಕ್ಷಾಧಾರಗಳು ಇವೆ. ಮನುಷ್ಯರ ರೀತಿಯಲ್ಲಿ ಭೂಮಿಯೂ ಉಸಿರಾಡುತ್ತದೆ ಎಂದರೆ ನಂಬುವುದು ಕಷ್ಟ.

ಉಸಿರಾಟದ ರೀತಿಯಲ್ಲಿಯೇ ಭೂಮಿ ಉಬ್ಬಿ ಇಳಿಯುವ ವಿಡಿಯೊವೊಂದು ಇಲ್ಲಿದೆ. ಉಸಿರಾಡುವಾಗ ಮನುಷ್ಯರ ಹೊಟ್ಟೆ ಹೇಗೆ ಉಬ್ಬಿ ಇಳಿಯುತ್ತದೆಯೋ ಅದೇ ರೀತಿ ಭೂಮಿಯೂ ಉಬ್ಬಿ ಇಳಿಯುತ್ತಿದೆ. ಒಮ್ಮೆಲೆ ನೋಡಿದರೆ ಭೂಮಿಯೇ ಉಸಿರಾಡುತ್ತಿದೆ ಎನಿಸುತ್ತದೆ. ಆ ದೃಶ್ಯವನ್ನು ಆಕರ್ಷಕವಾಗಿ ಸೆರೆ ಹಿಡಿಯಲಾಗಿದೆ.

ಈ ವಿಡಿಯೊ ನೋಡಿ

ಈ ವಿಡಯೊಗೆ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಮ್ಮದೇ ರೀತಿಯಲ್ಲಿ ವಿವರಣೆ ನೀಡಿದ್ದಾರೆ.  ಭೂಮಿ ಉಸಿರಾಡುತ್ತಿಲ್ಲ. ಭೂಮಿಯ ಪದರದ ಮೇಲೆ ದೊಡ್ಡ ಮರಗಳು ಬೆಳೆದಿವೆ. ಜೋರಾಗಿ ಗಾಳಿ ಬೀಸಿದಾಗ ಆ ಮರಗಳು ಮೇಲ್ಮುಖದಲ್ಲಿ ಬಾಗುತ್ತಿವೆ. ಆಗ ಮರದ ಬುಡಗಳು ಎತ್ತಿದಂತಾಗಿ ಭೂಮಿಯ ಪದರವೇ ಮೇಲೆದ್ದು ಕೆಳಗಿಳಿಯುತ್ತಿದೆ. ಅದು ಭೂಮಿಯೇ ಉಸಿರಾಡಿದಂತೆ ಕಾಣುತ್ತಿದೆ. ಇದೊಂದು ಅದ್ಬುತ ವಿಡಿಯೊ ಎಂದು ಐಎಫ್ಎಸ್ ಅಧಿಕಾರಿಯೊಬ್ಬರು ಟ್ವಿಟರ್ ನಲ್ಲಿ ಈ ವಿಡಿಯೊ ಹಂಚಿಕೊಂಡು ವಿವರಣೆ ನೀಡಿದ್ದಾರೆ.

ಇದನ್ನೂ ಓದಿ: ದಟ್ಟಾರಣ್ಯದಲ್ಲಿ ಅಪರಿಚಿತರಿಗೆ ದಾರಿ ತೋರಿಸುವ ಮೂರು ಶ್ವಾನಗಳು

ದ್ವೀಪದಲ್ಲಿ 187 ವರ್ಷಗಳಿಂದ ಬದುಕಿದ್ದಾನೆ ಆತ: ಜಗತ್ತಿನ ಅಚ್ಚರಿ