ಕಾರವಾರದಲ್ಲಿ ಕಪ್ಪೆಯನ್ನೇ ಕಪ್ಪೆ ನುಂಗಿದ ಅಪರೂಪದ ಘಟನೆ
ಕಾರವಾರ: ಕಪ್ಪೆಗಳನ್ನು ಹಾವು ನುಂಗುತ್ತವೆ. ಅಪರೂಪಕ್ಕೆ ಕಪ್ಪೆಗಳೇ ಹಾವನ್ನು ನುಂಗಿದ ಘಟನೆ ಅಲ್ಲಲ್ಲಿ ನಡೆದಿವೆ. ಆದರೆ, ಇಲ್ಲಿ ಕಪ್ಪೆಯೊಂದು ಕಪ್ಪೆಯನ್ನೇ ಆಹಾರವಾಗಿ ಸೇವಿಸುತ್ತಿರುವ ದೃಶ್ಯ ಹುಬ್ಬೇರಿಸುವಂತಿದೆ.
ನೀರಿನಲ್ಲಿ ಮತ್ತು ನೆಲದ ಮೇಲೆ ವಾಸಿಸುವ ಕಪ್ಪೆ ಮಾಂಸಾಹಾರಿ ಪ್ರಾಣಿ. ಕಾರವಾರ ತಾಲೂಕಿನ ಕಡವಾಡ ಗ್ರಾಮದಲ್ಲಿ ಭಾನುವಾರ ರಾತ್ರಿ Bull Frog (ಗೋಂಕರ ಕಪ್ಪೆಯು) tree Frog (ಮರಗಪ್ಪೆ) ಅನ್ನು ನುಂಗುತ್ತಿರುವ ದೃಶ್ಯವನ್ನು ಸ್ಥಳೀಯರಾದ ಅಜಯ ಎನ್ನುವವರು ತಮ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ಈ ವಿಡಿಯೊ ಬಾರೀ ಕುತೂಹಲಕಾರಿಯಾಗಿದೆ. ಕಪ್ಪೆಗಳಲ್ಲಿ ಹೀಗೂ ನಡೆಯುತ್ತದೆ ಎನ್ನುವ ಆಶ್ಚರ್ಯ ಹುಟ್ಟಿಸಿದೆ. ಸಂಶೋಧರಕ ಪ್ರಕಾರ ಪಶ್ಚಿಮಘಟ್ಟದಲ್ಲಿ ವಿಶೇಷ ಪ್ರಬೇಧದ ಕಪ್ಪೆಗಳು ಇವೆ. ಅದರಲ್ಲಿ ಕೆಲವು ತುಂಬಾ ವಿಷಕಾರಿ ಕೂಡ ಹೌದು.
ಇಂಥ ಅನೇಕ ಕುತೂಹಲಗಳು ಪಶ್ಚಿಮ ಘಟ್ಟಗಳಲ್ಲಿ ಕಾಣಸಿಗುತ್ತವೆ. ಅದರಲ್ಲಿ ಕಪ್ಪೆಯೇ ಕಪ್ಪೆಯನ್ನು ನುಂಗಿದ ಅಪರೂಪದ ದೃಶ್ಯ ಇತ್ತೀಚೆಗೆ ಎಲ್ಲಿಯೂ ವರದಿಯಾಗಿಲ್ಲ. ಈ ವಿಷಯದ ಬಗ್ಗೆ ಕನ್ನಡದಲ್ಲಿ ಸಂಶೋಧನಾ ಮಾಹಿತಿ ಕೂಡ ಕಡಿಮೆಯೇ.
ಕಪ್ಪೆಗಳ ಬಗ್ಗೆ ಸಂಶೋಧನೆ ನಡೆಸುತ್ತಿರುವ ಶಿರಸಿಯ ಅಮಿತ ಹೆಗಡೆ ಅವರು ಇದರ ಬಗ್ಗೆ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ಸಾಮನ್ಯವಾಗಿ ದೊಡ್ಡ ಕಪ್ಪೆ ಬೇರೆ ಪ್ರಭೇದಗಳ ಸಣ್ಣ ಕಪ್ಪೆಗಳನ್ನು ಬೇಟೆಯಾಡುತ್ತವೆ. ಇದು ಕಪ್ಪೆ ಗಳಲ್ಲಿ ಸಾಮಾನ್ಯ ವಿಷಯವಾಗಿದ್ದರೂ ನೋಡಲು ಸಿಗುವುದು ತೀರಾ ಅಪರೂಪ ಎನ್ನುತ್ತಾರೆ ಅವರು.