ಕೋವಿಡ್ 19 ಜಗತ್ತಿನ ಆರ್ಥಿಕ ವ್ಯವಸ್ಥೆಯನ್ನೇ ಹಳ್ಳ ಹಿಡಿಸಿದ್ದು ನಿಜ. ಆ ಕಾರಣಕ್ಕೆ ಭಾರತ ಹಣಕಾಸು 2020-2021ನೇ ಸಾಲಿನ ಆರ್ಥಿಕ ವರ್ಷವನ್ನು ಜುಲೈ 1ಕ್ಕೆ ಮುಂದೂಡಲಾಗಿದೆ ಎಂದು ದೇಶದಾದ್ಯಂತ ಸುದ್ದಿ ಹಬ್ಬಿದೆ.

ಹಾಗಂತ ಆರ್ಥಿಕ ವರ್ಷ ಮುಂದು ಹೋಗಿದೆ ಎಂದುಕೊಂಡರೆ ತಪ್ಪು. ಭಾರತ ಸರ್ಕಾರ ಆರ್ಥಿಕ ವರ್ಷವನ್ನು ಮುಂದೂಡಿಲ್ಲ. 2020ರ ಏಪ್ರಿಲ್ 1ರಿಂದೇ ಹೊಸ ಆರ್ಥಿಕ ವರ್ಷ ಆರಂಭವಾಗಿದೆ. ಇದನ್ನು ಭಾರತ ಸರ್ಕಾರದ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೊ (ಪಿಐಬಿ) ಖಚಿತಪಡಿಸಿದೆ. ಎಲ್ಲೆಡೆ ಹರಿದಾಡುತ್ತಿರುವ ಗೆಜೆಟ್ ನೋಟಿಪಿಕೇಶನ್ ನಲ್ಲಿಯೂ ಆರ್ಥಿಕ ವರ್ಷ ಮುಂದೂಡಲಾಗಿದೆ ಎಂದು ಹೇಳಿಲ್ಲ.

ಹಾಗಾದರೆ ಮುಂದೂಡಿದ್ದು ಏನು?, ಸೋಸಿಯಲ್ ಮೀಡಿಯಾಗಳಲ್ಲಿ ಹರಿದಾಡಿದ ಗೆಜೆಟ್ ನೋಟಿಪಿಕೇಶನ್ ಏನು ಎನ್ನುವ ಪ್ರಶ್ನೆಗಳು ಮೂಡುವುದು ಸಹಜ. ಅದೆಲ್ಲದರ ಬಗ್ಗೆ ಇಲ್ಲಿ ವವರಣೆ ಇದೆ. ಈ ವರದಿ ಪೂರ್ತಿ ಓದಿ.

ಸ್ಟಾಕ್ ಎಕ್ಸಚೇಂಜ್ ಸಂಬಂಧಿಸಿದಂತೆ ತಿದ್ದುಪಡಿ ನಿಯಮವನ್ನು ಏಪ್ರಿಲ್ 1ರಿಂದ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಆದರೆ, ಸದ್ಯ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶವೇ ಲಾಕ್ ಡೌನ್ ಆಗಿದ್ದರಿಂದ ಆ ತಿದ್ದುಪಡಿ ನಿಯಮವನ್ನು ಜಾರಿಗೆ ತರುವ ದಿನಾಂಕವನ್ನು ಮುಂದೂಡಲಾಗಿದೆ. ಸಂಪೂರ್ಣವಾಗಿ ಆರ್ಥಿಕ ವರ್ಷವನ್ನೇ ಮುಂದೂಡಲಾಗಿದೆ ಎನ್ನುವುದು ಸುಳ್ಳು ಎಂದು ಮಾರ್ಚ್ 30ಕ್ಕೆ ಪಿಐಬಿ ಪ್ರಕಟಿಸಿದೆ. ಪಿಐಬಿ ಫ್ಯಾಕ್ಟ್ ಚೆಕ್ ಕೂಡ ಸುದ್ದಿ ಮಾಧ್ಯಮಗಳು ಹರಡಿದ ಸುದ್ಧಿ ಸುಳ್ಳು ಎಂದು ಹೇಳಿದೆ.

ಅಲ್ಲದೆ, 2018-19 ಸಾಲಿನ ಟಿಡಿಎಸ್, ಟ್ಯಾಕ್ಸ್ ಗಳಿಗೆ ಸಂಬಂಧಿಸಿದಂತೆ ಅದರ ಪಾವತಿ ಅವಧಿಯನ್ನು 2020 ಜೂನ್ 30 ವರೆಗೆ ವಿಸ್ತರಿಸಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರು ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಆದರೆ, 2020 ಆರ್ಥಿಕ ವರ್ಷವನ್ನು ವಿಸ್ತರಿಸಿರುವ ಬಗ್ಗೆ ಹೇಳಿಲ್ಲ.

ಎಲ್ಲೆಡೆ ಹರಿದಾಡುತ್ತಿರುವ ಈ ಗೆಜೆಟ್ ನೋಟಿಪಿಕೇಶನ್ ನಲ್ಲಿಯೂ ಆರ್ಥಿಕ ವರ್ಷ ಮುಂದೂಡಲಾಗಿದೆ ಎಂದು ಸ್ಪಷ್ಟವಾಗಿ ಹೇಳಿಲ್ಲ. ಬದಲಾಗಿ ಜನವರಿಯಲ್ಲಿ ಮಾಡಿದ್ದ ಗೆಜೆಟ್ ನೋಟಿಪಿಕೇಶನ್ ಗೆ ಸಂಬಂಧಿಸಿದಂತೆ ಅದರ ಅನುಷ್ಠಾನ ದಿನಾಂಕವನ್ನು ಜೂನ್ 31ರವರೆಗೆ ವಿಸ್ತರಿಸಲಾಗಿದೆ ಎಂದು ಇದೆ.

ಪಿಐಬಿ ಹೇಳಿದ್ದೇನು?
ಹಣಕಾಸು ವರ್ಷವನ್ನು ವಿಸ್ತರಿಸಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಸಾರವಾಗಿದೆ. ಭಾರತೀಯ ಅಂಚೆಚೀಟಿ ಕಾಯ್ದೆಯಲ್ಲಿ ಮಾಡಿದ ಕೆಲವು ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರವು 2020ರ ಮಾರ್ಚ್ 30 ರಂದು ಹೊರಡಿಸಿದ ಅಧಿಸೂಚನೆಯನ್ನು ತಪ್ಪಾಗಿ ಉಲ್ಲೇಖಿಸಿ ತಪ್ಪು ಸುದ್ದಿ ಮಾಡಲಾಗಿದೆ. ಹಣಕಾಸು ವರ್ಷದ ವಿಸ್ತರಣೆ ಇಲ್ಲ.

ಕೇಂದ್ರ ಸರ್ಕಾರದ ಸ್ಪಷ್ಟನೆ ಓದಿ https://pib.gov.in/PressReleseDetailm.aspx?PRID=1609424

ಭಾರತೀಯ ಅಂಚೆಚೀಟಿ ಕಾಯ್ದೆಯ ಕೆಲವು ತಿದ್ದುಪಡಿಗಳಿಗೆ ಸಂಬಂಧಿಸಿದಂತೆ 2020ರ ಮಾರ್ಚ್ 30 ರಂದು ಕಂದಾಯ ಇಲಾಖೆಯಿಂದ ಅಧಿಸೂಚನೆ ಹೊರಡಿಸಿದೆ. ಸ್ಟಾಕ್ ಎಕ್ಸ್ಚೇಂಜ್ ಅಥವಾ ಸ್ಟಾಕ್ ಎಕ್ಸ್ಚೇಂಜ್ ಡಿಪಾಸಿಟರಿಗಳಿಂದ ಅಧಿಕೃತಗೊಳಿಸಲಾದ ಕ್ಲಿಯರಿಂಗ್ ಕಾರ್ಪೊರೇಶನ್ ಮೂಲಕ ಭದ್ರತಾ ಮಾರುಕಟ್ಟೆ ಸಲಕರಣೆಗಳ ವಹಿವಾಟಿನ ಮೇಲೆ ಸ್ಟ್ಯಾಂಪ್ ಡ್ಯೂಟಿ ಸಂಗ್ರಹಿಸಲು ಜಾರಿಗೆ ತರಲು ತಿದ್ದಪಡಿ ಮಾಡಲಾಗಿತ್ತು.
ಈ ಬದಲಾವಣೆಯನ್ನು 2020ರ ಏಪ್ರಿಲ್ 1 ರಿಂದ ಜಾರಿಗೆ ತರಲು ಮೊದಲೇ ತಿಳಿಸಲಾಗಿತ್ತು. ಆದರೆ, ಸದ್ಯದ ಪರಿಸ್ಥಿತಿಯಿಂದಾಗಿ, ಅನುಷ್ಠಾನದ ದಿನಾಂಕವನ್ನು 2020ರ ಜುಲೈ 1 ಕ್ಕೆ ಮುಂದೂಡಲು ನಿರ್ಧರಿಸಲಾಗಿದೆ. ಅದನ್ನೇ ತಪ್ಪಾಗಿ ಗ್ರಹಿಸಿ ಆರ್ಥಿಕ ವರ್ಷವನ್ನೇ ಮುಂದೂಡಲಾಗಿದೆ ಎಂದು ಸುದ್ದಿ ಹಬ್ಬಿವೆ.

ಇದನ್ನೂ ಓದಿ: ಬದುಕಿರುವ ವೈದ್ಯನಿಗೆ ಕೊರೊನಾ ಸಾವಿನ ಸುಳ್ಳು ಕತೆ ಹಣೆದರು