COVID-19 ಸಾಂಕ್ರಾಮಿಕ ರೋಗದಿಂದಾಗಿ ಪ್ರಪಂಚವು ಅಪಾಯವನ್ನು ಎದುರಿಸುತ್ತಿದೆ.  ವೈದ್ಯಕೀಯ ಸಿಬ್ಬಂದಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ ವೈದ್ಯರ ಕುರಿತ ಅನೇಕ ಗಾಳಿ ಸುದ್ದಿಗಳು ಹರಿದಾಡುತ್ತಿವೆ.

ಇವುಗಳಲ್ಲಿ, ಒಬ್ಬ ವ್ಯಕ್ತಿಯು ಗೇಟ್‌ನ ಮುಂದೆ ನಿಂತು ತನ್ನ ಇಬ್ಬರು ಮಕ್ಕಳನ್ನು ನೋಡುತ್ತಿರುವ ಚಿತ್ರವಿದೆ. ಇಂಡೋನೇಷ್ಯಾದ ಬಿಂಟಾರೊ ಪ್ರೀಮಿಯರ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಹ್ಯಾಡಿಯೊ ಅಲಿ ಖಜಕಿಸ್ತಾನ್ ಅವರು 2020 ರ ಮಾರ್ಚ್ 22 ರಂದು ಕರೋನಾ ಕೋವಿಡ್ -19 ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಹರಿಬಿಡಲಾಗಿದೆ.

ಡಾ. ಹ್ಯಾಡಿಯೊ ಅಲಿ

ಫೇಸ್ ಬುಕ್, ಟ್ವಿಟರ್ ಗಳಲ್ಲಿ ಹರಿದಾಡುತ್ತಿರುವ ವಿವರಣೆ ಏನೆಂದರೆ, “# ಹಾರ್ಟ್ ಬ್ರೇಕಿಂಗ್: ಈ ಚಿತ್ರವು ಹೇಳಲು ಬಹಳಷ್ಟು ಸಂಗತಿಗಳನ್ನು ಹೊಂದಿದೆ. ಇದು ಡಾ. ಹ್ಯಾಡಿಯೊ ಅಲಿಯ ಕೊನೆಯ ಫೊಟೊ ಆಗಿದೆ (# ಜಕಾರ್ತಾ, # ಇಂಡೋನೇಷ್ಯಾದಲ್ಲಿ # ಕೊರೋನಾ ವೈರಸ್ ಪೀಡಿತ ಜನರಿಗೆ ಚಿಕಿತ್ಸೆ ನೀಡಿದ ನಂತರ ವೈದ್ಯರು ಇತ್ತೀಚೆಗೆ ನಿಧನರಾದರು). ಇದು ಅವರ ಕೊನೆಯ ಭೇಟಿ. ಗೇಟ್ ಬಳಿ ನಿಂತು ಅವನ ಮಕ್ಕಳು ಮತ್ತು ಗರ್ಭಿಣಿ ಹೆಂಡತಿಯನ್ನು ನೋಡುತ್ತಿದ್ದಾರೆ. ” ಎಂದು ಪೋಸ್ಟ್ ಮಾಡಿ ಚಿತ್ರವನ್ನು ಹಂಚಿಕೊಳ್ಳಲಾಗಿದೆ.

ಸತ್ಯ ಶೋಧನೆ:
ಚಿತ್ರವನ್ನು ರಿವರ್ಸ್ ಇಮೇಜ್ ನಲ್ಲಿ ಹುಡುಕಾಡಿದಾಗ, ಅದು ಮಾರ್ಚ್ 22, 2020 ರಿಂದ ವೈರಲ್ ಆಗಿದೆ. ಮಲೇಷಿಯಾದ ಅಹ್ಮದ್ ಎಫೆಂಡಿ ಜೈಲನುಡಿನ್ ಎಂಬ ಫೇಸ್‌ಬುಕ್ ಬಳಕೆದಾರರು ಈ ಚಿತ್ರವನ್ನು ಮೊದಲು ಹಂಚಿಕೊಂಡಿದ್ದಾರೆ. ಅವರ ಪೋಸ್ಟ್ ಪ್ರಕಾರ, ಚಿತ್ರದಲ್ಲಿರುವ ವ್ಯಕ್ತಿ ಅವರ ಸೋದರಸಂಬಂಧಿ ಮತ್ತು ಮಲೇಷಿಯಾದ ವೈದ್ಯ.

ಅವರ ಪೋಸ್ಟ್ ಇಲ್ಲಿದೆ:
ಈ ಚಿತ್ರದಲ್ಲಿ ಇರುವವನು ನನ್ನ ಸೋದರ ಸಂಬಂಧಿ. ಅವರು ವೈದ್ಯರು. ಅವನಿಗೆ ಒಂದು ಕುಟುಂಬವೂ ಇದೆ. ದೇಶದಲ್ಲಿ ಕೋವಿಡ್ 19 ಸಾಂಕ್ರಾಮಿಕ ಸ್ಥಿತಿಯಲ್ಲಿರುವಾಗ ದೇಶಕ್ಕೆ ಅವರ ಅಗತ್ಯವಿದೆ. ಹಾಗಾಗಿ ಮಕ್ಕಳು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಹೀಗಿರುವಾಗ ಅವನು ದೂರದಿಂದ ಮಕ್ಕಳನ್ನು ಭೇಟಿಯಾಗುವುದು ಹೇಗೆ. ನಾನು ಕೂಡ ತಂದೆ. ನಾನು ಈ ಚಿತ್ರವನ್ನು ನೋಡಿದಾಗ ಪ್ರಭಾವಿತನಾಗಿದ್ದೇನೆ. ಅವನ ಮಕ್ಕಳ ಬಗ್ಗೆ ಅವನಿಗೆ ಹೇಗೆ ಅನಿಸುತ್ತಿರಬಹುದು. ನಿಜ ಅವನು ಮಕ್ಕಳನ್ನು ತಬ್ಬಿಕೊಳ್ಳುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದಾನೆ. ಆದರೆ ಏನು ಮಾಡಬಹುದು, ದೂರದಿಂದಲೇ ಮಕ್ಕಳನ್ನು ನೋಡಬೇಕು.

ಎಫ್‌ಬಿ (ಫೇಸ್ ಬುಕ್) ಸ್ನೇಹಿತರೆ ದಯವಿಟ್ಟು ಸಹಾಯ ಮಾಡಿ. ಆದೇಶಗಳನ್ನು ಸರಿಯಾಗಿ ಅನುಸರಿಸಿ. ಇತರರ ಭಾವನೆಗಳ ಬಗ್ಗೆಯೂ ಯೋಚಿಸಿ. ನೀವು ಮನೆಯಲ್ಲಿ ಕುಟುಂಬದೊಂದಿಗೆ ಕುಳಿತುಕೊಂಡರೆ ನಾವು ನಿಮಗೆ ಕೃತಜ್ಞರಾಗಿರುತ್ತೇವೆ.

ಖಚಿತವಾಗಿದ್ದು ಹೇಗೆ?
ಫ್ಯಾಕ್ಟ್ ಚೆಕಿಂಗ್ ಆರ್ಗನೈಸೇಶನ್ ವೆಬ್‌ಸೈಟ್ https://www.tempo.co/ ವರದಿಯನ್ನು ನೋಡಿದಾಗ, ಈ ಚಿತ್ರವು ಮಲೇಷ್ಯಾದ ಅಹ್ಮದ್ ಎಫೆಂಡಿ ಜೈಲನುಡಿನ್ ಅವರ ಸೋದರಸಂಬಂಧಿಗೆ ಮತ್ತು ಮಲೇಷಿಯಾದ ವೈದ್ಯರಿಗೆ ಸಂಬಂಧಿಸಿದ್ದು ಎಂದು ಖಚಿತವಾಗುತ್ತದೆ. ಆದರೆ ಡಾ. ಹ್ಯಾಡಿಯೊ ಅಲಿ ಅವರಿಗೆ ಸೇರಿದ್ದು ಅಲ್ಲ. ಡಾ. ಹ್ಯಾಡಿಯೊ ಅವರು ಸುರಕ್ಷಿತರಾಗಿದ್ದಾರೆ ಮತ್ತು ಇನ್ನೂ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಈ ವರದಿ ದೃಢಪಡಿಸುತ್ತದೆ. ಅಲ್ಲದೆ, ಅಹ್ಮದ್ ಎಫೆಂಡಿ ಜೈಲನುಡಿನ್ ಕೂಡ ಮಾರ್ಚ್ 27 ರಂದು ಫೇಸ್ ಬುಕ್ ನಲ್ಲಿ ಇದರ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ವೈದ್ಯ ಆರೋಗ್ಯವಾಗಿದ್ದಾನೆ ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಸ್ಪೇನ್ ವಿಮಾನ ನಿಲ್ದಾಣದಲ್ಲಿ ತೆಗೆದ ಫೊಟೊಗೆ ಇಟಲಿ ವೈದ್ಯ ದಂಪತಿ ಸಾವು ಎಂದು ಪೋಸ್ಟ್

ಆದ್ದರಿಂದ, ಈ ಚಿತ್ರವು ಇಂಡೋನೇಷ್ಯಾದ ವೈದ್ಯರಿಗೆ ಸಂಬಂಧಿಸಿದ್ದು. ಡಾ.ಹಡಿಯೊ ಅಲಿ ಅವರು COVID-19 ನಿಂದ ಸಾವನ್ನಪ್ಪಿದ್ದಾರೆ ಎನ್ನುವುದು ತಪ್ಪು ಸುದ್ದಿಯಾಗಿದೆ. ಅವರು ಉತ್ತಮ ಆರೋಗ್ಯದಲ್ಲಿದ್ದಾರೆ ಮತ್ತು ಇನ್ನೂ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದು ಇಟಲಿಯಲ್ಲಿ ಕೊರೊನಾ ಸೃಷ್ಟಿಸಿದ ಹೆಣಗಳ ರಾಶಿಯೇ: ಸತ್ಯ ತಿಳಿದರೆ ಶಾಕ್ ಆಗುತ್ತೀರಿ