ಕೆಲ ದಿನಗಳಿಂದ ವಾಟ್ಸಾಪ್ ಗಳಲ್ಲಿ ಸಂದೇಶವೊಂದು ಹರಿದಾಡುತ್ತಿದೆ. ಕೊರೊನಾದಿಂದ ಮನೆಯಲ್ಲಿಯೇ ಇರುವವರಿಗೆ ನೆಟ್ ಪ್ಲಿಕ್ಸ್ ಪ್ರೀಮಿಯರ್ ಎರಡು ತಿಂಗಳು ಉಚಿತವಾಗಿ ನೀಡಲಾಗುತ್ತಿದೆ ಎಂದು. ಆ ಸಂದೇಶವನ್ನು ಒಬ್ಬೊಬ್ಬರು ಐದಾರು ಗ್ರೂಪ್ ಗಳಿಗೆ ವಾಟ್ಸಾಪ್ ಮಾಡುತ್ತಿದ್ದಾರೆ.

ನೆಟ್ ಪ್ಲಿಕ್ಸ್ ಆ್ಯಪ್ ನಲ್ಲಿ ಆಕರ್ಷಕ ಕಿರು ಚಿತ್ರಗಳು, ದಾರಾವಾಹಿಗಳು, ಹೊಸ ಚಲಚಿತ್ರಗಳು ಪ್ರಸಾರ ವಾಗುತ್ತವೆ. ಪ್ರೀಮಿಯರ್ ಆವೃತ್ತಿ ವೀಕ್ಷಿಸಲು ಪ್ರತಿ ತಿಂಗಳು 199 ಶುಲ್ಕ ಪಾವತಿಸಬೇಕು. ಅದೇ ನೆಟ್ ಪ್ಲಿಕ್ಸ್ ಪ್ರಿಮಿಯರ್ ಅನ್ನು ಕ್ವಾರಂಟೇನ್ ನಲ್ಲಿ ಇರುವವರಿಗಾಗಿ ಎರಡು ತಿಂಗಳು ಉಚಿತವಾಗಿ ನೀಡಲಾಗುತ್ತಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.

ವಾಟ್ಸಾಪ್ ಸಂದೇಶ

ತನಿಖೆಯಲ್ಲಿ ಕಂಡಿದ್ದು…
ನೆಟ್ ಪ್ಲಿಕ್ಸ್ ಪ್ರೀಮಿಯರ್ ಎರಡು ತಿಂಗಳು ಉಚಿತವಾಗಿ ನೀಡುತ್ತೇವೆ ಎಂದು ಸಂದೇಶ ಹರಡುತ್ತಿರುವುದು ವಾಸ್ತವದಲ್ಲಿ ನೆಟ್ ಪ್ಲಿಕ್ಸ್ ಅಲ್ಲ. ನೆಟ್ ಪ್ಲಿಕ್ಸ್ ವೆಬ್ ವಿಳಾಸವನ್ನೇ ಹೋಲುವ ರೀತಿಯ ಗೆಟ್ ಪ್ಲಿಕ್ಸ್ ವೆಬ್ ಸೈಟ್ ರೂಪಿಸಿ ಜನರನ್ನು ಮೂರ್ಖರನ್ನಾಗಿ ಮಾಡಲಾಗುತ್ತಿದೆ.

ನೆಟ್ ಪ್ಲಿಕ್ಸ್ ನ ಅಧಿಕೃತ ವಿಳಾಸ https://www.netflix.com/ ವಾಟ್ಸಾಪ್ ಗಳಲ್ಲಿ ಶೇರ್ ಆಗುತ್ತಿರುವ ಸಂದೇಶದ ವೆಬ್ ವಿಳಾಸ https://officialgetflix.com/ . ಈ ಎರಡೂ ವಿಳಾಸವನ್ನು ಸೂಕ್ಷ್ಮವಾಗಿ ಗಮಿಸಿ. ನೆಟ್ ಪ್ಲಿಕ್ಸ್ ಬದಲು ಗೆಟ್ ಪ್ಲಿಕ್ಸ್ ಎಂದಿದೆ.

ನೆಟ್ ಪ್ಲಿಕ್ಸ್ ಹೋಲುವಂತೆ ಇರುವ ಗೆಟ್ ಪ್ಲಿಕ್ಸ್ ವೆಬ್ ಸೈಟ್ ಮುಖ ಪುಟ.

ವಾಟ್ಸಾಪ್ ನ ಗೆಟ್ ಪ್ಲಿಕ್ಸ್ ಲಿಂಕ್ ಓಪನ್ ಮಾಡಿದರೆ, ಕೊರೊನಾ ಕುರಿತು ಮೂರು ಪ್ರಶ್ನೆಗಳು ಎದುರಾಗುತ್ತವೆ. ಅದಕ್ಕೆ ಯೆಸ್ ಅಥವಾ ನೋ ಉತ್ತರ ಕೊಟ್ಟ ಬಳಿಕ ಮತ್ತೆ ಎರಡು ಆಯ್ಕೆಗಳು ಎದುರಾಗುತ್ತವೆ. ಅದರಲ್ಲಿ ಗೆಟ್ ಪ್ಲಿಕ್ಸ್ ಸಂದೇಶವನ್ನು 20 ಜನರಿಗೆ ಅಥವಾ 5 ವಾಟ್ಸ್ ಆ್ಯಪ್ ಗ್ರೂಪ್ ಗಳಿಗೆ ಶೇರ್ ಮಾಡಿ CONTINUE ಬಟನ್ ಕ್ಲಿಕ್ ಮಾಡಿದರೆ ಎರಡು ತಿಂಗಳ ನೆಟ್ ಪ್ಲಿಕ್ಸ್ ಉಚಿತವಾಗಿ ಸಿಗುತ್ತದೆ ಎಂದು ತಿಳಿಸಿದೆ. ಅದರಂತೆ ಸಂದೇಶವನ್ನು ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಿ ಹಲವರು ಮೋಸ ಹೋಗಿದ್ದಾರೆ.

ನೆಟ್ ಪ್ಲಿಕ್ಸ್ ನಿಯಮ.

ವಾಸ್ತವದಲ್ಲಿ ನೆಟ್ ಪ್ಲಿಕ್ಸ್ ನಿಯಮದಲ್ಲಿ ಎಲ್ಲಿಯೂ ಎರಡು ತಿಂಗಳು ನೆಟ್ ಪ್ಲಿಕ್ಸ್ ಉಚಿತವಾಗಿ ನೀಡುತ್ತೇವೆ ಎಂದು ಹೇಳಿಲ್ಲ. ನೆಟ್ ಪ್ಲಿಕ್ಸ್ ನಿಯಮ ಪ್ರಕಾರ ಮೊದಲ ಒಂದು ತಿಂಗಳು ಮಾತ್ರ ಉಚಿತವಾಗಿ ವಿಡಿಯೊ ನೋಡಬಹುದು. ನಂತರದ ಪ್ರತಿ ತಿಂಗಳು 199 ಶುಲ್ಕ ಪಾವತಿಸಬೇಕಾಗುತ್ತದೆ.

ಅಲ್ಲದೆ https://officialgetflix.com/ . ನೆಟ್ ಪ್ಲಿಕ್ಸ್ ಗೂ ಯಾವುದೇ ಸಂಬಂಧ ಇಲ್ಲ. ಎರಡು ತಿಂಗಳು ಉಚಿತವಾಗಿ ನೀಡುವ ಯಾವುದೇ ಪ್ಲಾನ್ ತಮ್ಮಲ್ಲಿ ಇಲ್ಲ ಎಂದು ನೆಟ್ ಪ್ಲಿಕ್ಸ್ ಸಂಪರ್ಕ ಅಧಿಕಾರಿ ಪ್ರಣವ ದಿ ಸ್ಟೇಟ್ ನೆಟ್ವರ್ಕ್ ವೈರಲ್ ಚೆಕ್ ತಂಡಕ್ಕೆ ಖಚಿತಪಡಿಸಿದ್ದಾರೆ.