ಮಂಡ್ಯದ ವಿ.ಸಿ. ಫಾರಂ ಸಂಶೋಧನಾ ಕೇಂದ್ರವು ಕಬ್ಬು ಸೇರಿ ವಿವಿಧ ಬೆಳೆಗಳ ಸುಧಾರಿತ ತಳಿಗಳನ್ನು ಸಿದ್ಧಪಡಿಸಿದೆ. ಸದ್ಯದಲ್ಲಿಯೇ ಅವುಗಳನ್ನು ಬಿಡುಗಡೆ ಮಾಡಲಿದೆ.

ಈಗಿರುವ ತಳಿಗಳಿಗಿಂತ ಉತ್ತಮ ಗುಣಮಟ್ಟ ಮತ್ತು ಅಧಿಕ ಇಳುವರಿಯನ್ನು ಈ ತಳಿಗಳಿಂದ ಬೆಳೆಯಬಹುದು ಎಂದು ತಜ್ಞರು ವಿಶ್ವಾಸ ವ್ಯಕ್ತಪಡಿಸಿವೆ.

ಮಂಡ್ಯ ಕೃಷಿ ತರಬೇತಿ ಕೇಂದ್ರ, ಕೃಷಿ ತಂತ್ರಜ್ಞರ ಸಂಸ್ಥೆ, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಆಶ್ರಯದಲ್ಲಿ ಆಯೋಜಿಸಿದ್ದ ವಿವಿಧ ತಳಿಗಳ ತರಬೇತಿ ಕಾರ್ಯಕ್ರಮದಲ್ಲಿ ಈ ಮಾಹಿತಿ ಹಂಚಿಕೊಳ್ಳಲಾಗಿದೆ.

ಮಂಡ್ಯ ಜಿಲ್ಲೆಯ ವಿ.ಸಿ.ಫಾರಂನ ವಲಯ ಸಂಶೋಧನಾ ಕೇಂದ್ರದಿಂದ ಹೊಸ ತಳಿಗಳು ಬಿಡುಗಡೆಯಾಗಲಿವೆ.

ಎರಡು ಗುಂಟೆಯಲ್ಲಿ ಲಕ್ಷ ರೂ. ಆದಾಯ ಕೊಡುವ ಹೂ

ಕಬ್ಬು ಸಿ.ಓ.ವಿ.ಸಿ-18061 ತಳಿ

ಕಬ್ಬು ತಳಿಯಲ್ಲಿ ಪ್ರಮುಖವಾಗಿ ವಿ.ಸಿ.ಎಫ್- 0517 ಕಬ್ಬು ತಳಿಯು ಶೇಕಡ 90 ರಷ್ಟು ಪ್ರದೇಶವನ್ನು ಅವರಿಸಿದೆ. ಹಾಗೂ ಸಿ.ಓ.ವಿ.ಸಿ-16061, ಸಿ.ಓ.ಎಫ್.ಸಿ-62, ಪ್ರಸ್ತುತ ಕಬ್ಬಿನ ತಳಿಯಾಗಿದೆ.

ಮುಂದಿನ ವರ್ಷಗಳಲ್ಲಿ ಸಿ.ಓ.ವಿ.ಸಿ-18061 ತಳಿಯನ್ನು ಬಿಡುಗಡೆ ಮಾಡಲಾಗುವುದು. ಈ ಕಬ್ಬಿನ ಒಂದು ಸಸಿಗೆ 7 ರೂಪಾಯಿ ಎಂದು ಸಂಶೋಧನಾ ಕೇಂದ್ರದ ಸಂಶೋಧನಾ ಸಹ ನಿರ್ದೇಶಕ ಡಾ. ಎಸ್.ಎನ್ ವಾಸುದೇವನ್ ತಿಳಿಸಿದ್ದಾರೆ.

ಲಡಕಾಸಿ ಸೈಕಲ್ ಗೂ ಕೆಲಸ ಕೊಟ್ಟ ಮಂಡ್ಯ ರೈತರು

ರಾಗಿ ಕೆ.ಎಂ.ಆರ್- 316 ತಳಿ

ಕಿರುಧಾನ್ಯಗಳಲ್ಲಿ ಒಂದಾದ ರಾಗಿ ತಳಿಯಲ್ಲಿ ಪ್ರಮುಖವಾಗಿ ಎಂ.ಆರ್-1, ಎಂ.ಆರ್-6, ಇಂಡಾಫ್-7, ಕೆ.ಎಂ.ಆರ್-204, ಕೆ.ಎಂ.ಆರ್-301, ಕೆ.ಎಂ.ಆರ್-340, ಕೆ.ಎಂ.ಆರ್- 630, ತಳಿಗಳನ್ನು ಈಗ  5 ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ಮುಂದಿನ ವರ್ಷ ಕೆ.ಎಂ.ಆರ್- 316 ತಳಿಯನ್ನು ಬಿಡುಗಡೆ ಮಾಡಲಾಗುತ್ತಿದೆ.

ಟಗರು ಸಾಕಿ ತಿಂಗಳಿಗೆ ಲಕ್ಷ ರೂ. ಆದಾಯ ಗಳಿಸುವ ರೈತ

ಸೂರ್ಯಕಾಂತಿ, ಭತ್ತ ಹೊಸ ತಳಿ

ಸೂರ್ಯಕಾಂತಿಯಲ್ಲಿ ಪ್ರಮುಖವಾಗಿ 5 ತಳಿಗಳನ್ನು ಸಂಶೋಧನೆ ಮಾಡಲಾಗಿದೆ. ಇದರಲ್ಲಿ 42 ರಿಂದ 45 ರಷ್ಟು ಎಣ್ಣೆ ಅಂಶವಿದೆ ಹಾಗೂ ಭತ್ತದ ತಳಿಯಲ್ಲಿ ಕೆ.ಆರ್.ಹೆಚ್.-4 ತಳಿಯನ್ನು ನಾಲ್ಕು ವರ್ಷಗಳ ಹಿಂದೆ ಸಂಶೋಧನೆ ಮಾಡಲಾಗಿದೆ.

ಎಂ.ಎಸ್.ಎನ್-99 ಎಂಬ ಹೊಸ ತಳಿಯನ್ನು ಮುಂದಿನ ವರ್ಷ ಬಿಡುಗಡೆ ಮಾಡಲಾಗುವುದು. ಜ್ಯೋತಿ ಭತ್ತದ ತಳಿಗೆ ಪರ್ಯಾಯವಾಗಿ ಕೆ.ಎಂ.ಎಫ್-220 ಎಂಬ ತಳಿಯನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಕುವೈತ್ ಕೆಲಸ ಬಿಟ್ಟು ಭಾರತದಲ್ಲಿ ಕೃಷಿಯನ್ನೇ ಮ್ಯೂಸಿಯಂ ಮಾಡಿದ ಕನ್ನಡಿಗ

ನವಣೆ ತಳಿಯಾದ ಜಿ.ಪಿ.ಯು.ಎಫ್ – 3 ತಳಿಯನ್ನು 10 ಜಿಲ್ಲೆಗಳಲ್ಲಿ ಕ್ಷೇತ್ರ ಪ್ರಯೋಗ ಮಾಡಲಾಗಿದೆ. ಸಾಮೆಯ ತಳಿ, ಬರಗು ತಳಿ, ನೆಲಗಡಲೆ, ಮೇವಿನ ಅಲಸಂದೆ, ಮುಸುಕಿನ ಜೋಳಗಳ ಬಗ್ಗೆಯೂ ಶೋಧನೆ ನಡೆಯುತ್ತಿವೆ.