ಕೆಲ ತಿಂಗಳ ಹಿಂದೆಯಷ್ಟೇ ನುಗ್ಗೆ ಕಾಯಿ ಕೇವಲ ಒಂದು ದಂಟಿಗೆ 50ರಿಂದ 60 ರೂ. ಆಗಿತ್ತು. ಒಂದು ಕೆ.ಜಿ. ನುಗ್ಗೆ ಕಾಯಿ ಬೆಲೆ 400 ದಿಂದ 500 ರೂ.ವರೆಗೂ ಬೆಲೆ ಕಂಡಿತ್ತು. ಅದಾದ ಬಳಿಕ ಸರಕಾರಿ ಶಾಲೆಗಳಲ್ಲಿ ಬಿಸಿಯೂಟದಲ್ಲಿ ನುಗ್ಗೆಕಾಯಿ ಬಳಸಬೇಕು ಎಂದು ರಾಜ್ಯ ಸರಕಾರವೇ ಆದೇಶ ಮಾಡಿದೆ.

ಅಷ್ಟಕ್ಕೂ ನುಗ್ಗೆ ಕಾಯಿಗಳಲ್ಲಿ ಅಂಥದ್ದೇನಿದೆ, ಯಾಕಿಷ್ಟು ಬೆಲೆ ಪಡೆಯುತ್ತದೆ ಎಂದು ತಿಳಿದರೆ ಆಶ್ಚರ್ಯ ಎನಿಸುತ್ತದೆ. ಅಲ್ಲದೆ, ಕಿತ್ತಳೆ, ಹಾಲು, ಬಾಳೆಹಣ್ಣು, ಕ್ಯಾರೆಟ್, ಪಾಲಾಕ್, ಬಾದಾಮಿ, ಮೊಟ್ಟೆಗಳಲ್ಲಿರುವ ಸಾರಾಂಶಗಳೆಲ್ಲವೂ ನುಗ್ಗೆ ಸೊಪ್ಪು ಒಂದರಲ್ಲಿಯೇ ಇದೆ ಎಂದು ಹೇಳುತ್ತಾರೆ.

ಬೇಲಿ ಬದಿ, ಹಿತ್ತಲ ಮೂಲೆಯಲ್ಲಿ ಸುಲಭವಾಗಿ ಬೆಳೆಯುವ ನುಗ್ಗೆಯನ್ನು ಆದಾಯದ ಮೂಲವಾಗಿಸಿಕೊಂಡರೆ ಒಂದು ಕುಟುಂಬವನ್ನೇ ಸಲೀಸಾಗಿ ಸಲಹಬಹುದು. ಶಕ್ತಿ ವರ್ದಕ ನುಗ್ಗೆಕಾಯಿಯನ್ನು ಯಾವ ರೀತಿಯಲ್ಲಿ ಸೇವಿಸಿದರೂ ಸರಿಯೇ ಅದು ದೇಹದ ರೋಗ್ಯವನ್ನು ಉತ್ತಮಪಡಿಸುತ್ತದೆ. ನುಗ್ಗೆಕಾಯಿಯಿಂದ ಸಾರು, ಪಲ್ಯಗಳನ್ನು ಮಾಡಬಹುದು.

ಬಿತ್ತನೆ ಬೀಜ ಉತ್ಪಾದಕರಾಗಿ, ಕಳಪೆ ಬೀಜ ಪತ್ತೆ ಮಾಡಿ

ನುಗ್ಗೆ ಸೊಪ್ಪಿನಲ್ಲಿರುವ ಆಹಾರಾಂಶ
ಕಿತ್ತಳೆ ಹಣ್ಣಿಗಿಂತ 7 ಪಟ್ಟು ಹೆಚ್ಚು ವಿಟಮಿನ್ ಸಿ
ಹಾಲಿಗಿಂತ 4 ಪಟ್ಟು ಹೆಚ್ಚು ಕ್ಯಾಲ್ಸಿಯಂ
ಬಾಳೆಹಣ್ಣಿಗಿಂತ 3 ಪಟ್ಟು ಹೆಚ್ಚು ಪೊಟಾಷಿಯಂ
ಕ್ಯಾರೆಟ್‌ಗಿಂತ 4 ಪಟ್ಟು ಹೆಚ್ಚು ವಿಟಮಿನ್‌ ಎ
ಪಾಲಾಕ್‌ಗಿಂತ 3 ಪಟ್ಟು ಹೆಚ್ಚು ವಿಟಮಿನ್‌ ಇ
ಬಾದಾಮಿಗಿಂತ 3 ಪಟ್ಟು ಹೆಚ್ಚು ವಿಟಮಿನ್‌ ಇ
ಮೊಟ್ಟೆಯ ಬಿಳಿಯ ಭಾಗಕ್ಕಿಂತ 2 ಪಟ್ಟು ಹೆಚ್ಚು ಪ್ರೊಟೀನ್

ಎರಡು ಗುಂಟೆ ಒಂದು ಲಕ್ಷ ರೂ. ಆದಾಯ ಕೊಡುವ ಕೃಷಿ

ನುಗ್ಗೆ ರಪ್ತು ಮಾಡುವುದರಲ್ಲಿ ಭಾರತವೇ ನಂ.1
ರಪ್ತು ದೇಶಗಳು
ಭಾರತ : 80%
ಏಷಿಯಾ ಪೆಸಿಫಿಕ್ : 9%
ಆಫ್ರಿಕಾ :8%
ಅಮೇರಿಕ :3%

ಬರಡು ಭೂಮಿಯ ಬಂಗಾರದ ಬೆಳೆ ಚವಳಿಕಾಯಿ: ಅಧಿಕ ಲಾಭ, ಕಡಿಮೆ ಖರ್ಚು

ನುಗ್ಗೆಸೊಪ್ಪಿನಲ್ಲಿ ಅಧಿಕ ಔಷಧೀಯ ಗುಣವಿದೆ ಎಂದು ಅದನ್ನು ಮಿತಿಮೀರಿ ಸೇವಿಸಿದರೆ ಅಪಾಯ. ಇದು ಅತಿಯಾದ ವಿರೇಚಕ ಗುಣ ಹೊಂದಿರುವ ಕಾರಣ, ಹೊಟ್ಟೆನೋವು, ಬೇಧಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು.

ಔಷಧವಾಗಿ ನುಗ್ಗೆ ಸೊಪ್ಪು
ಸೊಪ್ಪು ಬೇಯಿಸಿ ತೆಗೆದ ನುಗ್ಗೆ ಸೊಪ್ಪಿನ ರಸಕ್ಕೆ ಹಾಲು ಸಕ್ಕರೆ ಬೆರೆಸಿ ಮಕ್ಕಳಿಗೆ ಕುಡಿಸುವುದರಿಂಗ ರಕ್ತಶುದ್ದಿಯಾಗಿ, ಆರೋಗ್ಯ ವೃದ್ದಿಯಾಗುತ್ತದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವರ್ಧಿಸುತ್ತದೆ.
ನುಗ್ಗೆಸೊಪ್ಪಿನ ಸಾರು ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ಮಾತೆಯರಿಗೆ ಉತ್ತಮ ಪೋಷಕಾಂಶಗಳಿಂದ ಕೂಡಿದ ಆಹಾರ. ಈ ಸಾರನ್ನು ಅಬಾಲವೃದ್ದಿಯಾದಿಯಾಗಿ ಬಳಸಬಹುದು.

ಅದೃಷ್ಟ ತರಲಿದೆ ಮುಂಗಾರು: ರೈತರಿಗೆ ವಿಜ್ಞಾನಿಗಳ ಸಲಹೆ

ಬೇಯಿಸಿ ಬಸಿದ ನುಗ್ಗೆಸೊಪ್ಪಿನ ರಸಕ್ಕೆ ನಿಂಬೆ ರಸ ಹಿಂಡಿ ಸೇವಿಸಬೇಕು. ಒಂದು ವಾರ ಕಾಲ ಪ್ರತಿದಿನ ಬೆಳಿಗ್ಗೆ ಒಂದು ಬಟ್ಟಲು ರಸ ಸೇವಿಸುತ್ತಿದ್ದರೆ. ತಲೆ ಸುತ್ತುವಿಕೆ ನಿವಾರಣೆಯಾಗುತ್ತದೆ.
ನುಗ್ಗೆಕಾಯಿ ಖಾದ್ಯ ಸೇವಿಸುವುದರಿಂದ ಸಂಧಿವಾತ, ನಿರ್ವೀರ್ಯತೆ, ನರಗಳ ದೌರ್ಬಲ್ಯ ಮಲಬದ್ದತೆ ಇತ್ಯಾದಿ ರೋಗಗಳು ಗುಣವಾಗುತ್ತವೆ.
ಜಂತು ಹುಳುಗಳಿಂದ ಉಂಟಾಗುವ ಹಾನಿಯನ್ನು ನಿವಾರಿಸಲು ನುಗ್ಗೆ ಕಾಯಿಯನ್ನು ಆಗಾಗ್ಗೆ ಊಟದಲ್ಲಿ ಉಪಯೋಗಿಸುವುದು ಲೇಸು.