ಹೊಲಗಳಲ್ಲಿ ಆಹಾರ, ವಾಣಿಜ್ಯ ಬೆಳೆ ಜತೆಯಲ್ಲಿಯೇ ಅರಣ್ಯ ಕೃಷಿ ಮಾಡಿದರೆ ಸರಕಾರವೇ ಹಣ ಕೊಡುತ್ತದೆ. ಅರಣ್ಯ ಇಲಾಖೆಯಲ್ಲಿ ಅಂಥದ್ದೊಂದು ಯೋಜನೆ ಜಾರಿ ಇದೆ. ರೈತರು ಹೊಲ ಅಥವಾ ಹೊಲಗಳ ಬದುಗಳಲ್ಲಿ ಮರಗಳನ್ನು ಬೆಳೆಸುವ ಮೂಲಕ ಹೊಲದ ಗಡಿಯನ್ನು ಭದ್ರ ಪಡಿಸಿಕೊಳ್ಳುವ ಜತೆಗೆ ಬೋನಸ್ ರೂಪದ ಆದಾಯಕ್ಕೆ ದಾರಿ ಮಾಡಿಕೊಳ್ಳಬಹುದು. ಜತೆಗೆ ಅರಣ್ಯ ಇಲಾಖೆಯಿಂದ 40 ಸಾವಿರ ರೂ. ವರೆಗೆ ಪ್ರೋತ್ಸಾಹಧನ ಪಡೆಯಬಹುದು.

ಹಾಗಾಗಿ ನಿಮ್ಮ ಹೊಲಗಳಲ್ಲಿ  ಈ ವರ್ಷ ಅರಣ್ಯ ಗಿಡಗಳನ್ನು ನೆಡುವ ಯೋಜನೆ  ಇದ್ದರೆ ಬೇಗ ಅರಣ್ಯ ಇಲಾಖೆಯ ನರ್ಸರಿಗೆ ಹೋಗಿ ಗಿಡಗಳನ್ನು ಪಡೆದು ಮಳೆ ಪ್ರಾರಂಭವಾದ ತಕ್ಷಣವೇ ನೆಡಲು ಆರಂಭಿಸಿ. ಗಿಡಗಳನ್ನು ಚೆನ್ನಾಗಿ ಬೆಳೆಸಿ “ಕೃಷಿ ಅರಣ್ಯ ಪ್ರೋತ್ಸಾಹ’ ಯೋಜನೆಯಡಿ ಸತತ ಮೂರು ವರ್ಷ ಅರಣ್ಯ ಇಲಾಖೆಯಿಂದ ಪ್ರೋತ್ಸಾಹಧನ ಪಡೆಯಿರಿ.

ರೈತರು ಏನು ಮಾಡಬೇಕು?
ಅರಣ್ಯ ಕೃಷಿ ಅಥವಾ ಹೊಲದಲ್ಲಿ ಅಂಚಿನಲ್ಲಿ ಮರ ಬೆಳೆಸುವ ಇಚ್ಛೆ ಇರುವ ರೈತರು ಸಮೀಪದ ಅರಣ್ಯ ಇಲಾಖೆ ಕಚೇರಿಗೆ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅಂಥ ರೈತರಿಗೆ ಅರಣ್ಯ ಇಲಾಖೆಯೇ ಸಬ್ಸಿಡಿ ದರದಲ್ಲಿ ಗಿಡಗಳನ್ನು ವಿತರಿಸುತ್ತದೆ. ಒಂದು ಗಿಡಗಳಿಗೆ ಸಾಮಾನ್ಯವಾಗಿ 5 ರಿಂದ 10 ಅಷ್ಟೇ ಇರುತ್ತದೆ.

ರೈತರು ಕೊಡಬೇಕಾದ ದಾಖಲಾತಿಗಳು:
ಆಧಾರ್ ಕಾರ್ಡ್ ಜೆರಾಕ್ಸ್
ಬ್ಯಾಂಕ್ ಖಾತೆ ಮಾಹಿತಿ
ಪಹಣಿ ಪತ್ರದ ನಕಲು ಪ್ರತಿ
ಎರಡು ಪಾಸ್ ಪೋರ್ಟ್ ಅಳತೆ ಫೋಟೊ.

ಓದಿ: ಎರಡು ಗುಂಟೆ ಒಂದು ಲಕ್ಷ ರೂ. ಆದಾಯ ಕೊಡುವ ಕೃಷಿ

ಪ್ರೋತ್ಸಾಹ ಧನ ಹೇಗೆ?
ರೈತರು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳನ್ನು ಅರಣ್ಯೀಕರಣ ಕಾರ್ಯಕ್ರಮರ್ಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೇರೇಪಿಸುವ ದೃಷ್ಟಿಯಿಂದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯನ್ನು 2011-12ನೇ ಸಾಲಿನಿಂದ ಪ್ರಾರಂಭಿಸಲಾಗಿದೆ.

ಓದಿ: ಹಣ್ಣು, ಹಾಲಿಗಿಂತ ಶ್ರೇಷ್ಠ ನುಗ್ಗೆ ಸೊಪ್ಪು: ಆದಾಯದ ಬೆಳೆ

ರೈತರು, ಸಾರ್ವಜನಿಕರು ರಿಯಾಯಿತಿ ದರದಲ್ಲಿ ಸಸಿಗಳನ್ನು ಪಡೆದು ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದರೆ ಪ್ರತಿ ಬದುಕುಳಿದ ಸಸಿಗೆ ಮೊದಲನೇ ವರ್ಷದ ಅಂತ್ಯದಲ್ಲಿ 30 ರೂ. ಹಾಗೂ ಎರಡನೇ ವರ್ಷದಲ್ಲಿ 30 ರೂ. ಮತ್ತು ಮೂರನೇ ವರ್ಷದ ಅಂತ್ಯದಲ್ಲಿ 40 ರೂ. ಹೀಗೆ ಒಟ್ಟು 100 ರೂ.ಗಳನ್ನು ಪ್ರೋತ್ಸಾಹ ಧನವನ್ನಾಗಿ ರೈತರಿಗೆ ಪಾವತಿಸಲಾಗುತ್ತದೆ.

ಓದಿ: ಮರದಲ್ಲಿ ಬೆಳೆಸಿ ಕಾಳು ಮೆಣಸು: ಇಲ್ಲಿದೆ ಸೂಪರ್ ತಳಿಗಳು

ಈ ರೀತಿ ಪಾವತಿಸುತ್ತಿರುವ ಪ್ರೋತ್ಸಾಹ ಧನದಿಂದ ರೈತರು ಸಸಿಗಳನ್ನು ಪಡೆಯಲು ಹಾಗೂ ನೆಡಲು ಖರ್ಚು ಮಾಡುವ ಹಣವನ್ನು ತುಂಬಿಕೊಳ್ಳಬಹುದು. ಅಲ್ಲದೆ, ರೈತರು ಮರಗಳಿಂದ ಸಿಗುವಂತಹ ಹಣ್ಣುಗಳು, ಬೀಜ, ಮೇವು, ಉರುವಲು, ಕೋಲು, ಮರಮಟ್ಟು, ಇತ್ಯಾದಿ ಪ್ರಯೋಜನಗಳನ್ನು ಪಡೆಯಲು ಅರ್ಹರು.

ಓದಿ: ಬಿತ್ತನೆ ಬೀಜ ಉತ್ಪಾದಕರಾಗಿ, ಕಳಪೆ ಬೀಜ ಪತ್ತೆ ಮಾಡಿ