ಕೋವಿಡ್ 19 ಕೊರೊನಾ ಅಪಾಯ ಕಾಲದಲ್ಲಿ ರೈತರಿಗೆ ಆರ್ಥಿಕ ಬಲ ತುಂಬುವ ಸಲುವಾಗಿ ಕೇಂದ್ರ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ಸುಲಭ ಸಾಲ ನೀಡಲು 2 ಲಕ್ಷ ಕೋಟಿ ರೂ. ಸಾಲ ನೀಡುವುದಾಗಿ ಘೋಷಣೆ ಮಾಡಿದೆ. ಈ ಯೋಜನೆಯಡಿ 2.5 ಕೋಟಿ ರೈತರಿಗೆ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದಾರೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಪ್ರತಿ ರೈತರಿಗೆ ಗರಿಷ್ಠ ಮೂರು ಲಕ್ಷ ರೂ. ವರೆಗೆ ಸಾಲ ನೀಡಲಾಗುತ್ತದೆ. ಅದರ ಮೂಲಕ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬಹುದು. ಈಗ ಅದನ್ನು ಹೈನುಗಾರಿಕೆ ಮತ್ತು ಮೀನುಗಾರಿಕೆಗೂ ವಿಸ್ತರಿಸಲಾಗಿದೆ.

ಆರು ಕೋಟಿ ಜನಸಂಖ್ಯೆ ಇರುವ ಕರ್ನಾಟಕದಲ್ಲಿ ಸುಮಾರು 86 ಲಕ್ಷ ರೈತ ಕುಟುಂಬಗಳಿವೆ. ಅದರಲ್ಲಿ 41.85 ಲಕ್ಷ ರೈತರು ಮಾತ್ರ ಕಿಸಾನ್ ಕಾರ್ಡ್ ಹೊಂದಿದ್ದಾರೆ. 45 ಲಕ್ಷದಷ್ಟು ರೈತರು ಇನ್ನೂ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿಲ್ಲ.. ಕಿಸಾನ್ ಕಾರ್ಡ್ ಪಡೆದ ರೈತರು ಸಾಲದ ಜತೆ ವಿಮೆಯನ್ನೂ ಹೊಂದಬಹುದು.

ಓದಿ: ಕಾಳು ಮೆಣಸು ಅಧಿಕ ಇಳುವರಿ ನೀಡುವ ಸೂಪರ್ ತಳಿಗಳು.

ಓದಿ: ಹಾಲು ಹಣ್ಣಿಗಿಂತ ಶ್ರೇಷ್ಠ ನುಗ್ಗೆ ಸೊಪ್ಪು: ಆದಾಯದ ಬೆಳೆ.

14 ದಿನಗಳಲ್ಲಿ ಸಾಲ
ಕಿಸಾನ್ ಕಾರ್ಡ್ ಹೊಂದಿದ ರೈತರು ಸಾಲಕ್ಕೆ ಬ್ಯಾಂಕ್ ಗೆ ಅರ್ಜಿ ಸಲ್ಲಿಸಿದ ತಕ್ಷಣ 14 ದಿನಗಳ ಒಳಗೆ ಸಾಲ ಕೊಡಬೇಕು. ಕೊಡದೇ ಇದ್ದರೆ ದೂರು ಕೊಡಬಹುದು. ಗರಿಷ್ಠ ಮೂರು ಲಕ್ಷ ರೂ.ವರೆಗೆ ಸಾಲ ಪಡೆಯಬಹುದು. 1.6 ಲಕ್ಷ ರೂ. ವರೆಗೆ ಸಾಲ ಪಡೆಯಲು ಯಾವುದೇ ಹೆಚ್ಚುವರಿ ನಿರ್ಬಂಧಗಳು ಇಲ್ಲ. ಅದಕ್ಕಿಂತ ಹೆಚ್ಚಿನ ಸಾಲ ಬೇಕಿದ್ದರೆ ಗ್ಯಾರಂಟಿ ಸೇರಿ ಇತರ ದಾಖಲೆ ಕೊಡಬೇಕಾಗುತ್ತದೆ. ರಾಜ್ಯ ಸರ್ಕಾರಗಳು ಸಾಲವನ್ನು ಬ್ಯಾಂಕ್ ಅಥವಾ ಗ್ರಾಮ ಪಂಚಾಯಿತಿಗಳ ಮೂಲಕ ವಿತರಿಸಬಹುದು.

ಓದಿ: ಬಿತ್ತನೆ ಬೀಜ ಉತ್ಪಾದಕರಾಗಿ; ಕಳಪೆ ಬೀಜ ಪತ್ತೆ ಮಾಡಿ.

ಕಿಸಾನ್ ಕಾರ್ಡ್ ಪಡೆಯುವುದು ಹೇಗೆ?
ರೈತರನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ವ್ಯಾಪ್ತಿಗೆ ಒಳಪಡಿಸುವ ಸಲುವಾಗಿ ಸರ್ಕಾರವೇ ವಿಶೇಷ ಅಭಿಯಾನ ಆರಂಭಿಸುತ್ತಿದೆ. ದೇಶದಲ್ಲಿ ಹೊಸದಾಗಿ 2.5 ಕೋಟಿ ರೈತರಿಗೆ ಕಿಸಾನ್ ಕಾರ್ಡ್ ವಿತರಿಸಲು ನಿರ್ಧರಿಸಿದ್ದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬ್ಯಾಂಕ್ ಗೆ ಅರ್ಜಿ ಸಲ್ಲಿಸಿ ಕಾರ್ಡ್ ಪಡೆಯಬಹುದು.

ಇದನ್ನೂ ಓದಿ: ಹೊಲದಲ್ಲಿ ಮರ ಬೆಳೆಸಿ 40 ಸಾವಿರ ರೂ.ವರೆಗೆ ಪ್ರೋತ್ಸಾಹ ಪಡೆಯಿರಿ.

ಮೂರು ದಾಖಲೆಗಳು
-ಕಿಸಾನ್ ಕಾರ್ಡ್ ಪಡೆಯಲು ಇಚ್ಚಿಸುವವರು ಮೊದಲು ತಾವು ರೈತರು ಎಂಬುದಕ್ಕೆ ಸಾಕ್ಷಿ ಒದಗಿಸಬೇಕು.
-ವಾಸದ ದೃಢೀಕರಣ ಪತ್ರ ಒದಗಿಸಬೇಕು.
-ಬ್ಯಾಂಕಿನಲ್ಲಿ ಯಾವುದೇ ಸಾಲ ಉಳಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಲು ಅಫಿಡವಿಟ್ ಸಲ್ಲಿಸಬೇಕು.

ಓದಿ: ಅದೃಷ್ಟ ತರಲಿದೆ ಮುಂಗಾರು: ವಿಜ್ಞಾನಿಗಳ ಭವಿಷ್ಯ.

ಮತ್ತಷ್ಟು ಕೃಷಿ ವರದಿಗಳನ್ನು ಓದಲು ಕ್ಲಿಕ್ ಮಾಡಿ.