ಕೋವಿಡ್ 19 ಕೊರೊನಾ ಲಾಕ್ ಡೌನ್ ನಿಂದ ರೈತರ ಬದುಕು ಚಂಡಮಾರುತಕ್ಕೆ ಸಿಕ್ಕಂತಾಗಿದೆ. ಯುವಕರಿಗೆ ಕೆಲಸ ಇಲ್ಲ. ರೈತರಿಗೆ ತಾವು ಬೆಳೆದ ಬೆಲೆಗೆ ಸರಿಯಾಗಿ ಬೆಲೆ ಸಿಗುತ್ತಿಲ್ಲ. ಕಾರ್ಮಿಕರಿಗೆ ಊರು ಸೇರಲು ದಾರಿ ಇಲ್ಲ. ಇಂಥ ಸ್ಥಿತಿಯಲ್ಲಿ ಅನೇಕ ಸುಳ್ಳು ಸುದ್ದಿಗಳು ಜನರ ದಾರಿ ತಪ್ಪಿಸುತ್ತಿವೆ. ಯಾವುದು ಸತ್ಯ, ಯಾವುದು ಸುಳ್ಳು ಎನ್ನುವುದು ತಿಳಿಯುವುದೇ ಸವಾಲಾಗುತ್ತಿದೆ.

ಈ ಬೆಳವಣಿಗೆಗಳ ನಡುವೆಯೇ ಲಾಕ್ ಡೌನ್ ತೆರವು ಬಗ್ಗೆ ವೇಳಾಪಟ್ಟಿಯೊಂದು ಹೊರಬಿದ್ದಿದೆ. ಕೊರೊನಾ ಲಾಕ್ ಡೌನ್ ಅನ್ನು ಐದು ಹಂತಗಳಲ್ಲಿ ತೆರವು ಮಾಡಲಾಗುತ್ತದೆ. ಮೇ 18 ರಿಂದ ಲಾಕ್ ಡೌನ್ ಸಡಿಲಿಕೆ ಶುರುವಾಗಲಿದ್ದು, ಆಗಸ್ಟ್ ವರೆಗೆ ಲಾಕ್ ಡೌನ್ ತೆರವು ಪ್ರಕ್ರಿಯೆ ಮುಂದುವರಿಯಲಿದೆ ಎಂದು ವಾಟ್ಸಾಪ್ ಗಳಲ್ಲಿ ಮೆಸೇಜ್ ಹರಿದಾಡುತ್ತಿದೆ. ಅದರಲ್ಲಿ ದಿನಾಂಕ ಸಹ ನಮೂದಿಸಲಾಗಿದ್ದು, ಮೂರುವಾಗಳಿಗೊಮ್ಮೆ ಹಂತ ಹಂತವಾಗಿ ನಿರ್ಬಂಧ ತೆರವಾಗಲಿದೆ ಎಂದಿದೆ.

ಆದರೆ, ಭಾರತದಲ್ಲಿ ಈಗಾಗಲೇ ಲಾಕ್ ಡೌನ್ ಸಡಿಲಿಕೆ ಆರಂಭಿಸಲಾಗಿದೆ. ಮೇ 4ರಿಂದಲೇ ಮೊದಲ ಹಂತದ ಸಡಿಲಿಕೆ ಆಗಿದೆ. ಹಾಗಿದ್ದ ಮೇಲೇ ಮತ್ತೊಂದು ಸಡಿಲಿಕೆಯ ವೇಳಾಪಟ್ಟಿ ಯಾಕೆ ಬಿಡುಗಡೆಯಾಗಿದೆ. ಇಂಥ ಹಲವು ಗೊಂದಲ ಸೃಷ್ಟಿಸಿರುವ ಈ ಮೆಸೇಜ್ ನ ಅಸಲಿಯತ್ತು ಏನು ಎನ್ನುವುದನ್ನು ಕೇಂದ್ರ ಸರ್ಕಾರವೇ ಸ್ಪಷ್ಟಪಡಿಸಿದೆ.

ಓದಿ: ನಟ ರಿಷಿ ಕಪೂರ್ ಸಾವಿನಲ್ಲೂ ಹರಿದಾಡಿತು ಸುಳ್ಳು ಸುದ್ದಿ: ಅದು ಕೊನೆ ವಿಡಿಯೊ ಅಲ್ಲ

ಮೆಸೇಜ್
ಕೋವಿಡ್ 19 ನಿರ್ಬಂಧಗಳನ್ನು ಸರಾಗಗೊಳಿಸುವ ಸಲುವಾಗಿ ಸರ್ಕಾರ ಐದು ಹಂತದ ಮಾರ್ಗಸೂಚಿಯನ್ನು ರೂಪಿಸಿದೆ. ಪ್ರತೀ ಹಂತವು ಮೂರು ವಾರ್ಗಳ ಪ್ರತಿಯನ್ನು ಆಧರಿಸಿದೆ. ಮೊದಲ ಹಂತವು ಈ ಕೆಳಗಿನಂತೆ ಆರಂಭವಾಗುತ್ತದೆ.
ಹಂತ 1- ಮೇ 18
ಹಂತ 2- ಜೂನ್ 8
ಹಂತ 3- ಜೂನ್ 29
ಹಂತ 4- ಜುಲೈ 20
ಹಂತ 5- ಆಗಸ್ಟ್ 10
ಒಂದು ವೇಳೆ ಕೊರೊವಾ ವೈರಸ್ ಹೆಚ್ಚಾದರೆ, ಮತ್ತೆ ನಿರ್ಬಂಧಗಳನ್ನು ಹಿಂದಿನ ಹಂತಕ್ಕೆ ತರಲಾಗುವುದು. ಈ ರೀತಿಯ ಮೆಸೇಜ್ ವಾಟ್ಸಾಪ್ ಗಳಲ್ಲಿ ಹರಿದಾಡುತ್ತಿದೆ.

ಓದಿ: ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 50 ವರ್ಷಕ್ಕೆ ಇಳಿಕೆ?, ಕೇಂದ್ರ ಸರ್ಕಾರ ಹೇಳಿದ್ದೇನು?

ಕೇಂದ್ರ ಸರಕಾರ ಹೇಳಿದ್ದೇನು?
ಲಾಕ್ ಡೌನ್ ತೆರವು ಸಂಬಂಧ ಈ ವೇಳಾಪಟ್ಟಿಯನ್ನು ಭಾರತ ಸರ್ಕಾರ ಸಿದ್ದಪಡಿಸಿಲ್ಲ. ಬೇರೆ ದೇಶದಲ್ಲಿ ಇರಬಹುದೇನೊ ಎಂದು ಸ್ಪಷ್ಟಪಡಿಸಿದೆ. ಪ್ರೆಸ್ ಇನ್ಫಾರ್ಮೇಶನ್ ಬ್ಯೂರೊ ಫ್ಯಾಕ್ಟ್ ಚೆಕ್ ಟ್ವೀಟರ್ ಖಾತೆಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದೆ. ಹಾಗಾಗಿ ವಾಟ್ಸಾಪ್ ಗಳಲ್ಲಿ ಹರಿದಾಡುತ್ತಿರುವ ಈ ಮೆಸೇಜ್ ನಮ್ಮ ದೇಶಕ್ಕೆ ಸಂಬಂಧಿಸಿದ್ದಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.