ಹಳೆಯ ವಿಡಿಯೊ ಬಳಸಿ ರೈತರ ಹೋರಾಟದಲ್ಲಿ ಉಚಿತ ಮದ್ಯ ವಿತರಣೆ ಎಂದು ಪೋಸ್ಟ್
ಕೃಷಿ ಕಾಯಿದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಜಗತ್ತಿನ ಗಮನ ಸೆಳೆದಿದೆ. ಜಗತ್ತಿನ ಅನೇಕ ಪ್ರಸಿದ್ಧ ವ್ಯಕ್ತಿಗಳು ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಇನ್ನೊಂದೆಡೆ ರೈತರ ಪ್ರತಿಭಟನೆ ತಿಂಗಳು ಗಟ್ಟಲೆ ನಿರಂತರವಾಗಿ ನಡೆಯುತ್ತ ದೇಶದಲ್ಲಿ ಕ್ರಾಂತಿ ಸೃಷ್ಟಿಸುತ್ತಿದೆ. ಕರ್ನಾಟಕ ರಾಜ್ಯದಲ್ಲಿಯೂ ರೈತರು ಬೀದಿಗಿಳಿದು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಈ ರೀತಿಯ ಬೆಳವಣಿಗೆಗಳ ಬೆನ್ನಲ್ಲೇ ರೈತರ ಪ್ರತಿಭಟನೆ ವಿಚಾರವಾಗಿ ಅನೇಕ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ರೈತರ ಹೋರಾಟವನ್ನು ಅಪಪ್ರಚಾರದ ಮೂಲಕ ಧಿಕ್ಕು ತಪ್ಪಿಸುವ ಯತ್ನ ನಡೆಯುತ್ತಿದೆ, ಪ್ರತಿಭಟನೆಯೇ ರಾಜಕೀಯ ಪ್ರೇರಿತ ಎನ್ನುವ ರಾಜಕೀಯ ಪಕ್ಷಗಳ ಆರೋಪ ಪ್ರತ್ಯಾರೋಪವೂ ಜೋರಾಗಿದೆ.
ಇಂಥ ಸ್ಥಿತಿಯಲ್ಲಿ ಹೋರಾಟದ ಕುರಿತು ಹರಡುತ್ತಿರುವ ಕೆಲ ವಿಡಿಯೊ, ಫೋಟೊಗಳು ತಪ್ಪು ಸಂದೇಶಗಳನ್ನು ಸಾರುತ್ತಿವೆ. ಹೀಗೆ ಹರಡುವ ಫೋಟೊ, ವಿಡಿಯೊಗಳಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎನ್ನುವ ಗೊಂದಲ ಉಂಟಾಗುತ್ತಿದೆ. ಇದೇ ರೀತಿ ಇಲ್ಲೊಂದು ವಿಡಿಯೊ ರೈತರ ಹೆಸರಿನಲ್ಲಿ ಬಾರೀ ವೈರಲ್ ಆಗುತ್ತಿದೆ. ಆ ವಿಡಿಯೊ ಅಸಲಿಯತ್ತು ಏನು ಎನ್ನುವುದರ ಫ್ಯಾಕ್ಟ್ ಚೆಕ್ ಇಲ್ಲಿದೆ.
ವಿಡಿಯೊ ವಾದ:
ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಉಚಿತವಾಗಿ ಮದ್ಯ ಹಂಚುತ್ತಿದ್ದಾರೆ ಎನ್ನುವ ವಿಡಿಯೊವನ್ನು ಹರಿಬಿಡಲಾಗಿದೆ. ಕಾರಿನೊಳಗೆ ವ್ಯಕ್ತಿಯೊಬ್ಬ ಬಾಟಲಿಯಲ್ಲಿದ್ದ ಮದ್ಯವನ್ನು ಹಂಚುತ್ತಿದ್ದಾರೆ. ರೈತರಂತೆ ಕಾಣುವ ಕೆಲ ವ್ಯಕ್ತಿಗಳು ತಟ್ಟೆ, ಲೋಟ ಹೀಗೆ ಸಿಕ್ಕ ಸಿಕ್ಕ ಪಾತ್ರೆಗಳಲ್ಲಿ ಮದ್ಯವನ್ನು ಬೇಡುತ್ತಿದ್ದಾರೆ. “ರೈತರ ಪ್ರತಿಭಟನೆ.. ಉಚಿತ ಮದ್ಯ ವಿತರಣೆ’ ಎನ್ನುವ ಸಂದೇಶದೊAದೊಗೆ ಶೇರ್ ಮಾಡಲಾಗಿದೆ.
ವೈರಲ್ ಚೆಕ್:
ಟ್ವಿಟರ್, ಫೇಸ್‌ಬುಕ್‌ಗಳಲ್ಲಿ ಶೇರ್ ಆಗಿರುವ ಈ ವಿಡಿಯೊದ ಸ್ಕಿçÃನ್ ಶಾಟ್ ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಬೇರೆ ಬೇರೆ ಅವಧಿಯಲ್ಲಿ ಫೇಸ್‌ಬುಕ್‌ಗಳಲ್ಲಿ ಅಪ್‌ಲೋಡ್ ಆಗಿದ್ದ ವಿಡಿಯೊಗಳು ಸಿಕ್ಕಿದವು.
ಅದರಲ್ಲಿ ನಮಗೆ ದೊರೆತ ಮಾಹಿತಿಯಲ್ಲಿ ಈಗ ವೈರಲ್ ಮಾಡುತ್ತಿರುವ ವಿಡಿಯೊ 2020ರ ಏಪ್ರಿಲ್ 12ರಲ್ಲಿ ಅಪ್‌ಲೋಡ್ ಆಗಿದೆ. ಅದಲ್ಲಿ ತಮಗೂ ಕೊಡಿ ಎನ್ನುವ ಹಿಂದಿ ಭಾಷೆಯ ಸಂಭಾಷಣೆ ಕೇಳಿಸುತ್ತದೆ.
ಅದರಲ್ಲಿ ಮುಖ್ಯವಾಗಿ ವಿಡಿಯೊ 2020ರ ಏಪ್ರಿಲ್ 12 ರಂದು ಅಪ್‌ಲೋಡ್ ಆಗಿದೆ ಎನ್ನುವುದನ್ನೇ ಆಯ್ಕೆ ಮಾಡಿದೆವು. ವಾಸ್ತವದಲ್ಲಿ ರೈತರು ನಡೆಸುತ್ತಿರುವ ಕೃಷಿ ಮಸೂದೆ ಅಂಗೀಕಾರ ಆಗಿದ್ದೇ 2020ರ ಸೆಪ್ಟೆಂಬರ್ ತಿಂಗಳಲ್ಲಿ.
ಅದರ ನಂತರವೇ ದೆಹಲಿಯಲ್ಲಿ ರೈತರು ಪ್ರತಿಭಟನೆ ಆರಂಭಿಸಿದ್ದರು. ಹಾಗಾಗಿ ವೈರಲ್ ಮಾಡುತ್ತಿರುವ ವಿಡಿಯೊ ಈಗ ನಡೆಯುತ್ತಿರುವ ರೈತರ ಹೋರಾಟಕ್ಕೆ ಸಂಬAಧಿಸಿದ್ದಲ್ಲ ಎನ್ನುವುದು ಖಚಿತವಾಗುತ್ತದೆ.
ತೀರ್ಮಾನ
ವಾದ: ವಿಡಿಯೊ ಮೂಲಕ ಹೇಳಿರುವುದು ರೈತರ ಹೋರಾಟದಲ್ಲಿ ಉಚಿತವಾಗಿ ಮದ್ಯ ವಿತರಣೆ.
ವೈರಲ್ ಚೆಕ್: ಸುಳ್ಳು