ರೈತರ ಬದುಕು ಒಮ್ಮೆ ಸುಖ ಇನ್ನೊಮ್ಮೆ ಕಷ್ಟ. ಯಾಕಂದ್ರೆ ಅವರು ಬೆಳೆಯೊ ಬೆಳೆಗೆ ಎಲ್ಲ ಸಮಯದಲ್ಲೂ ಸೂಕ್ತ ಬೆಲೆ ಸಿಗಲ್ಲ. ಹೀಗಾಗಿ ಬೆಳೆಗಾಗಿ ಬಹಳಷ್ಟು ಖರ್ಚು ಮಾಡೊದು ರೈತರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಈ ರೀತಿ ಕಷ್ಟ ಪಡೋ ಅಡಿಕೆ ರೈತರ ಶ್ರಮ ಮತ್ತು ಖರ್ಚು ಕಡಿಮೆ ಮಾಡಲು 15ರ ಬಾಲೆಯೊಬ್ಬಳು ಹೊಸ ಮಾರ್ಗ ಕಂಡುಕೊಂಡಿದ್ದು, ಈ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾಳೆ.

ಕೀಟನಾಶಕ ಸ್ಪ್ರೇ ಮಷಿನ್

ಮಳೆಗಾಲದಲ್ಲಿ ಅಡಕೆ ಗಿಡಗಳನ್ನು ಫಂಗಸ್ ನಿಂದ ರಕ್ಷಣೆ ಮಾಡಲು ಕ್ರಿಮಿನಾಶಕ ಔಷಧಿಯನ್ನು ಅಡಿಕೆ ಮರಗಳಿಗೆ ಸಿಂಪಡಿಸುತ್ತಿದ್ದರು. ಇದಕ್ಕೆ ಬಹಳ ಖರ್ಚು ತಗುಲುತ್ತಿತ್ತು. ಆ ಖರ್ಚು ಕಡಿಮೆ ಮಾಡಲು 10ನೇ ತರಗತಿಯಲ್ಲಿ ಓದುತ್ತಿರುವ ನೇಹಾ ಎನ್ನುವ ಪುತ್ತೂರಿನ ಬಾಲೆ, 2 ವರ್ಷಗಳ ಕಾಲ ಸತತ ಪ್ರಯತ್ನ ಪಟ್ಟು ಯಶಸ್ವಿಯಾಗಿದ್ದಾಳೆ.

ಗೇರ್ ಬಾಕ್ಸ್, ಲಿಥಿಯಂ, ಡಿಸಿ ಮೋಟಾರ್, ಎರಡು ಗಟಾರ್ ಪಂಪ್, ಎಕ್ಸ್ ಲೇಟರ್ ಉಪಯೋಗಿಸಿ ಆಟೋಮೆಟಿಕ್ ಸ್ಪ್ರೇ ಮಷಿನ್ ಅನ್ನು ತಯಾರಿಸಿದ್ದಾಳೆ. ಈ ಮಷಿನ್ 1 ಘಂಟೆ ರೀಚಾರ್ಜ್ ಮಾಡಿದ್ರೆ ಸಾಕು, ಸುಮಾರು 4 ರಿಂದ 5 ಘಂಟೆಗಳ ಕಾಲ ಕೆಲಸ ಮಾಡುತ್ತದೆ. ಹಾಗೆಯೇ ಇದರಲ್ಲಿ ಗಾಡಿಗಳಿಗೆ ಇದ್ದ ಹಾಗೆ ಇಂಡಿಕೇಟರ್ ಸಹ ಇದ್ದು, ಇದರಿಂದ ಔಷಧೀಯ ಮಟ್ಟ ಎಷ್ಟಿದ್ದೆ ಅಂತ ತಿಳಿಯಬಹುದು. ಇಷ್ಟೆಲ್ಲಾ ಲಾಭಗಳಿರುವ ಆಟೋಮೆಟಿಕ್ ಸ್ಪ್ರೇ ಮಷಿನ್, ಇದೀಗ ಹಲವು ರೈತರ ತೋಟ ಸೇರಿದೆ. ಇದರಿಂದ ರೈತರ ಖರ್ಚಿನಲ್ಲಿ ಶೇಕಡ 40 ರಷ್ಟು ಕಡಿಮೆಯಾಗುತ್ತಿದೆ.

ಇನ್ನೂ ಈ ಪೋರಿಯ ಬುದ್ಧಿವಂತಿಕೆ ಬಗ್ಗೆ ತಿಳಿದು 2020‌ ರಲ್ಲಿ CSIR ನೇಹಾಗೆ ತೃತೀಯ ಬಹುಮಾನ ಕೂಡ ನೀಡಿದೆ. ನೇಹಾಳ ಈ ಕಾರ್ಯಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.