ಬೆಂಗಳೂರು: ಕೊರೊನಾ 4ನೇ ಅಲೆ ಎದುರಾಗುವ ಭೀತಿ ಎದುರಾಗಿದ್ದು, ರಾಜ್ಯ ರಾಜಧಾನಿಯಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಕೊರೊನಾ ವೈರಸ್ ಹೆಸರು ಕೇಳಿದ್ರೆ ಸಾಕು ಇಡೀ ಜಗತ್ತೆ ಬೆಚ್ಚಿ ಬೀಳುತ್ತದೆ. ಯಾಕಂದ್ರೆ ಎರಡು ವರ್ಷಗಳ ಕಾಲ ಕೊರೊನಾ ಕೊಟ್ಟ ಹಾವಳಿಯಿಂದ ಇವತ್ತಿಗೂ ಜನ ಪೂರ್ತಿಯಾಗಿ ಸುಧಾರಿಸಿಕೊಂಡಿಲ್ಲ, ಅಂದ್ರೆ ತಪ್ಪಾಗಲಾರದು.

ಇದೀಗ ಕೊರೊನಾದ ರೂಪಾಂತರಿ ವೈರಸ್ BF. 7 ಚೀನಾದಲ್ಲಿ ಅಟ್ಟಹಾಸ ಶುರುಮಾಡಿದೆ. ಈ ವೈರಸ್ ನ ಸೋಂಕು ಭಾರತ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿಯೂ ಕಾಣಿಸಿಕೊಂಡಿದೆ. BF.7ನ ಪ್ರಮಾಣ ಹೆಚ್ಚಾದ್ರೆ, ಲಾಕ್ ಡೌನ್ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಹೀಗಾಗಿ ವೈರಸ್ ಹರಡದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.