Select Page

ಸಕ್ಕರೆ ಕಾಯಿಲೆ ಸಮಸ್ಯೆ ನಿವಾರಣೆಗೆ ಮಂಡುಕಾಸನ

ಸಕ್ಕರೆ ಕಾಯಿಲೆ ಸಮಸ್ಯೆ ನಿವಾರಣೆಗೆ ಮಂಡುಕಾಸನ

ಸಕ್ಕರೆ ಕಾಯಿಲೆ ಸಮಸ್ಯೆ ನಿವಾರಣೆಗೆ ಮಂಡುಕಾಸನ ಅಂತ್ಯಂತ ಉತ್ತಮವಾಗಿದೆ. ಈ ಆಸನದಿಂದ ನಮ್ಮ ಹೊಟ್ಟೆಯ ಒಳಭಾಗಗಳಿಗೆ ಉತ್ತಮ ವ್ಯಾಯಾಮ ಸಿಗುವುದಲ್ಲದೆ ಹೊಟ್ಟೆಯ ಹೆಚ್ಚುವರಿ ಕೊಬ್ಬನ್ನು ಕರಗಿಸುದುವುದರ ಮೂಲಕ ಹೊಟ್ಟೆಯನ್ನು ಸಮತಟ್ಟಾಗಿಸುತ್ತದೆ.

ಮಂಡುಕಾಸನ ಮಾಡುವ ವಿಧಾನ:

1) ವಜ್ರಾಸನದಲ್ಲಿ ಕುಳಿತುಕೊಳ್ಳಿ.

2) ಹೆಬ್ಬೆರಳನ್ನು ಒಳಗಡೆ ಇಡುತ್ತಾ ಎರಡು ಕೈಗಳನ್ನು ಮುಷ್ಟಿ ಮಾಡಿಕೊಳ್ಳಿ.

3) ಎರಡು ಮುಷ್ಟಿಗಳನ್ನು ನಾಬಿಯ (ಹೊಕ್ಕಳ) ಪಕ್ಕದಲ್ಲಿರಿಸಿ.

4) ಈಗ ಆಳವಾಗಿ ಉಸಿರನ್ನು ತೆಗೆದುಕೊಳ್ಳಿ (ಪೂರಕ) ಹಾಗೆ ಸಂಪೂರ್ಣವಾಗಿ ಉಸಿರನ್ನು ಹೊರಹಾಕಿ(ರೇಚಕ) ಮುಂದಕ್ಕೆ ಭಾಗಿ. ಮೊಣಕೈ ಮೇಲಿರಲಿ. ನಿಮ್ಮ ತಲೆ ಮತ್ತು ಬೆನ್ನನ್ನು ಒಂದೇ ಸರಳ ರೇಖೇಯಲ್ಲಿರಿಸಿ ಮುಂದಕ್ಕೆ ನೋಡುತ್ತಾ ಇದೇ ಭಂಗಿಯಲ್ಲಿ 10 ರಿಂದ 15 ಸೆಕೆಂಡುಗಳ ಕಾಲ ಇರಿ.

5) 10 ರಿಂದ 15 ಸೆಕೆಂಡು ಆದನಂತರ ಉಸಿರನ್ನು ತೆಗೆದುಕೊಳ್ಳುತ್ತಾ (ಪೂರಕ) ಮೇಲಕ್ಕೆ ಬನ್ನಿ.

ಉಪಯೋಗಗಳು:

1) ಸಕ್ಕರೆ ಕಾಯಿಲೆ ಸಮಸ್ಯೆ ನಿವಾರಣೆಯಾಗುವುದು.

2) ಹೊಟ್ಟೆಯ ಭಾಗದ ಹೆಚ್ಚುವರಿ ಕೊಬ್ಬು ಕರಗಿಸಲು ಸಹಾಯಕಾರಿ.

3) ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ನಿವಾರಿಸಲು ಇದನ್ನು ಅಭ್ಯಾಸ ಮಾಡಬಹುದು.

4) ಆಸ್ತಮಾ ಸಮಸ್ಯೆ ನಿವಾರಣೆಗೆ ಉತ್ತಮ ಆಸನ.

5) ಹೊಟ್ಟೆಯಿಂದ ಅನಗತ್ಯ ಅನಿಲವನ್ನು ಬಿಡುಗಡೆಮಾಡಿ ಶಾಂತತೆಯನ್ನು ಅನುಭವಿಸುವಿರಿ.

6) ಈ ಆಸನ ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಮುಟ್ಟಿನ ಸೆಳೆತದ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

7) ಕುಂಡಲಿನಿ ಜಾಗೃತಿಗಾಗಿ ಕೂಡ ಈ ಆಸನ ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.

ಸೂಚನೆ:

ಪಾದದ ಗಾಯ, ಅಧಿಕ ರಕ್ತದೊತ್ತಡ, ನಿದ್ರಾಹೀನತೆ, ಮೈಗ್ರೇನ್ ಹಾಗೂ ಮಂಡಿಯಲ್ಲಿ ಗಾಯಗಳಾಗಿದ್ದರೆ ಈ ಆಸನ ಮಾಡಬಾರದು.

Leave a reply

Your email address will not be published. Required fields are marked *