ಕಾರವಾರ: ಕೊರೊನಾ ಲಾಕ್ ಡೌನ್ ಬಳಿಕ ಏರುತ್ತಲೇ ಸಾಗಿದ್ದ ಬಂಗಾರದ ದರ ಗುರುವಾರ ಇಳಿಕೆ ಕಂಡಿದೆ.

ಬಂಗಾರದ ದರ ದಿಢೀರ್ ಏರಿಕೆಯಿಂದ ಕಂಗಾಲಾಗಿದ್ದ ಚಿನ್ನದ ವ್ಯಾಪಾರಿಗಳು ಮತ್ತು ಗ್ರಾಹಕರಲ್ಲಿ ದರ ಇಳಿಕೆ ಖರೀದಿ ನಿರೀಕ್ಷೆ ಹುಟ್ಟಿಸಿದೆ. 15 ದಿನಗಳ ಹಿಂದೆ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ದರ 50 ಸಾವಿರ ರೂ. ಮೀರಿತ್ತು. ಕಳೆದೊಂದು ವಾರದಿಂದ ಚಿನ್ನದ ದರ ಇಳಿಕೆಯಾಗಿ ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆ ಮುಂದುವರಿದಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿಯಿಂದಾಗಿ ಮದುವೆ ಸೇರಿದಂತೆ ವಿವಿಧ ಶುಭ ಕಾರ್ಯಗಳು ನಡೆಯದೇ ತೀವ್ರ ನಷ್ಟ ಅನುಭವಿಸಿದ್ದ ಚಿನ್ನದಂಗಡಿಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದವು. ಚಿನ್ನದ ದರದ ಇಳಿಕೆ ಸುದ್ದಿ ಆರ್ಥಿಕ ಸುಧಾರಣೆಯ ಆಸೆ ಹುಟ್ಟಿಸಿದೆ.

ಹೇಗಿದೆ ದರ ಇಳಿಕೆ?

ಎರಡು ತಿಂಗಳುಗಳ ಹಿಂದೆ 22 ಕ್ಯಾರೆಟ್ ನ 10 ಗ್ರಾಂ ಚಿನ್ನಕ್ಕೆ 40 ಸಾವಿರ ರೂ. ಇತ್ತು. ಕಳೆದ ಹದಿನೈದು ದಿನದ ಹಿಂದೆ 50 ಸಾವಿರ ರೂ. ಮೀರಿತ್ತು. ಆ ಬಳಿಕ ಕಳೆದವಾರದಿಂದ ಕೊಂಚ ಇಳಿಕೆ ಕಂಡು ಬಂದಿತ್ತು. ಆಗಸ್ಟ್ 26 ರಂದು 49,550, ಆ.27 ರಂದು 49,850 ಹಾಗೂ ಆ. 28 ರಂದು 49450 ರೂ. ಆಗಿ ಆ.31 ರವರೆಗೂ ಅದೇ ದರವಿತ್ತು.

ಸೆಪ್ಟೆಂಬರ್ 1ರಂದು ಕೊಂಚ ಏರಿಕೆಯಾಗಿ 49630  ರೂ. ಗೆ ಏರಿತ್ತು. ಸೆ. 2 ರಂದು ಅದೇ ದರ ಮುಂದುವರಿದಿತ್ತು. ಆದರೆ ಸೆ. 3 ರಂದು ಗುರುವಾರ ಚಿನ್ನದ ದರದಲ್ಲಿ 280 ರೂ. ಇಳಿಕೆಯಾಗಿದ್ದು ಪ್ರತಿ ಗ್ರಾಂ ಗೆ 49,350 ರೂ. ಇದೆ. ಭಾರತೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ದರ 53,435 ರೂ. ಇದೆ.

ಇದನ್ನೂ ಓದಿ: ಗೋವಾ ಗೇಟ್ ತೆರೆದಾಗ ನಡೆಯಿತು ಮನಕಲಕುವ ಘಟನೆ- ತಂದೆ-ಮಗಳ ಪ್ರೀತಿಗೆ ಕಣ್ಣೀರಿಟ್ಟ ಜನ

ಬೆಳ್ಳಿ ದರ ಏರಿಕೆ

ಜೊತೆಗೆ ಬೆಳ್ಳಿ ದರವು ಏರಿಕೆಯಾಗಿದೆ. ಒಂದು ವಾರದ ಹಿಂದೆ ಪ್ರತಿ ಕೆಜಿಗೆ 70 ಸಾವಿರ ರೂ. ತಲುಪಿದ್ದ ದರ ಸೆ.1 ರಂದು 53,000ಕ್ಕೆ ಇಳಿದಿತ್ತು. ಇಂದು ಪುನಃ ಏರಿಕೆ ಕಂಡಿದ್ದು ಪ್ರತಿ ಕೆಜಿಯ ದರ 67, 900 ರೂ. ಆಗಿದೆ.

ಇದನ್ನೂ ಓದಿ: ರೋಹಿಂಗ್ಯಾ ಭಯೋತ್ಪಾದಕರ ಕೇಸ್ ತನಿಖೆ ಬಗ್ಗೆ ಉತ್ತರ ಕನ್ನಡ ಜಿಲ್ಲೆ ಪೊಲೀಸರು ಹೇಳಿದ್ದೇನು?

ಬಂಗಾರದ ದರ ಇಳಿಕೆಯಾಗದಿರುವುದನ್ನು ಗಮನಿಸಿದರೂ ಬಹುತೇಕ ಮಂದಿ ಚಿನ್ನ ಖರೀದಿಗೆ ಮುಂದಾಗುತ್ತಿಲ್ಲ ಎಂಬುದು ಬಂಗಾರದ ಆಭರಣಕಾರು ಹೇಳುತ್ತಾರೆ. ಕೊರೊನಾ ಬಳಿಕ ತಮ್ಮ ವ್ಯಾಪಾರ ಸಪ್ಪೆಯಾಗಿದ್ದು ತೀವ್ರ ನಷ್ಟ ಅನುಭವಿಸುತ್ತಿದ್ದೇವೆ ಎಂದು ಕಾರವಾರ ಜ್ಯೂವೆಲ್ಲರಿ ಶಾಪ್ ಯೂನಿಯನ್‌ನ ಅಧ್ಯಕ್ಷ ದೀಪಕ ಅಣ್ವೇಕರ ತಿಳಿಸಿದ್ದಾರೆ.