ಕಾರವಾರ: ಗೋವಾದ ಪೊಳೆಮ್ ಎಂದ ಕೂಡಲೇ ಮೊದಲ ನೆನಪಾಗೋದು ಗೋವಾ ಬಿಯರ್.

ಮದ್ಯ ಪ್ರಿಯರನ್ನು ಆಸೆಗಣ್ಣಿನಿಂದ ನೋಡುವಂತೆ ಮಾಡುವ ಗೋವಾದ ಪೊಳೆಮೆಟ್ ಹೆಸರಿನಲ್ಲಿ ಮತ್ತೊಂದು ಉತ್ಪನ್ನ ಹೊರಬಂದಿದೆ. ಮದ್ಯ ಪ್ರಿಯರಿಗಾಗಿಯೇ ವಿಶೇಷವಾಗಿ ಈ ಉತ್ಪನ್ನ ರೆಡಿ ಆಗಿದ್ದು, ಆರ್ಡರ್ ಮಾಡಿದರೆ ಮನೆ ಬಾಗಿಲಿಗೇ ಬರಲಿದೆ. ಆನ್ ಲೈನ್ ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿದೆ.

ಹೌದು, ಕೆಲ ಯುವಕರು ಪೊಳೆಮೆಟ್ ಮೇಲಿನ ಪ್ರೀತಿಯನ್ನೇ ಈ ರೀತಿಯಾಗಿ ವ್ಯಕ್ತಪಡಿಸಿದ್ದಾರೆ. ಪೊಳೆಮೆಟ್ ಹೆಸರಿನಲ್ಲಿ ಟಿ- ಶರ್ಟ್ ಬಿಡುಗಡೆ ಮಾಡಿದ್ದಾರೆ. ಅದನ್ನು ಪೊಳೆಮೆಟ್ ಬಿಯರ್ ರೀತಿಯಲ್ಲಿಯೇ ಬ್ರಾಂಡ್ ಮಾಡಲು ಹೊರಟಿರುವುದು ಕುತೂಹಲ ಸೃಷ್ಟಿಸಿದೆ.

ಗೋವಾದ ಪೊಳೆಮೆಟ್ ಬಿಯರ್ ಇಷ್ಟಪಡುವವರಿಗಾಗಿ ಈ ಟೀ ಶರ್ಟ್ ಮೇಲೆ ಪೊಳೆಮೆಟ್ ಹೆಸರಿನೊಂದಿಗೆ ಬಿಯರ್ ಚಿತ್ರಕೂಡ ಹಾಕಲಾಗಿದೆ. ಬಿಯರ್ ಸೇವನೆ ಜತೆಗೆ ಟಿ- ಶರ್ಟ್ ದರಿಸುವ ಮಜಾ ಕೊಡುವ ಹೊಸ ಐಡಿಯಾ ಗನಮಸೆಳೆಯುತ್ತಿದೆ. ಆ ಟಿ- ಶರ್ಟ್ ಹೆಸರು ಕೂಡ ಪೊಳೆಮೆಟ್ ಮೆನ್ ರೌಂಡ್ ನೆಕ್ ಟಿ ಶರ್ಟ್.

ಎಲ್ಲಿ ಸಿಗುತ್ತದೆ ಟಿ ಶರ್ಟ್?

ಟಿ- ಶರ್ಟ್ ಆನ್ ಲೈನ್ ಮೂಲಕ ಮಾರಾಟ ಮಾಡಲಾಗುತ್ತಿದೆ. www.ka30store.in ಆನ್ ಲೈನ್ ಮಾರುಕಟ್ಟೆ ವೆಬ್ ಸೈಟ್ ನಲ್ಲಿ ಈ ಟಿ- ಶರ್ಟ್ ಸಿಗುತ್ತದೆ. ಇದರ ಬೆಲೆ 475 ರೂ. ನಿಗದಿ ಮಾಡಲಾಗಿದೆ.