ವಿವೇಕಾನಂದರ ಪುನರಾವತಾರವೆಂದೇ ಸಿದ್ದೇಶ್ವರ ಶ್ರೀಗಳು ಪ್ರಸಿದ್ಧಿ ಪಡೆದಿದ್ದರು. ಸ್ವಾಮಿ ವಿವೇಕಾನಂದರು ಯುವಕರಿಗೆ ಭಾಷಣ ಕೇಳುತ್ತ ಮನೆಯಲ್ಲಿ ಕೂರಲು ಹೇಳಲಿಲ್ಲ. ಬದಲಿಗೆ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಕರೆ ನೀಡಿದ್ದರು. ಯುವಕರನ್ನು ಸದಾ ಹುರಿದುಂಬಿಸುತ್ತಿದ್ದರು. ಆದ್ದರಿಂದಲೇ ವಿವೇಕಾನಂದರ ಜನ್ಮದಿನವನ್ನು ‘ರಾಷ್ಟ್ರೀಯ ಯುವ ದಿನ’ ಎಂದು ಆಚರಿಸಲಾಗುತ್ತದೆ.

ಅವರಂತೆಯೇ ಸಿದ್ದೇಶ್ವರ ಶ್ರೀಗಳು ಜನರಿಗೆ ಜ್ಞಾನದ ಬೆಳಕನ್ನು ನೀಡಿದರು. ಹೇಗೆ ಸರಳವಾಗಿ ಬದುಕಬೇಕೆಂಬುದನ್ನು ಹೇಳುತ್ತಿದ್ದರು. ಹಲವು ದೇಶಗಳಲ್ಲಿ ತಮ್ಮ ಸರಳ ಭಾಷೆಯಲ್ಲಿ ಪ್ರವಚನ ನೀಡುವ ಮೂಲಕ ಜನರ ಮನ ತಲುಪ್ಪಿದ್ದರು. ಹೀಗಾಗಿಯೆ ಇವರನ್ನು ವಿಜಯಪುರದ ವಿವೇಕಾನಂದ ಎಂದೇ ಕರೆಯುಲಾಗುತ್ತಿತ್ತು.

2ನೇ ವಿವೇಕಾನಂದ

ಮಠದ ಆಧ್ಯಾತ್ಮಿಕ ಶಿಕ್ಷಣ, ಕಾಲೇಜಿನ ಲೌಕಿಕ ಶಿಕ್ಷಣ ಎರಡರಲ್ಲೂ ಸಿದ್ದೇಶ್ವರ ಶ್ರೀಗಳು ಪರಿಪೂರ್ಣವಾಗಿದ್ದರು. ಹೌದು ಕಾಲೇಜಿಗೆ ಹೋಗಿ ಕಲಿತ ಲೌಕಿಕ ಶಿಕ್ಷಣ ಮಠದ ಗುರುಗಳ ಆಧ್ಯಾತ್ಮಿಕ ಶಿಕ್ಷಣ ಎರಡನ್ನೂ ಮೈಗೂಡಿಸಿಕೊಂಡ ಸಿದ್ದೇಶ್ವರರು, ಮುಂದೆ ಜ್ಞಾನ ಯೋಗಾಶ್ರಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

ತಮ್ಮ ಗುರುಗಳು ಮಲ್ಲಿಕಾರ್ಜುನ ಸ್ವಾಮಿ ಮತ್ತು ವಿವೇಕಾನಂದರನ್ನೇ ಸ್ಫೂರ್ತಿಯಾಗಿಸಿಕೊಂಡಿದ್ದ ಶ್ರೀಗಳು ಯೋಗ ಸೂತ್ರ, ಉಪನಿಷತ್ತು, ಭಗವದ್ಗೀತೆ, ವಚನಗಳು ಸೇರಿದಂತೆ ಮುಂತಾದ ವಿಷಯಗಳ ಬಗೆಗೆ ಸಾವಿರಾರು ಪ್ರವಚನಗಳನ್ನು ಮಾಡಿದ್ದಾರೆ. ತಾವು ಗುರುಗಳಿಂದ ಕಲಿತ ಭೋದನೆಗಳನ್ನು ಬಳಿಸಿಕೊಂಡು ಗಹನವಾದ ವೇದಾಂತ ತತ್ವಗಳನ್ನು ಅತ್ಯಂತ ಸರಳ ಭಾಷೆಯಲ್ಲಿ ಜನರ ಮನಸ್ಸಿನಲ್ಲಿ ಉಳಿಯುವಂತೆ ವಿವರಿಸುವುದು ಅವರ ವೈಶಿಷ್ಟ್ಯವಾಗಿತ್ತು.

ಸರಳ ಜೀವಿ, ಪ್ರಖರ ವಾಗ್ಮಿ, ವಿವೇಕ ಕಲಿಸಿದ ವಿರಾಗಿ…

ಶ್ರೀಗಳು ಹೇಳಿದ್ದ ಪ್ರವಚನದ ನುಡಿ ಜನರಲ್ಲಿ ಹಚ್ಚಿತು ಜ್ಞಾನದ ಕಿಡಿ. ಹೌದು ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಜೀವನವೇ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ. ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಸಿದ್ದೇಶ್ವರರ ಬಿಳಿ ಪಂಚೆ, ಬಿಳಿ ಅಂಗಿ ಸಾಧಾರಣ ಮೈಕಟ್ಟು ಆ ತೇಜಸ್ಸು ಹೊಂದಿದ ನಗುಮುಖ ಕಂಡವರೆಲ್ಲರ ದುಃಖ, ದುಗುಡ, ದುಮ್ಮಾನಗಳೆಲ್ಲವೂ ಮರೆಯಾಗುತ್ತಿದ್ದವು.

ಸಿದ್ದೇಶ್ವರ ಶ್ರೀಗಳು ಯಾವುದೇ ಮೋಡಿ ಮಾಡುವ ಮೂಲಕ ಜನರನ್ನು ಸೆಳೆದವರಲ್ಲ. ಬದಲಿಗೆ ಅವರು ಇದ್ದಂತ ರೀತಿ ನಡೆದು ಬಂದ ಹಾದಿ ಬದುಕಿದ ಜೀವನ ಜನರಿಗೆ ದಾರಿ ದೀಪ, ಜತೆಗೆ ಪುಸ್ತಕವೂ ಹೌದು.

ಹೇಗೆ ವಿವೇಕಾನಂದರ ಭಾಷಣ, ಪುಸ್ತಕಗಳು ಜನರಲ್ಲಿ ಸ್ಪೂರ್ತಿ ತುಂಬುತ್ತಿವೆಯೋ ಹಾಗೆ ಸಿದ್ದೇಶ್ವರ ಶ್ರೀಗಳ ಭಾಷಣ, ಪುಸ್ತಕಗಳು ಅಷ್ಟೇ ಪರಿಣಾಮವನ್ನು ಬೀರುತ್ತವೆ. ಶ್ರೀಗಳು ತಮ್ಮ ಪ್ರವಚನದ ಮೂಲಕವೇ ಅದೆಷ್ಟೋ ಜನರ ಬದುಕನ್ನು ಬದಲಿಸಿದ್ದಾರೆ. ಅವರ ಉಪನ್ಯಾಸ‌ ಸರಣಿಯ ಬದುಕುವುದು ಹೇಗೆ, ನಾವು ಹೇಗೆ ಸಾರ್ಥಕವಾಗಿ ಬದುಕಬೇಕು ಎಂಬಂಥ ಪ್ರವಚನಗಳು ಲಕ್ಷಾಂತರ ಭಾರತೀಯರನ್ನು ಬದಲಾಯಿಸಿದೆ.

ಸಿದ್ದೇಶ್ವರ ಶ್ರೀಗಳು ಅಲ್ಲಮ ಪ್ರಭು ವಚನಗಳ ಮೇಲೆ ಅಧಿಕೃತ ಭಾಷಣಕಾರರಾಗಿದ್ದರು. ಅವರು ಭಾಷಣ ಮಾಡಿ ತೋಡಗಿದ್ರೆ ಜನ ರೋಮಾಂಚನವಾಗುತ್ತಿದ್ದರು. ಅವರ ಮಾತು ಕೇಳುತ್ತಿದ್ದವರಲ್ಲಿ ಜೀವನ ಪ್ರೀತಿ ಉಕ್ಕುತ್ತಿತ್ತು.

ಕಾವಿ ಯಾಕೆ? ತೊಡುತ್ತಿರಲಿಲ್ಲ… ಶ್ರೀಗಳು

ಸ್ವಾಮೀಜಿ ಅಂದ್ರೆ ಎಲ್ಲರ ಕಣ್ಮುಂದೆ ಬರೋದು ಕಾವಿ ವಸ್ತ್ರಧಾರಿಗಳು. ಆದ್ರೆ ಸಿದ್ದೇಶ್ವರ ಶ್ರೀಗಳು ಇದಕ್ಕೆ ವಿರುದ್ಧ ಎಂಬಂತೆ ಶ್ವೇತ ವರ್ಣದ ಬಟ್ಟೆ ಧರಿಸುತ್ತಿದ್ದರು. ಒಮ್ಮೆ ಭಕ್ತರು ನೀವ್ಯಾಕೆ ಕಾವಿ ಬಟ್ಟೆ ಧರಿಸುವುದಿಲ್ಲ ಎಂದು ಪ್ರಶ್ನಿಸಿದರು. ಅದಕ್ಕೆ ನಯವಾಗಿ ಉತ್ತರಿಸಿದ ಶ್ರೀಗಳು, ವಿವೇಕವುಳ್ಳವರು ಕಾವಿ ಬಟ್ಟೆ ಧರಿಸುತ್ತಾರೆ. ಅದು ವಿವೇಕಾನಂದರಿಗೆ ಮಾತ್ರ ಸಾಧ್ಯ ಎಂದಿದ್ದರು. ಶ್ರೀಗಳ ಉತ್ತರ ಕೇಳಿದ ಭಕ್ತರು ಮೂಖ ವಿಸ್ಮಿತರಾದರು.