ಕಾರವಾರ: ಕರಾವಳಿ ಭಾಗದಲ್ಲಿ ರಭಸವಾಗಿ ಸುರಿಯುತ್ತಿರುವ ಮಳೆ ನಾಳೆಯೂ ಮುಂದುವರಿಯಲಿದ್ದು, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ 115 ರಿಂದ 204 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ.

ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ವ್ಯಾಪಕವಾಗಿ ಮಳೆಯಾಗುವುದರಿಂದ ನದಿಗಳಲ್ಲಿಯೂ ನೀರಿನ ಒಳಹರಿವು ಹೆಚ್ಚಾಗಲಿದೆ. ಹಾವಾಮಾನ ಇಲಾಖೆ ಮಾಹಿತಿ ಪ್ರಕಾರ ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳು ಮತ್ತು ಗೋವಾ ರಾಜ್ಯದವರೆಗೆ ಕರಾವಳಿಯಲ್ಲಿ ವ್ಯಾಪಕ ಮಳೆ ಸುರಿಯಲಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟ, ಹೊನ್ನಾವರ, ಭಟ್ಕಳ, ಬೈಂದೂರು, ಕುಂದಾಪುರದಲ್ಲಿ 115.6 ಮಿ.ಮೀ. ಇಂದ 204.4 ಮಿ.ಮೀ. ಮಳೆಯಾಗಲಿದೆ. ಕುಮಟಾ ತಾಲೂಕಿನ ಕತಗಾಲ ಪ್ರದೇಶದಲ್ಲಿ 204.5 ಕ್ಕಿಂತ ಅಧಿಕ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಮಲೆನಾಡಿನ ಶಿರಸಿ, ಸಿದ್ದಾಪುರ ಮತ್ತು ಜೋಯಿಡಾ (ಮುಕ್ಕಾಲು ಭಾಗ)ದಲ್ಲಿಯೂ 64.5 ಮಿ.ಮೀ. ಇಂದ 115.5 ಮಿ.ಮೀ. ಮಳೆ ಬೀಳಲಿದೆ. ಯಲ್ಲಾಪುರ, ಮುಂಡಗೋಡ, ಹಳಿಯಾಳ, ದಾಂಡೇಲಿ ಭಾಗದಲ್ಲಿ ಮಧ್ಯಮ ಮಳೆ ಬೀಳಲಿದೆ ಎನ್ನುವುದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಅಂದಾಜು.