
PMAY: ಪ್ರಧಾನ ಮಂತ್ರಿ ಆವಾಸ ಯೋಜನೆಗೆ ಅರ್ಜಿ

PMAYG ಪ್ರಧಾನ ಮಂತ್ರಿ ಆವಾಸ ಯೋಜನೆ. ಸರಕಾರಿ ಯೋಜನೆಯಡಿ ಮನೆ ಪಡೆಯಬೇಕು. ಸ್ವಂತ ಮನೆ House ಹೊಂದಬೇಕು ಎನ್ನುವವರಿಗೆ ಪ್ರಧಾನಿ ನರೇಂದ್ರ ಮೋದಿ Narendra Modi ಅವರ ಕೇಂದ್ರ ಸರಕಾರ ಭರ್ಜರಿ ಗಿಪ್ಟ್ Gift ನೀಡಿದೆ. ಈ ವರ್ಷ ಕರ್ನಾಟಕದ ಲಕ್ಷಾಂತರ ಜನರಿಗೆ ಮನೆ House ನೀಡುವ ಮಹತ್ವದ ಆದೇಶವನ್ನು ಕೇಂದ್ರ ಸರಕಾರ ಹೊರಡಿಸಿದ್ದು, ಈಗಾಗಲೇ ಕರ್ನಾಟಕದ ಎಲ್ಲ ಜಿಲ್ಲೆಗಳಿಗೆ ಸರ್ಕುಲರ್ ಹೊರಡಿಸಲಾಗಿದೆ.
ಮನೆ ಪಡೆಯಬೇಕು ಎಂದು ಹಂಬಲಿಸುತ್ತಿರುವವರು ಏನು ಮಾಡಬೇಕು, ಯಾರನ್ನು ಸಂಪರ್ಕಿಸಬೇಕು, ಅರ್ಜಿ ಹಾಕುವುದು ಹೇಗೆ, ಯಾರೆಲ್ಲ ಅರ್ಹರು ಎಂಬ ಪೂರ್ಣ ವಿವರವನ್ನು ಆದೇಶದಲ್ಲಿ ತಿಳಿಸಲಾಗಿದೆ. ಜತೆಗೆ ಈ ಮನೆಗಳನ್ನು ಪಡೆಯುವುದು ಹೇಗೆ, ಎಷ್ಟು ಹಣ ಕೊಡುತ್ತಾರೆ ಎನ್ನುವುದು ಮಹತ್ವದ ವಿಷಯ.
ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ ಈ ಬಾರಿ ಕರ್ನಾಟಕ ರಾಜ್ಯಕ್ಕೆ 2.26 ಲಕ್ಷ ಮನೆಗಳ ನಿರ್ಮಾಣದ ಗುರಿ ನೀಡಲಾಗಿದೆ. ಒಂದೊAದು ಜಿಲ್ಲೆಗೂ 5-10 ಸಾವಿರ ಮನೆಗಳನ್ನು ನೀಡಲು ಆದೇಶ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಪ್ರಧಾನ ಮಂತ್ರಿ ಆವಾಸ ಯೋಜನೆಯಲ್ಲಿ ಇಷ್ಟೊಂದು ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳನ್ನು ನೀಡಲಾಗುತ್ತಿದೆ.
PMAYG ಪ್ರಧಾನ ಮಂತ್ರಿ ಆವಾಸ ಯೋಜನೆ ಮನೆ ಅನುದಾನ ಎಷ್ಟು?
ಪ್ರಧಾನ ಮಂತ್ರಿ ಆವಾಸ ಯೋಜನೆಯ ಗ್ರಾಮೀಣ ಭಾಗದಲ್ಲಿ 2.26 ಲಕ್ಷ ಮನೆ ನಿರ್ಮಾಣದ ಗುರಿ ನಿಗದಿಯಾಗಿದೆ. ಈ ಯೋಜನೆಯಡಿ ಬಯಲು ಪ್ರದೇಶಗಳಲ್ಲಿ ಪ್ರತಿ ಮನೆಗೆ ಫಲಾನುಭವಿಗಳಿಗೆ 1.20 ಲಕ್ಷ ರೂ. ಅನುದಾನ ನೀಡಲಾಗುತ್ತದೆ. ಗುಡ್ಡಗಾಡು ಪ್ರದೇಶಗಳು, ಕಷ್ಟಕರ ಪ್ರದೇಶಗಳು (ಹಿಮಾಲಯ ರಾಜ್ಯಗಳು, ಈಶಾನ್ಯ ರಾಜ್ಯಗಳು ಮತ್ತು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಗಳು) ಪ್ರತಿ ಮನೆಗೆ 1.30 ಲಕ್ಷ ರೂ. ನೀಡಲಾಗುತ್ತದೆ.
ಜತೆಗೆ ನರೇಗಾ ಜಾಬ್ ಕಾರ್ಡ್ Job card ಮಾಡಿಸಿ 95 ಮಾನವ ದಿನಗಳ ಕೂಲಿ Payment ಕೂಡ ನೀಡಲಾಗುತ್ತದೆ. ಅಂದರೆ, ನಮ್ಮ ಮನೆಗೆ ನಾವು ಮಾಡುವ ಕೆಲಸಕ್ಕೂ ಕೇಂದ್ರ ಸರಕಾರ ಪಗಾರ ಕೊಡಲಿದೆ. ಜತೆಗೆ ಇಚ್ಛಿಸುವ ಫಲಾನುಭವಿಯು ಶಾಶ್ವತ ಮನೆ ನಿರ್ಮಿಸಲು 3% ಕಡಿಮೆ ಬಡ್ಡಿದರದಲ್ಲಿ 70,000 ರೂ. ವರೆಗಿನ ಸಾಂಸ್ಥಿಕ Finance ಹಣಕಾಸು (ಸಾಲ) Loan ಪಡೆಯಬಹುದು. ಸಬ್ಸಿಡಿಯನ್ನು Subsidy ಕೇಳಬಹುದಾದ ಗರಿಷ್ಠ ಮೂಲ ಮೊತ್ತವು ಎರಡು ಲಕ್ಷ ರೂ. ಆಗಿದೆ. ಸ್ವಚ್ಛ ಭಾರತ್ ಮಿಷನ್-ಗ್ರಾಮಿನ್ Swachh Bharath Mission ಅಡಿ ಫಲಾನುಭವಿಗಳು ಶೌಚಾಲಯಗಳ ನಿರ್ಮಾಣಕ್ಕಾಗಿ 12,000 ವರೆಗೆ ಆರ್ಥಿಕ ಸಹಾಯವನ್ನು ಪಡೆಯಬಹುದು.
PMAYG ಪ್ರಧಾನ ಮಂತ್ರಿ ಆವಾಸ ಯೋಜನೆ (House) ಮನೆ ಹೇಗಿರಬೇಕು?
ಮನೆಯ ಕನಿಷ್ಠ ಗಾತ್ರವು 25 ಚದರ ಮೀಟರ್ ಆಗಿರಬೇಕು. ಇದರಲ್ಲಿ ಅಡುಗೆಗಾಗಿ ಮೀಸಲಾದ ಪ್ರದೇಶವೂ ಸೇರಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ Ujjwal Scheme ಅನುಗುಣವಾಗಿ, ಪ್ರತಿ ಮನೆಗೆ ಒಂದು ಗ್ಯಾಸ್ ಸಂಪರ್ಕವನ್ನು ಒದಗಿಸಲಾಗುತ್ತದೆ. ಪೈಪ್ ಮೂಲಕ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಶುದ್ಧ ಮತ್ತು ಪರಿಣಾಮಕಾರಿ ಅಡುಗೆ ಇಂಧನ Gas, ಸಾಮಾಜಿಕ ಮತ್ತು ದ್ರವ ತ್ಯಾಜ್ಯದ ಸಂಸ್ಕರಣೆ ಇತ್ಯಾದಿ ಸರ್ಕಾರಿ ಸೌಲಭ್ಯಗಳು ಸಿಗಲಿವೆ.
PMAYG ಪ್ರಧಾನ ಮಂತ್ರಿ ಆವಾಸ ಯೋಜನೆ ಯಾರು ಅರ್ಹರು?
ಪ್ರಧಾನ ಮಂತ್ರಿ ಆವಾಸ ಯೋಜನೆಗೆ ಅರ್ಜಿ ಸಲ್ಲಿಸಲು ವಿವಿಧ ಅರ್ಹತೆಗಳು ಹೊಂದಿರಬೇಕಾಗಿದೆ. ಮನೆ ಇಲ್ಲದೆ ಇರುವವರು, ಒಂದು ಅಥವಾ ಎರಡು ಕೋಣೆಗಳ ಕಚ್ಚಾ ಮನೆಯಲ್ಲಿ ಇರುವವರು. ಕಚ್ಚಾ ಛಾವಣಿಯ ಮನೆಯಲ್ಲಿ ವಾಸಿಸುವವರು ಯೋಜನೆಗೆ ಅರ್ಹರು. ನಿರ್ಗತಿಕರು, ಭಿಕ್ಷೆ ಮೇಲೆ ಬದುಕುವವರು, ಆದಿವಾಸಿಗಳು ಕೂಡ ಅರ್ಜಿ ಹಾಕಬಹುದು.
PMAYG ಪ್ರಧಾನ ಮಂತ್ರಿ ಆವಾಸ ಯೋಜನೆ ಅರ್ಜಿ ಹಾಕುವುದು ಹೇಗೆ?
ಪ್ರಧಾನ ಮಂತ್ರಿ ಆವಾಸ ಯೋಜನೆ (ಗ್ರಾಮೀಣ) ಮನೆ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವವರು ಸ್ಥಳೀಯ ಗ್ರಾಮ ಪಂಚಾಯಿತಿಗೆ ಅರ್ಜಿ ಕೊಡಬಹುದು. ಅಥವಾ ಕೇಂದ್ರ ಸರಕಾರಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅರ್ಜಿ ವಿಧಾನಗಳ ಪೂರ್ಣ ಮಾಹಿತಿ ತಿಳಿಯಲು ಈ ಕೆಳಗಿನ ಲಿಂಕ್ ಬಳಸಿ.