Categories: Travel & Lifestyle

ದೂದ್ ಸಾಗರ್ ಇರುವ ಬ್ರಗಾಂಜಾ ಘಾಟ್ ಬಗ್ಗೆ ತಿಳಿದಿದೆಯೇ?

ಭೂಮಿ ಮೇಲಿನ ಸ್ವರ್ಗ ಕರ್ನಾಟಕ- ಗೋವಾ ರಾಜ್ಯಗಳ ಗಡಿಯಲ್ಲಿರುವ ದೂಧ್ ಸಾಗರ ಜಲಪಾತ ನೋಡುವ ಸಂಭ್ರಮ ವರ್ಣಿಸಲು ಸಾಧ್ಯವೇ ಇಲ್ಲ. ಸೇತುವೆ ಕೆಳಗಿಂದ ಜಲಪಾತ ಹರಿಯುವುದನ್ನು ನೋಡುವಾಗ ಮೈ ರೋಮಾಂಚನಗೊಳ್ಳುತ್ತದೆ. ಅಂಥ ಅದ್ಬುತ ಸ್ಥಳದ ಹಿನ್ನೆಲೆ ಕೇಳಿದರೆ ಅಚ್ಚರಿಯಾಗದೆ ಇರದು.

ವಾಸ್ತವದಲ್ಲಿ ದೂಧ್ ಸಾಗರ್ ಜಲಪಾತ ಹರಿಯುವುದು ಬ್ರಗಾಂಜಾ ಘಾಟ್ ನಲ್ಲಿ. ಘಾಟ್ ಎಂದರೆ ಮರಾಠಿಯಲ್ಲಿ ಗುಡ್ಡ ಎನ್ನುವ ಅರ್ಥ ಬರುತ್ತದೆ. ಬ್ರಗಾಂಜಾ ಘಾಟ್ ನಲ್ಲಿಯೇ ಜಲಪಾತದ ಮೇಲೆ ರೈಲ್ವೆ ಸೇತುವೆ ನಿರ್ಮಿಸಲಾಗಿದೆ. ಸೇತುವೆ ಮೇಲೆ ರೈಲು ಹೋಗುವುದನ್ನು ನೋಡಲು ಎರಡು ಕಣ್ಣು ಸಾಲದು.

ಅಂದಹಾಗೆ ಆ ಸ್ಥಳಕ್ಕೆ ಬ್ರಗಾಂಜಾ ಘಾಟ್ ಎಂದು ಹೆಸರು ಬಂದಿದ್ದಕ್ಕೂ ಕಾರಣವಿದೆ. ಈ ಬ್ರಗಾಂಜಾ ಘಾಟ್ ಗೋವಾ- ಕರ್ನಾಟಕ ಗಡಿಯಲ್ಲಿ ಪಶ್ಚಿಮ ಘಟ್ಟದಲ್ಲಿದೆ. ಇದು ಕರ್ನಾಟಕದ ಕ್ಯಾಸಲ್ ರಾಕ್ ನಿಂದ ಗೋವಾದ ಕುಲೆಮ್ ವರೆಗೆ ವಿಸ್ತರಿಸಿದೆ.

ಬ್ರಗಾಂಜಾ ಎನ್ನುವುದು 1640-1910ರವರೆಗೆ ಪೋರ್ಚುಗಲ್ ಅನ್ನು ಆಳಿದ ರಾಜವಂಶದ ಹೌಸ್ ಆಫ್ ಬ್ರಗಾಂಜಾಗೆ ಮೂಲವಾಗಿದೆ. ಈ ರೈಲು ಸಂಪರ್ಕವು ಪೋರ್ಚುಗಲ್ ಭಾರತವನ್ನು ಆಳಿದ ಮತ್ತು ಬ್ರಿಟೀಷರು ಭಾರತವನ್ನು ಆಳಿದ ನಡುವಿನ ಮೊದಲ ಅಂತಾರಾಷ್ಟ್ರೀಯ ರೈಲು ಸಂಪರ್ಕಗಳಲ್ಲಿ ಒಂದಾಗಿದೆ.

ಹಾಗಾಗಿ ಈ ಪ್ರದೇಶಕ್ಕೆ ಬ್ರಗಾಂಜಾ ಘಾಟ್ ಎನ್ನುವ ಹೆಸರು ಬಂದಿದೆ ಎಂದು ಹೇಳಲಾಗುತ್ತಿದೆ. ದೂದ್ ಸಾಗರ್ ಜಲಪಾತದ ಮೇಲೆ ನಿರ್ಮಿಸಿರುವ ಸೇತುವೆ ಮೇಲಿನ ರೈಲು ಹಳಿಯನ್ನು ನೈರುತ್ಯ ರೈಲ್ವೆ ವಿಭಾಗವು ನಿರ್ವಹಿಸುತ್ತದೆ. ಇಲ್ಲಿ ಚಿರತೆ, ಕಾಡುಕೋಣಗಳ ಓಡಾಟವೂ ಇದೆ.

ಜಲಪಾತ ನೋಡುವುದು ಹೇಗೆ?
ಕೊರೊನಾ ಕಾರಣದಿಂದ ದೂದ್ ಸಾಗರ್ ಜಲಪಾತ ವೀಕ್ಷಣೆಗೆ ಸಮಸ್ಯೆ ಉಂಟಾಗಿದೆ. ರೈಲು ಹಳಿಗಳ ಮೇಲೆ ನಡೆದಾಡುತ್ತ ಹತ್ತಿರದಿಂದ ಜಲಪಾತ ವೀಕ್ಷಣೆ ಮಾಡುವ ಭಾಗ್ಯ ಸದ್ಯಕ್ಕೆ ಇಲ್ಲ. ಹಾಗಾರೆ ಜಲಪಾತ ನೋಡಲು ಅವಕಾಶವೇ ಇಲ್ಲವೇ? ಎಂದು ಹೌಹಾರುವ ಅಗತ್ಯ ಇಲ್ಲ.

ಇದೇ ಮಾರ್ಗದಲ್ಲಿ ವಾಸ್ಕೊ ನಿಜಾಮುದ್ದೀನ್ ರೈಲೊಂದು ಸಂಚರಿಸುತ್ತಿದೆ. ಈ ರೈಲು ಗೋವಾದ ಮಡಗಾಂವ್ ನಿಂದ ಲೋಂಡಾ ಮಾರ್ಗವಾಗಿ ಸಾಗುತ್ತದೆ. ಮೈದುಂಬಿ ಹರಿಯುತ್ತಿರುವ ಜಲಪಾತದ ಸೌಂದರ್ಯ ತುಂಬಿಕೊಳ್ಳುವ ಆಸೆ ಇದ್ದರೆ ಈ ರೈಲಿನಲ್ಲಿ ಪ್ರಯಾಣಿಸಬಹುದು. ಆದರೆ, ಮರಳಿ ಬರಲು ರೈಲು ವ್ಯವಸ್ಥೆ ಇಲ್ಲ. ಹಾಗಾಗಿ ಸದ್ಯ ಪ್ರವಾಸ ಯೋಗ್ಯವಲ್ಲ.

ಮತ್ತಷ್ಟು ಪ್ರವಾಸ ವರದಿಗಳು

admin

Recent Posts

ರೈತನ ಬಾಳಲ್ಲಿ ಜೀವಜಲ ತುಂಬಿದ ರಿಂಗ್ ಮಾಸ್ಟರ್ ನರೇಗಾ

ಉತ್ತರ ಕನ್ನಡಅಂಗೈ ಅಗಲದ ಭೂಮಿಯಲ್ಲಿ ಬೆರಳ ಗಾತ್ರ ನೀರುಕ್ಕುವ ಕೊಳವೆ ಬಾವಿ, ಅದನ್ನೇ ನಂಬಿ ನೆಟ್ಟ ಅಡಿಕೆ ಸಸಿ, ಸತತ…

7 months ago

PMAY: ಪ್ರಧಾನ ಮಂತ್ರಿ ಆವಾಸ ಯೋಜನೆಗೆ ಅರ್ಜಿ

PMAYG ಪ್ರಧಾನ ಮಂತ್ರಿ ಆವಾಸ ಯೋಜನೆ. ಸರಕಾರಿ ಯೋಜನೆಯಡಿ ಮನೆ ಪಡೆಯಬೇಕು. ಸ್ವಂತ ಮನೆ House ಹೊಂದಬೇಕು ಎನ್ನುವವರಿಗೆ ಪ್ರಧಾನಿ…

2 years ago

ಬ್ಯೂಟಿ ಪಾರ್ಲರ್ ನಿರ್ವಹಣೆ ಉಚಿತ ತರಬೇತಿ

ಗ್ರಾಮೀಣಾಭಿವೃದ್ಧಿ ಹಾಗೂ ಸ್ವ ಉದ್ಯೋಗ ತರಬೇತಿ ಸಂಸ್ಥೆ(ರುಡ್ ಸೆಟ್ ಸಂಸ್ಥೆ) ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾವಂತ…

2 years ago

ಕತ್ತೆ ಸಾಕಾಣಿಕೆಯಲ್ಲಿ ದುಪ್ಪಟ್ಟು ಆದಾಯ

ಕತ್ತೆಗೂ ಈಗ ಬೇಡಿಕೆ ಬಂದಿದೆ. ಕತ್ತೆ ಎಂದು ಬೈಯುವಾಗ ಒಮ್ಮೆ ಅಲೋಚಿಸಬೇಕಿದೆ. ಕೃಷಿಯಲ್ಲಿ ನಡೆಯುತ್ತಿರುವ ಪ್ರಯೋಗಗಳು ಹೊಸ ಅವಕಾಶಗಳನ್ನು ಸೃಷ್ಟಿ…

2 years ago

ಉದ್ಯಮ ಶುರುಮಾಡಲು ಹೆಣ್ಮಕ್ಕಳಿಗೆ ಸಿಗುತ್ತೆ ₹ 3 ಲಕ್ಷ ಬಡ್ಡಿ ರಹಿತ ಸಾಲ: ಇಂದೆ ಅರ್ಜಿ ಸಲ್ಲಿಸಿ

ಹೆಣ್ಣುಮಕ್ಕಳಲ್ಲಿ ಉದ್ಯಮಶೀಲತೆ ಹೆಚ್ಚಿಸಲು, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ 'ಉದ್ಯೋಗಿನಿ ಯೋಜನೆ' (ಉದ್ಯೋಗಿನಿ ಸ್ಕೀಮ್)…

3 years ago

KSRTC: FDA, SDA, ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘ ನಿಯಮಿತವು, ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ…

3 years ago