ಕೊರೊನಾದಿಂದಾದ ಲಾಕ್ ಡೌನ್ ಬಳಿಕ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಸಾಕಷ್ಟು ಪರಿಣಾಮ ಉಂಟಾಗಿದೆ. ನಾಗರೀಕರು ದುಡಿಮೆ ಇಲ್ಲದೆ ಕಂಗಾಲಾಗಿದ್ದಾರೆ. ಇಂಥ ಸ್ಥಿತಿಯಲ್ಲಿ ಕೇಂದ್ರ ಸರಕಾರ ಕೊರೊನಾ ಸಹಾಯತಾ ಯೋಜನೆಯಡಿ ಒಂದು ಸಾವಿರ ರೂಪಾಯಿ ಕೊಡುತ್ತದೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.

ಕೊರೊನಾ ಸಹಾಯತಾ ಯೋಜನೆ ಅರ್ಜಿ ಭರ್ತಿ ಮಾಡಿ ಒಂದು ಸಾವಿರ ರೂಪಾಯಿ ಪಡೆಯಿರಿ. ಜನಗಂತೂ ಸಿಕ್ಕಿದೆ. ನಿವೂ ಪಡೆಯಬೇಕೆಂದಿದ್ದರೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಮತ್ತು ತಕ್ಷಣವೇ ಒಂದು ಸಾವಿರ ರೂಪಾಯಿ ಪಡೆಯಿರಿ ಎಂದು ಯುಆರ್ ಎಲ್ ಲಿಂಕ್ ಇರುವ ಮೆಸೇಜ್ ಇದಾಗಿದೆ.

ಸತ್ಯಾಂಶ ಏನು?
ಕೊರೊನಾ ಸಹಾಯತ ಎನ್ನುವ ಇಂಥ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ ಇಂದು ಕೇಂದ್ರ ಸರಕಾರವೇ ಸ್ಪಷ್ಟಪಡಿಸಿದೆ. ಕೇಂದ್ರ ಸರಕಾರದ ಪ್ರೆಸ್ ಇನ್ ಫಾರ್ಮೇಶನ್ ಬ್ಯುರೊ ಫ್ಯಾಕ್ಟ್ ಚೆಕ್ ಟ್ವಿಟರ್ ನಲ್ಲಿ ಈ ಕುರಿತು ಟ್ವೀಟ್ ಮಾಡಿದೆ. ಹಾಗಾಗಿ ವಾಟ್ಸ ಆ್ಯಪ್ ಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎನ್ನುವುದು ದೃಢಪಡುತ್ತದೆ.