Select Page

ಈರುಳ್ಳಿ ಹಳದಿ ರೋಗ ಭಾದೆ ನಿವಾರಣೆಗೆ ಕ್ರಮ

ಈರುಳ್ಳಿ ಹಳದಿ ರೋಗ ಭಾದೆ ನಿವಾರಣೆಗೆ ಕ್ರಮ

ಈರುಳ್ಳಿ ಬೆಳೆಯಲ್ಲಿ ಕಂಡುಬಂದಿರುವ ರೋಗ ಲಕ್ಷಣಗಳಿಗೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕ್ಷೇತ್ರ ಭೇಟಿ ನೀಡಿ ತಾಂತ್ರಿಕ ವರದಿ ಸಲ್ಲಿಸಿದ್ದು, ರೈತರು ಹಳದಿ ರೋಗ ಭಾದೆಗೆ ಕೆಳಗೆ ನೀಡಿರುವ ನಿರ್ವಹಣಾ ಕ್ರಮಗಳನ್ನು ಅನುಸರಿಸುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರಂಭದಲ್ಲಿ ಬಿತ್ತನೆ ಮಾಡಿದ ಬೆಳೆಗೆ ಆತೀವ ಸಾಪ್ಟ್ ರೂಟ್ ರೋಗ ಬಾಧೆ ಎಂಟರ್‍ಬ್ಯಾಕ್ಟರ್ ಕ್ಲೋಕಿ ಇಂದ ಹಾಗೂ ಪರಪಲ್ ಬ್ಲೋಚ್ ರೋಗ ಬಾಧೆ ಅಲ್ಟರ್ನ್‍ರಿಯಾ ಪೊರ್ರಿ ಇಂದ ಮತ್ತು ಕಲೇಟೋಟ್ರಿಚಮ್ ಎಸ್‍ಪಿಪಿ ಯಿಂದ ತಿರುಚುವಿಕೆ ಉಂಟಾಗಿರುತ್ತದೆ.

ಆದಾಗ್ಯೂ ಸ್ಕೆಲರೊಟಿಯಮ್ ರೋಲ್ಪಸಿ ರೋಗಾಣುವಿನಿಂದ ಉಂಟಾಗಿರುವ ವೈಟ್ ರಾಟ್ ರೋಗಬಾಧೆಯು ಮೇಲಿನ ಎಲ್ಲ ರೋಗಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿದೆ. ಮುಂಜಾಗ್ರತಾ ಕ್ರಮ ಅನುಸರಿಸಿದ ಕ್ಷೇತ್ರಗಳಲ್ಲಿ ಬೆಳೆಯು ಸಾಮಾನ್ಯ ಸ್ಥಿತಿಯಲ್ಲಿರುತ್ತದೆ.

ಕೃಷಿ ಜಮೀನು ಖರೀದಿಗೆ ಶೇ. 50 ರಷ್ಟು ಸಬ್ಸಿಡಿ ಸಾಲ

ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಕ್ರಮವಾಗಿ 153.9 ಮೀ.ಮೀ, 117.2 ಮೀ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಹೆಚ್ಚಿನ ಮಳೆಯ ಕಾರಣದಿಂದಾಗಿ ಅಧಿಕ ತೇವಾಂಶ ಹಾಗೂ ಮೋಡ ಕವಿದ ವಾತಾವರಣದಿಂದಾದಿ ಸಾಪ್ಟ್ ರೊಟ್, ಟ್ವಿಸ್ಟಿಂಗ್ & ಪರಪಲ್ ಬ್ಲೋಚ್ ರೋಗಗಳು ಕಂಡುಬಂದಿದ್ದು, ನಂತರದ ದಿನಗಳಲ್ಲಿ ಮಳೆಯ ಅಭಾವದಿಂದ ತೇವಾಂಶ ಕೊರತೆ ಉಂಟಾಗಿ ರೈತರು ಮೇಲಿನ ರೋಗಗಳು ನೀರಾವರಿಯಿಂದ ಹೆಚ್ಚಿನ ತೀವ್ರತೆ ಕಾಣಬಹುದೆಂದು ಊಹಿಸಿ ನೀರುಣಿಸದೇ ಇರುವುದರಿಂದ ವೈಟ್ ರೋಟ್ ರೋಗವು ತೀವ್ರತರದಲ್ಲಿ ಉದ್ಬವಿಸಿರುತ್ತದೆ.

ಮುಖ್ಯವಾಗಿ ಅರ್ಕಾ ಕಲ್ಯಾಣ, ಇಂಡೋ ಅಮೇರಿಕನ್, ಸೆಮಿಸಿಸ ಸೀಡ್ಸ್ ಸೂಪರ್ ಮತ್ತು ಸ್ಥಳೀಯ ಈರುಳ್ಳಿ ತಳಿಗಳನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದ್ದು, ಬೆಳೆಗಳು 30 ರಿಂದ 60 ದಿನಗಳ ಹಂತದಲ್ಲಿರುತ್ತವೆ. ರೋಗ ಬಾಧೆಯು ಶೇ.10 ರಿಂದ 30 ರಷ್ಟು ಮತ್ತು ವೈಟ್ ರೋಟ್ ರೋಗವು ಶೇ.5 ರಿಂದ 10 ರಷ್ಟು ಕಂಡು ಬಂದಿರುತ್ತದೆ.

ಎಂಜಿನಿಯರ್ ಆಸೆ ಬಿಟ್ಟು ಕೃಷಿಯಲ್ಲೇ ಲಕ್ಷ ರೂ. ಗಳಿಸುವ ರೈತ

ರೋಗಗಳು ಮಣ್ಣಿನ ಮುಖಾಂತರ ಹರಡುವುದರಿಂದ ರೈತ ಸಮುದಾಯವು ಹೆಚ್ಚು ಆತಂಕದಲ್ಲಿದೆ. ರೈತ ಬಾಂಧವರಿಗೆ ವಿಜ್ಞಾನಿಗಳು ಕಾರಬೆಂಡಜಿನ್ 12% + ಮ್ಯಾನಕೋಜೆಬ್ 63% @ 2.0 ಗ್ರಾಂ ಪ್ರತಿ ಲೀಟರ್‍ಗೆ ನೀರಿನೊಂದಿಗೆ ರೋಗ ಬಾಧಿತ ಸ್ಥಳಗಳಿಗೆ ಹಾಗೂ ಅಕ್ಕಪಕ್ಕದ ಸ್ಥಳಗಳಿಗೆ ಡ್ರೆಂಚಿಂಗ್ ಮಾಡುವುದು.

ಬರಡು ನೆಲದಲ್ಲೂ ಇಳುವರಿ ಹೆಚ್ಚಿಸುವ ಇನ್ನೋವೇಟಿವ್ ರೈತ

ತತಕ್ಷಣ ಸ್ಟ್ರಿಪ್ಕೋಸೈಕಲಿನ @ 0.5 ಗ್ರಾ + ಕಾಪ್ಪರ್ ಓಕ್ಸಿ ಕ್ಲೋರೈಡ್ @ 2.5 ಗ್ರಾಂ ಪ್ರತಿ ಲೀಟರ್ ನೀರಿನೊಂದಿಗೆ ಸಿಂಪರಣೆ ಮಾಡಬೇಕು. 4-5 ದಿನಗಳ ನಂತರ 2ನೇ ಸಿಂಪರಣೆಯಾಗಿ ಅಜೋಕ್ಸಿಸ್ಟ್ರೋಬಿನ್ 11% + ಟೆಬುಕೊನಜೋಲ್ 18.3% ಡಬ್ಲೂ.ಡಬ್ಲೂ ಎಸ್‍ಸಿ @ 1.0 ಎಂ.ಎಲ್ + ಅಸಿಟೆಮಪ್ರೈಡ್ @ 0.3 ಗ್ರಾ. + ಬೋರ್ನ್ @ 1 ಗ್ರಾಂ. ಪ್ರತಿ ಲೀಟರ್ ನೀರಿನೊಂದಿಗೆ ಸಿಂಪರಣೆ ಮಾಡಲು ಶಿಫಾರಸ್ಸು ಮಾಡಿರುತ್ತಾರೆ ಎಂದು ತಿಳಿಸಿದ್ದಾರೆ.

Trackbacks/Pingbacks

  1. ರೈತರ ಮಕ್ಕಳ ಶಿಷ್ಯವೇತನ: ಪಡೆಯುವುದು ಹೇಗೆ? ಪೂರ್ಣ ವಿವರ ಇಲ್ಲಿದೆ | - […] Read More: ಈರುಳ್ಳಿ ಹಳದಿ ರೋಗ ಭಾದೆ ನಿವಾರಣೆಗೆ ಕ್ರಮ […]
  2. ತೋಟಗಾರಿಕೆ ತರಬೇತಿಗೆ ರೈತರ ಮಕ್ಕಳಿಂದ ಅರ್ಜಿ ಆಹ್ವಾನ | - […] ಈರುಳ್ಳಿ ಹಳದಿ ರೋಗ ಭಾದೆ ನಿವಾರಣೆಗೆ ಕ್ರಮ […]

Leave a reply

Your email address will not be published. Required fields are marked *