Select Page

ಶುಂಠಿ: ಕಡಿಮೆ ಬಿತ್ತನೆಯಲ್ಲಿ ಅಧಿಕ ಇಳುವರಿ ಟಿಪ್ಸ್

ಶುಂಠಿ: ಕಡಿಮೆ ಬಿತ್ತನೆಯಲ್ಲಿ ಅಧಿಕ ಇಳುವರಿ ಟಿಪ್ಸ್

ಶುಂಠಿ ಬೆಳೆಯುವ ರೈತರು ಸುಧಾರಿತ ತಳಿಗಳನ್ನು ಉಪಯೋಗಿಸುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಕೃಷಿ ವಿಜ್ಞಾನಿಗಳು ಪ್ರತಿಪಾದಿಸಿದ್ದಾದ್ದಾರೆ. ಅಲ್ಲದೆ, ಈ ಪದ್ಧತಿಯಿಂದ ಬೆಳೆದ ಗಡ್ಡೆಗಳನ್ನು ಬಹಳ ದಿನಗಳವರೆಗೆ ಶೇಖರಿಸಲು ಸಹಾಯವಾಗುತ್ತದೆ.

ವಿಜ್ಞಾನಿಗಳು ಹೇಳುವ ಪ್ರಕಾರ ಸಾಂಪ್ರದಾಯಿಕವಾಗಿ ಗಡ್ಡೆಗಳನ್ನು ಬಿತ್ತಿದಾಗ, ಪ್ರತಿ ಹೆಕ್ಟೇರ್ ಗೆ 1500-2000 ಕೆ.ಜಿ. ಬಿತ್ತನೆ ಗಡ್ಡೆಗಳು ಬೇಕಾಗುತ್ತವೆ. ಅದೇ ಸುಧಾರಿತ ನಾಟಿ ಪದ್ಧತಿಯಲ್ಲಿ ಪ್ರತಿ ಹೆಕ್ಟೇರ್ ಬಿತ್ತನೆಗೆ 400-500 ಕೆ.ಜಿ.  ಗಡ್ಡೆಗಳು ಸಾಕಾಗುತ್ತವೆ.

ಅಲ್ಲದೇ, ಹೊದಿಕೆಯನ್ನು ಸಾವಯವ ಹಸಿರು ಎಲೆಗಳಿಂದ ಮಾಡುವದರಿಂದ ಬೆಳೆ ಅವಧಿಯಲ್ಲಿ ಮಣ್ಣಿನ ಉಷ್ಣಾಂಶ ಕಾಪಾಡಲು ಹಾಗೂ ಕಳೆಗಳನ್ನು ತಡೆಯಲು ಸಹಾಯವಾಗುತ್ತದೆ ಎಂದು ವಿಜ್ಞಾನಿ ಡಾ. ಜ್ಯೋತಿ ಕಟ್ಟೇಗೌಡರ ಹೇಳುತ್ತಾರೆ.

ಓದಿ: ಸ್ವಯಂ ಉದ್ಯೋಗಕ್ಕೆ ಹೈನುಗಾರಿಕೆ, ಗೊಬ್ಬರ ತಯಾರಿಕೆ ತರಬೇತಿ – ಸಾಲ

ಮಣ್ಣುಗಳ ರಕ್ಷಣೆ

ಕೊಟ್ಟಿಗೆ ಗೊಬ್ಬರ 25 ಟನ್ ಮತ್ತು 217 ಕಿ.ಗ್ರಾಂ ಯೂರಿಯಾ, 312 ಕೆ.ಜಿ. ಎಸ್.ಎಸ್.ಪಿ ಮತ್ತು 83 ಕೆ.ಜಿ. ಎಂ.ಒ.ಪಿ ಜೊತೆಗೆ ಹಸಿರೆಲೆ ಗೊಬ್ಬರವನ್ನು ಹಾಕಿದಾಗ ಶುಂಠಿಯ ಪೋಷಕಾಂಶಗಳ ಕೊರತೆಯನ್ನು ನೀಗಿಸಬಹುದು.

ಲಘು ಪೋಷಕಾಂಶಗಳಾದ ಕಬ್ಬಿಣ, ತಾಮ್ರ ಮತ್ತು ಇತರೆ ಪೋಷಕಾಂಶಗಳನ್ನು ಜಿಂಜರ್ ರಿಜ್ (ಮಣ್ಣಿನ ರಸಸಾರ 7 ಕ್ಕಿಂತ ಹೆಚ್ಚು ಇದ್ದಲ್ಲಿ) ಮತ್ತು ಜಿಂಜರ್ ಸ್ಪೇಷಲ್ (ಮಣ್ಣಿನ ರಸಸಾರ 7 ಕ್ಕಿಂತ ಕಡಿಮೆ ಇದ್ದಲ್ಲಿ) ಬಳಸಬೇಕು ಎನ್ನುವುದು ಮಣ್ಣು ವಿಜ್ಞಾನಿ ಡಾ. ಅನಿಲ್‍ಕುಮಾರ್ ಅವರ ಸಲಹೆ.

ಓದಿ: ಕೃಷಿ ಸ್ಟಾರ್ಟಪ್: ರೈತರ ಉತ್ಪನ್ನಗಳಿಗೆ ಭರ್ಜರಿ ಡಿಮಾಂಡ್

ರೋಗ ನಿಯಂತ್ರಣ

ಶುಂಠಿಯ ಸಮಗ್ರ ಪೀಡೆ ನಿರ್ವಹಣೆಗೆ ಕೇವಲ ರಾಸಾಯನಿಕ ಬಳಕೆಗಷ್ಟೇ ಒತ್ತು ಕೊಡಬಾರದು. ಸಮಗ್ರ ನಿರ್ವಹಣಾ ಕ್ರಮಗಳನ್ನು ಅನುಸರಿಸುವದರಿಂದ ರೋಗ ಮತ್ತು ಕೀಟಗಳನ್ನು ಹತೋಟಿ ಮಾಡಬಹುದು ಎಂದರು.

ಓದಿ: ಬೆಳೆ ನುಂಗುವ ಶಂಕು ಹುಳು ನಿಯಂತ್ರಿಸುವ ಕ್ರಮಗಳು

ಶುಂಠಿಗೆ ಸಾಮಾನ್ಯವಾಗಿ ಗಡ್ಡೆಕೊಳೆ ರೋಗ, ಎಲೆ ಚುಕ್ಕೆ ರೋಗ, ದುಂಡಾಣುವಿನಲ್ಲಿ ಬರುವಂತಹ ಸೊರಗು ರೋಗ, ಜಂತುಹುಳು, ಕಾಂಡ ಕೊರೆಯುವ ಹುಳುವಿನ ಬಾಧೆ ಕಾಡುತ್ತವೆ. ಬೇವಿನ ಹಿಂಡಿಯನ್ನು ಮಣ್ಣಿಗೆ ಸೇರಿಸುವುದರಿಂದ ಜಂತುಹುಳುಗಳ ಬಾಧೆಯನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ. ಅಂಬಿಕಾ ಡಿ.ಎಸ್.

ಓದಿ: ಸೂರ್ಯಕಾಂತಿ ಬೆಳೆಯಲ್ಲಿ ರೋಗ ಕಂಡರೆ ತಕ್ಷಣವೇ ಹೀಗೆ ಮಾಡಿ

ಶುಂಠಿ ಬಿತ್ತನೆಯ ಪೂರ್ವ ಏರು ಸಸಿಮಡಿ ತಯಾರಿಕೆ ಬಿತ್ತನೆಯ 40-45 ದಿನಗಳ ಮುಂಚೆ ಮಡಿಗಳಿಗೆ ಪ್ಲಾಸ್ಟಿಕ್ ಹೊದಿಕೆ ಹೊದಿಸಿ ಸೌರ್ಯಿಕರಣ ಮಾಡುವುದರಿಂದ ಭೂಮಿಯಲ್ಲಿರುವ ರೋಗಾಣುಗಳನ್ನು ಹತೋಟಿ ಮಾಡಬಹುದು.

ಓದಿ: ಈರುಳ್ಳಿಗೆ ಹಳದಿ ರೋಗ ಬಾಧೆ: ರೈತರಿಗೆ ವಿಜ್ಞಾನಿಗಳ ಸಲಹೆ

ಆರೋಗ್ಯವಂತ ತೋಟದಿಂದ ಬಿತ್ತನೆ ಗಡ್ಡೆಗಳನ್ನು ಆಯ್ಕೆ ಮಾಡಿಕೊಂಡು ಬೀಜೋಪಚಾರ ಮಾಡಿ ಬಿತ್ತುವುದರಿಂದ ಹೆಚ್ಚಿನ ಲಾಭ ಪಡೆಯಬಹುದಾಗಿದೆ ಎಂದು ವಿಜ್ಞಾನಿಗಳು ರೈತರಗೆ ಸಲಹೆ ನೀಡುತ್ತಾರೆ.

Leave a reply

Your email address will not be published. Required fields are marked *