Select Page

Advertisement

ಸ್ಟಾರ್ ಕ್ರಿಕೆಟರ್ ರಿಷಬ್ ಪಂತ್ ಕಾರು ಅಪಘಾತ

ಸ್ಟಾರ್ ಕ್ರಿಕೆಟರ್ ರಿಷಬ್ ಪಂತ್ ಕಾರು ಅಪಘಾತ

ಉತ್ತರಾಖಂಡ: ದೆಹಲಿ-ಡೆಹ್ರಾಡೂನ್ ಹೈವೇ ಬಳಿ ಕಾರು ಡಿವೈಡರ್ ಗೆ ಡಿಕ್ಕಿಯಾದ ಪರಿಣಾಮ ಸ್ಟಾರ್ ಕ್ರಿಕೆಟರ್ ರಿಷಬ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಂದು ಬೆಳಗಿನ ಜಾವ 5.15ರ ಸುಮಾರಿಗೆ ರಿಷಬ್ ಪಂತ್ ತಮ್ಮ ಬಿಎಂಡಬ್ಲ್ಯೂ ಕಾರಿನಲ್ಲಿ ದೆಹಲಿಯಿಂದ ಡೆಹ್ರಾಡೂನ್ ಕಡೆ ಹೊರಟಾಗ ಅತಿಯಾದ ಮಂಜು ಮುಸುಕಿದ್ದರಿಂದ ಆಯ ತಪ್ಪಿ ಕಾರು ಡಿವೈಡರ್ ಗೆ ಡಿಕ್ಕಿಯಾಗಿದೆ.

ಈಗ ಪಂತ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಲೆ, ಬೆನ್ನು ಮತ್ತು ಕಾಲಿಗೆ ಗಂಭೀರ ಗಾಯಗಳಾಗಿವೆ. ಕಾಲಿನ ಶಸ್ತ್ರ ಚಿಕಿತ್ಸೆ ಮಾಡಬೇಕು, ಆದ್ರೆ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದರು.

Leave a reply

Your email address will not be published. Required fields are marked *