ಕಾರವಾರ: ಕಳೆದ ಹತ್ತಾರು ದಿನಗಳಿಂದ ಪ್ರತಿದಿನ ಉತ್ತರ ಕನ್ನಡ ಜಿಲ್ಲೆಯಲ್ಲಿ ಶತಕ ಬಾರಿಸುತ್ತಿದ್ದ ಕೊರೋನಾ ಇಂದು ಮೊದಲ ಬಾರಿಗೆ ದ್ವಿಶತಕ ಬಾರಿಸಿದೆ. ಇಂದು ಒಟ್ಟೂ 213 ಕೊರೋನಾ ಪ್ರಕರಣಗಳು ದೃಢ ಪಟ್ಟಿದ್ದು ಇದು ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಂದೇ ದಿನ ದೃಢಪಟ್ಟ ಅತೀ ಹೆಚ್ಚಿನ ಪ್ರಕರಣಗಳಾಗಿವೆ.

ಇಂದು ಜಿಲ್ಲಾ ಕೇಂದ್ರ ಕಾರವಾರದಲ್ಲೇ ಅತೀ ಹೆಚ್ಚು 52 ಪ್ರಕರಣಗಳು ಪತ್ತೆಯಾದರೆ ಶಿರಸಿಯಲ್ಲಿ 48 ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ ಯಲ್ಲಾಪುರ 43, ಕುಮಟಾ 16, ಸಿದ್ದಾಪುರ 13, ಅಂಕೋಲಾ ಹಾಗೂ ಹೊನ್ನಾವರಗಳಲ್ಲಿ ತಲಾ 11, ಹಳಿಯಾಳ 9, ಮುಂಡಗೋಡ 5, ಭಟ್ಕಳ 4 ಹಾಗೂ ಜೋಯಿಡಾ 1 ಪ್ರಕರಣಗಳು ದಾಖಲಾಗಿವೆ.

ಈ ಮೂಲಕ ಜಿಲ್ಲೆಯ ಒಟ್ಟೂ ಸೋಂಕಿತರ ಸಂಖ್ಯೆ 5761ಕ್ಕೆ ತಲುಪಿದ್ದು ಇವರಲ್ಲಿ 4201 ಸೋಂಕಿತರು ಈಗಾಗಲೇ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನು 1504 ಸಕ್ರಿಯ ಪ್ರಕರಣಗಳಿದ್ದು ಇವರಲ್ಲಿ 864 ಮಂದಿ ವಿವಿಧ ಕೋವಿಡ್ ವಾರ್ಡ್ಗಳಲ್ಲಿ ಹಾಗೂ 640 ಸೋಂಕಿತರು ಹೋಂ ಯಸೋಲೇಶನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 56 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.